ಹೈದರಾಬಾದ್: ತನ್ನನ್ನು ಟ್ರೋಲ್ ಮಾಡಿದವರಿಗೆ ತಮ್ಮ ಮಧ್ಯದ ಬೆರಳು ತೋರಿಸಿ ಟಾಲಿವುಡ್ ನಟಿ ಸಮಂತಾ ಬಾಯಿ ಮುಚ್ಚಿಸಿದ್ದಾರೆ.
ನಾಗಚೈತನ್ಯ ಹಾಗೂ ಸಮಂತಾ ಸ್ಪೇನ್ನಲ್ಲಿರುವ ಇಬಿಝಾದಲ್ಲಿ ತಮ್ಮ ರಜೆಯ ದಿನಗಳನ್ನು ಕಳೆಯುತ್ತಿದ್ದಾರೆ. ಈ ವೇಳೆ ಸಮಂತಾ ಸ್ಪೇನ್ನಲ್ಲಿ ತೆಗೆದ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸಮಂತಾ ಅವರ ಈ ಫೋಟೋ ನೋಡಿದ ಅವರ ಅಭಿಮಾನಿಗಳು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಸಮಂತಾ ಸ್ಪೇನ್ನಲ್ಲಿ ಕೆಂಪು ಬಣ್ಣ ಫ್ಲೋರಲ್ ಕೋ-ಆರ್ಡ್ ಕ್ರಾಪ್ ಟಾಪ್ ಧರಿಸಿ ಅದಕ್ಕೆ ಶಾರ್ಟ್ ಸ್ಕರ್ಟ್ ಧರಿಸಿದ್ದರು. ಈ ಉಡುಪಿನಲ್ಲಿರುವ ಫೋಟೋವನ್ನು ಸಮಂತಾ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದರು. ಆಗ ಅಭಿಮಾನಿಗಳು ಸಮಂತಾ ನಿನಗೆ ಮದುವೆಯಾಗಿದೆ ಸರಿಯಾದ ಉಡುಪು ಧರಿಸು ಎಂದು ಟ್ರೋಲ್ ಮಾಡಿದ್ದಾರೆ.
ಅಭಿಮಾನಿಗಳು ಟ್ರೋಲ್ ಮಾಡಲು ಶುರು ಮಾಡಿದಾಗ ಸಿಟ್ಟುಗೊಂಡ ಸಮಂತಾ ತನ್ನ ಇನ್ಸ್ಟಾಗ್ರಾಂನಲ್ಲಿ, “ಮದುವೆಯಾದ ಮೇಲೆ ಹೇಗೆ ಇರಬೇಕು ಎಂದು ಹೇಳುವವರಿಗೆ ಮಧ್ಯದ ಬೆರಳು ತೋರಿಸುವ ಫೋಟೋ ಹಾಕಿ ನಂತರ ಥ್ಯಾಂಕ್ಯೂ” ಎಂದು ಮತ್ತೆ ಪೋಸ್ಟ್ ಮಾಡಿದ್ದಾರೆ.
ಸದ್ಯ ಸಮಂತಾ “ಸೂಪರ್ ಡಿಲಕ್ಸ್” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ತಯಾಗರಾಜನ್ ಕುಮಾರರಾಜ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ವಿಜಯ್ ಸೇತುಪತಿ ಹಾಗೂ ತ್ರಿಷಾ ಕೃಷ್ಣನ್ ಕೂಡ ಕಾಣಿಸಿಕೊಳ್ಳಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv