ಜೈಪುರ: ಸಾವರ್ಕರ್ ಬ್ರಿಟಿಷರ ಮುಂದೆ 5 ಬಾರಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದು ಸತ್ಯ ಎಂದು ಸಾವರ್ಕರ್ ಮರಿಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ ಹೇಳಿರೋದಾಗಿ ವರದಿಯಾಗಿದೆ.
ಈ ಬಗ್ಗೆ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್, ಸಾವರ್ಕರ್ ವೀರನೂ ಅಲ್ಲ, ಶೂರನೂ ಅಲ್ಲ, ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವರು ಎಂದು ಸ್ವತಃ ಮರಿಮೊಮ್ಮಗನೇ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ವಿಧಾನಸಭಾ ಚುನಾವಣೆ ಫಲಿತಾಂಶ – ಕೇರಳದಲ್ಲಿ ವಿಜಯೋತ್ಸವಕ್ಕೆ ಬಿರಿಯಾನಿ, ಲಡ್ಡು ತಯಾರಿ
ಸಾವರ್ಕರ್ ಮುಖವಾಡದ ಜೊತೆಜೊತೆಯಲ್ಲೇ ಸಂಘಪರಿವಾರ ಹಾಗೂ ಬಿಜೆಪಿಯ ಮುಖವಾಡವೂ ಕಳಚುತ್ತದೆ. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಇತಿಹಾಸವನ್ನು ತಿರುಚುವ ಕೈಗಳು ಯಾವಾಗಲೂ ನಡುಗುತ್ತವೆ. ಆದರೆ ಸತ್ಯವನ್ನು ಹಿಡಿದ ಕೈಗಳು ಎಂದಿಗೂ ತಲೆಬಾಗುವುದಿಲ್ಲ ಎಂಬುದನ್ನು ಬಿಜೆಪಿ ನಾಯಕರುಗಳು, ವಾಟ್ಸಪ್ ಯೂನಿವರ್ಸಿಟಿಯ ಮಬ್ಭಕ್ತರು ಅರ್ಥಮಾಡಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: Exclusive | ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್‌ಗೆ ನನ್ನ ಸಾಮರ್ಥ್ಯ ಗೊತ್ತಿದೆ: ಪರಮೇಶ್ವರ್

