ಬೆಂಗಳೂರು: ಬ್ಯಾಂಕ್ ಸಿಬ್ಬಂದಿ ಹಾಗೂ ನಕಲಿ ಖಾತೆಗಳ ಜಾಲಕ್ಕೆ ಸಿಲುಕಿ ಉದ್ಯಮಿಯೊಬ್ಬರು 1.5 ಕೋಟಿ ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನ (Bengaluru) ಪೀಣ್ಯ ಪೊಲೀಸ್ (Peenya Police) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೀಣ್ಯದ ಬ್ಯಾಂಕ್ ಶಾಖೆಯೊಂದರಲ್ಲಿ ಅಪ್ರೈಸರ್ ಆಗಿ ಕೆಲಸ ಮಾಡಿಕೊಂಡಿದ್ದ ನಾಗೇಶ್ ಈ ವಂಚನೆ ಎಸಗಿದ ಆರೋಪಿ. ಇದನ್ನೂ ಓದಿ: ಬರಲು ನಮಗೆ ಸಮಯವಿಲ್ಲ- ವಿಡಿಯೋ ಕಾಲ್‌ನಲ್ಲೇ ತಂದೆಯ ಅಂತ್ಯಸಂಸ್ಕಾರ ವೀಕ್ಷಿಸಿದ ಪುತ್ರಿಯರು!
ಆರೋಪಿ ನಾಗೇಶ್ ನಕಲಿ ಖಾತೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾನೆ. ಸುಮಾರು 15 ಖಾತೆಗಳ ಮೂಲಕ ನಕಲಿ ಚಿನ್ನವನ್ನು ಇಟ್ಟು ಒಟ್ಟು 1.53 ಲಕ್ಷ ರೂ. ಚಿನ್ನದ ಸಾಲ ಪಡೆದಿದ್ದ. ತನ್ನ ಸ್ನೇಹಿತರ ಮೂಲಕ ನಕಲಿ ಚಿನ್ನವನ್ನು ಅಡಮಾನ ಇಡಿಸಿ ಈ ಸಾಲ ಪಡೆದುಕೊಳ್ಳುತ್ತಿದ್ದ. ಆಧರೆ ಈ ನಕಲಿ ಚಿನ್ನದ ಸರಗಳಿಗೆ ಕೊಂಡಿ ಮಾತ್ರ ಅಸಲಿ ಚಿನ್ನವಿರುತ್ತಿತ್ತು.
ಬ್ಯಾಂಕ್ ಆಡಿಟಿಂಗ್ ಮಾಡಿದಾಗ ನಾಗೇಶ್‌ನ ಈ ಕೃತ್ಯ ಬೆಳಕಿಗೆ ಬಂದಿದೆ. ಹಣ ಮರಳಿಸದಿದ್ದರೆ ಜೈಲಿಗೆ ಹಾಕುವುದಾಗಿ ಬ್ಯಾಂಕ್ ಅಧಿಕಾರಿಗಳು ಆರೋಪಿ ನಾಗೇಶ್‌ಗೆ ಭಯ ಹುಟ್ಟಿಸಿದ್ದಾರೆ. ವಂಚನೆ ಪ್ರಕರಣದಿಂದ ಬಚಾವ್ ಆಗಲು ಆರೋಪಿ ನಾಗೇಶ್, ಸ್ನೇಹಿತರ ಮೂಲಕ ಉದ್ಯಮಿ ಜಗದೀಶ್ ಅವರನ್ನು ಪರಿಚಯ ಮಾಡಿಕೊಂಡು ಮಕ್ಮಲ್ ಟೋಪಿ ಹಾಕಿದ್ದಾನೆ. ಇದನ್ನೂ ಓದಿ: Typhoon Dolphin | ಕೇರಳಕ್ಕೆ ಆರೆಂಜ್ ಅಲರ್ಟ್ ಘೋಷಣೆ, ದಕ್ಷಿಣ ಕರ್ನಾಟಕದಲ್ಲೂ ಭಾರೀ ಮಳೆ
ಬ್ಯಾಂಕ್‌ನಲ್ಲಿ ಕಡಿಮೆ ಬೆಲೆಗೆ ಚಿನ್ನವಿಟ್ಟಿದ್ದು ಹರಾಜಿಗೆ ಬಂದಿದೆ. ಈಗಿನ ಮಾರುಕಟ್ಟೆ ಬೆಲೆಗೆ ನಿಮಗೆ 40 ಲಕ್ಷ ರೂ. ಲಾಭ ಬರುತ್ತದೆ ಮತ್ತು ಅವರು ಚಿನ್ನ ಬಿಡಿಸಿಕೊಳ್ಳುವುದಿಲ್ಲ ಎಂದು ನಂಬಿಸಿದ್ದಾನೆ. ವಂಚಕನ ಮಾತನ್ನು ನಂಬಿದ ಉದ್ಯಮಿ ಜಗದೀಶ್ 1.53 ಕೋಟಿ ರೂ. ಹಣ ನೀಡಿದ್ದಾರೆ. ಉದ್ಯಮಿಯಿಂದ ಹಣ ಪಡೆದ ಆರೋಪಿ ಅದನ್ನು ಬ್ಯಾಂಕ್‌ಗೆ ಕಟ್ಟಿ ಎಸ್ಕೇಪ್ ಆಗಿದ್ದಾನೆ.
ನಂತರ ಮೋಸಹೋಗಿರುವುದನ್ನು ಅರಿತ ಜಗದೀಶ್ ಅವರು ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ ಆರೋಪಿ ನಾಗೇಶ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.ಇದನ್ನೂ ಓದಿ: 3 ಕೋಟಿ ರೂ. ವಂಚನೆ ಕೇಸ್ – ಸಲ್ಮಾನ್ ಖಾನ್, ಸಹೋದರಿಗೆ ಕೋರ್ಟ್ ಸಮನ್ಸ್ ಜಾರಿ

