ಬೆಂಗಳೂರು: ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾ ತಮ್ಮ ಭಾವಿ ಪತಿಯ ಜೊತೆಗೆ ತಮ್ಮ ಊರು ಶಿರ್ವಗೆ ಹೋಗಿ ನಿಸರ್ಗದ ತಪ್ಪಲಿನಲ್ಲಿ ನಿಂತು ಫೋಟೋಗೆ ಪೋಸ್ ನೀಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಶುಭಾ ಪೂಂಜಾ ಬಿಗ್ಬಾಸ್ ಮುಗಿದ ನಂತರ ಜಾಲಿಮೂಡ್ನಲ್ಲಿ ಇದ್ದಾರೆ. ತಮ್ಮ ಭಾವಿ ಪತಿ ಜೊತೆಗೆ ಗೋವಾಕ್ಕೆ ಹೋಗಿ ಬಂದಿದ್ದರು. ಆದರೆ ಇದೀಗ ಅವರು ತಮ್ಮ ಊರಿಗೆ ಭಾವಿ ಪತಿ ಸುಮಂತ್ ಬಿಲ್ಲವ ಜೊತೆಗೆ ಹೋಗಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ರಮೇಶ್ ಕುಮಾರ್ ವಿರುದ್ಧ ಜೆ.ಪಿ ನಗರ ಎಎಸ್ಐ ಗರಂ
View this post on Instagram
ಕೊನೆಗೆ ಮನೆಗೆ, ನನ್ನ ಮನೆ, ನಮ್ ಊರು, ಶಿರ್ವ, ಉಡುಪಿ ಎಂದು ಬರೆದುಕೊಂಡು ಸಿಸರ್ಗದ ತಪ್ಪಲಿನಲ್ಲಿರುವ ಅವರ ಮನೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರ ಮುದ್ದಾದ ಕೆಲವು ಫೋಟೋ ಮತ್ತು ತಮ್ಮ ಭಾವಿ ಪತಿ ಜೊತೆಗೆ ಪೋಸ್ ಕೊಟ್ಟಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡು ನಮ್ಮ ಊರ ಮಳೆ ಮತ್ತು ನಮ್ಮನೆ ಎಂದು ಬರೆದುಕೊಂಡಿದ್ದಾರೆ. ಗುಂಡಮ್ಮ ಚೆನ್ಣಾಗಿ ಕಾಣುತ್ತಿದ್ದೀರ, ನಿಮ್ಮ ಮನೆ ತುಂಬಾ ಚೆನ್ನಾಗಿದೆ. ನಾವು ನಿಮ್ಮ ಮನೆಯನ್ನು ನೋಡಬೇಕು ಎನ್ನಿಸುತ್ತಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
View this post on Instagram
ಶೂಭಾ ಪೂಂಜಾ ಬಿಗ್ಬಾಸ್ ಮನೆಯಿಂದ ಬರುತ್ತಿದ್ದಂತೆ ಭಾವಿ ಪತಿಯ ಜೊತೆಗೆ ಗೋವಾ ಎಂದು ಟ್ರಿಪ್ ಮಾಡಿದ್ದರು, ಇದೀಗ ಅವರ ಊರಿಗೆ ಹೋಗಿದ್ದಾರೆ. ಮಳೆಯನ್ನು ಹೆಚ್ಚಾಗಿ ಇಷ್ಟ ಪಡುವ ಶುಭಾ ತಮ್ಮ ಊರಲ್ಲಿ ಜಿಟಿ ಜಿಟಿ ಮಳೆಯ ಸಮಯದಲ್ಲಿಯೆ ಎಂಟ್ರಿಕೊಟ್ಟಿದ್ದಾರೆ. ಮಳೆಯನ್ನು ನೆನೆಯುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸುವ ಅವಕಾಶ ಶುಭಾ ಅವರಿಗೆ ಬಂದಿವೆ.