ಮಾಸ್ಕೋ: ಚಂದ್ರನ ಅಂಗಳಕ್ಕೆ ರಷ್ಯಾ (Russia) ಕಳುಹಿಸಿರುವ ಲೂನಾ-25 (Luna-25) ಚಂದ್ರನ ಕಕ್ಷೆ ಪ್ರವೇಶಿಸಿದ ನಂತರ ಚಂದ್ರನ ಮೇಲ್ಮೈನ (Moon Surface) ಸೆರೆಹಿಡಿದ ಮೊದಲ ಚಿತ್ರವನ್ನು ಕಳುಹಿಸಿದೆ. ಈ ಕುರಿತು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಸ್ಮಾಸ್ ಮಾಹಿತಿ ಹಂಚಿಕೊಂಡಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಝೀಮನ್ ಕುಳಿ ಚಿತ್ರವನ್ನು ತೆಗೆಯಲಾಗಿದೆ. ‘ಡಾರ್ಕ್ ಸೈಡ್’ ಎಂದೂ ಕರೆಯಲ್ಪಡುವ ಈ ಭಾಗವು ಚಂದ್ರನ ಅರ್ಧಗೋಳವಾಗಿದ್ದು, ಭೂಮಿಯ ನೋಟದಿಂದ ಶಾಶ್ವತವಾಗಿ ಮರೆಯಾಗಿದೆ. ಇದನ್ನೂ ಓದಿ: ಯುಎಸ್ ಅಧ್ಯಕ್ಷೀಯ ಸ್ಥಾನಕ್ಕೆ ಭಾರತೀಯ ಅಮೆರಿಕನ್ ಸ್ಪರ್ಧೆ – ಎಲೋನ್ ಮಸ್ಕ್ ಶ್ಲಾಘನೆ
Advertisement
Advertisement
ಈ ಕುಳಿ ಭೂವೈಜ್ಞಾನಿಕವಾಗಿ ಕುತೂಹಲಕಾರಿ ತಾಣವಾಗಿದೆ. ಹೊಸ ಚಿತ್ರಗಳು ಈ ಕುಳಿಯ ಬಗ್ಗೆ ಅಮೂಲ್ಯವಾದ ಹೆಚ್ಚುವರಿ ಮಾಹಿತಿ ಒದಗಿಸುತ್ತವೆ.
Advertisement
ಸೋವಿಯತ್ ಒಕ್ಕೂಟದ ಲೂನಾ-3 ಬಾಹ್ಯಾಕಾಶ ನೌಕೆಯು ಅಕ್ಟೋಬರ್ 1959 ರಲ್ಲಿ ಚಂದ್ರನ ಮೇಲ್ಮೈನ ಚಿತ್ರವನ್ನು ವಿಶ್ವದಲ್ಲೇ ಮೊದಲ ಬಾರಿಗೆ ರವಾನಿಸಿತ್ತು. ಲೂನಾ-25 ಮಿಷನ್ ಚಂದ್ರನ ಪರಿಶೋಧನೆಯ ಈ ಪರಂಪರೆಯನ್ನು ಮುಂದುವರಿಸಿದೆ. ಇದನ್ನೂ ಓದಿ: 21 ಚರ್ಚ್ಗಳನ್ನು ಧ್ವಂಸಗೊಳಿಸಿದ 600 ಜನರ ಮೇಲೆ ಕೇಸ್ – 135 ಆರೋಪಿಗಳನ್ನು ಬಂಧಿಸಿದ ಪಾಕ್ ಪೊಲೀಸರು
Advertisement
ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್ (IKI RAS)ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾದ STS-L ದೂರದರ್ಶನ ಸಂಕೀರ್ಣ ಬಳಸಿಕೊಂಡು ಚಿತ್ರಗಳನ್ನು ಸೆರೆಹಿಡಿಯಲಾಗಿದೆ.
ಭಾರತದ ಚಂದ್ರಯಾನ-3 ಗಿಂತ ಮೊದಲು ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ರಷ್ಯಾದ ಲೂನಾ-25 ಲ್ಯಾಂಡ್ ಆಗಲಿದೆ ಎಂದು ತಿಳಿಸಲಾಗಿದೆ. ಲೂನಾ-25 ಉಡಾವಣೆಗೊಂಡ ಕೆಲವೇ ದಿನಗಳಲ್ಲಿ ಚಂದ್ರನ ಕಕ್ಷೆ ತಲುಪಿದೆ. ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ಲಘು ವಿಮಾನ ಪತನ – 10 ಮಂದಿ ದುರ್ಮರಣ
Web Stories