ನಿನ್ನೆಯಷ್ಟೇ ನಿರ್ದೇಶಕ, ನಟ ಕರಣ್ ಜೋಹಾರ್ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡವರಿಗೆ ಕೊರೋನಾ ಶಾಕ್ ಸುದ್ದಿ ಪ್ರಕಟವಾಗಿತ್ತು. ಇದೀಗ ಒಬ್ಬೊಬ್ಬರಿಗೆ ಕೋವಿಡ್ ದೃಢವಾಗುತ್ತಿದೆ. ಶಾರುಖ್ ಖಾನ್ ಸೇರಿದಂತೆ ಹಲವು ನಟ ನಟಿಯರಿಗೆ ಕೋವಿಡ್ ದೃಢವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಪಾರ್ಟಿಯಲ್ಲಿ ಪಾಲ್ಗೊಂಡ ಬಹುತೇಕರು ಕೋವಿಡ್ ಟೆಸ್ಟ್ಗೆ ಒಳಗಾಗಿದ್ದಾರೆ. ಇದನ್ನು ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ
ಕರಣ್ ಜೋಹಾರ್ ತಮ್ಮ 50ನೇ ವರ್ಷದ ಹುಟ್ಟು ಹಬ್ಬಕ್ಕೆ ಬಾಲಿವುಡ್ ನ ಸಾಕಷ್ಟು ತಾರೆಯರು ಆಹ್ವಾನಿಸಿದ್ದರು. ಕನ್ನಡದ ನಟಿ ರಶ್ಮಿಕಾ ಮಂದಣ್ಣ, ದಕ್ಷಿಣದ ತಾರೆಯರಾದ ವಿಜಯ್ ದೇವರಕೊಂಡ, ಸಮಂತಾ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು. ಇದೀಗ ಬಹುತೇಕ ತಾರೆಯರಿಗೆ ಕೋವಿಡ್ ಕಂಟಕ ಎದುರಾಗಿದೆ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ
ಈ ಹಿಂದೆ ಬಾಲಿವುಡ್ ನಟಿ ಕತ್ರೀನಾ ಅವರಿಗೆ ಕೋವಿಡ್ ಪಾಸಿಟಿವ್ ಆಗಿದ್ದು ಕೂಡ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರು ವಿಜಯ್ ಸೇತುಪತಿ ಜೊತೆ ನಟಿಸಬೇಕಿದ್ದ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿ ಆಗಿಲ್ಲ ಎನ್ನಲಾಗುತ್ತಿದೆ. ಮತ್ತು ಕರಣ್ ಅವರ ಪಾರ್ಟಿಯಲ್ಲಿ ಕಾಣಿಸಿಕೊಳ್ಳದೇ ಇರುವುದಕ್ಕೂ ಇದೇ ಕಾರಣವಂತೆ. ಇದನ್ನೂ ಓದಿ: ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರ
ಇತ್ತೀಚೆಗಷ್ಟೇ ಬಾಲಿವುಡ್ ಸಿನಿಮಾ ರಂಗ ಚೇತರಿಕೆ ಕಂಡಿತ್ತು. ಹಲವು ಸಿನಿಮಾಗಳು ಕೂಡ ಬಿಡುಗಡೆ ಆಗಿದ್ದವು. ಇದೀಗ ತಾರೆಯರಿಗೆ ಕೋವಿಡ್ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳದಿಂದಾಗಿ ಮತ್ತೆ ಆತಂಕ ಎದುರಾಗಿದೆ.