DistrictsKarnatakaLatestMain PostYadgir

ತಾಕತ್ತಿದ್ರೆ ಎಲ್ಲಾ ಮುಸ್ಲಿಂ ಮಹಿಳೆಯರಿಗೂ ಹಿಜಬ್ ತೊಡಿಸಿ – RSS ಮುಖಂಡ ಡಾ.ಹಣಮಂತ ಮಳಲಿ ಸವಾಲು

- ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕಿಡಿ

Advertisements

ಯಾದಗಿರಿ: ತಾಕತ್ತಿದ್ದರೆ ಎಲ್ಲರಿಗೂ ಹಿಜಬ್ ತೊಡಿಸಿ ಎಂದು ಆರ್‍ಎಸ್‍ಎಸ್ (RSS) ಮುಖಂಡ ಡಾ.ಹಣಮಂತ ಮಳಲಿ ಮುಸ್ಲಿಮರಿಗೆ ಸವಾಲೆಸೆದಿದ್ದಾರೆ.

ಯಾದಗಿರಿಯ ಸೈದಾಪುರದಲ್ಲಿ ಹಿಜಬ್ (Hijab) ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಸಿನಿಮಾ ನಟಿಯರಿಗೆ, ಶಾರೂಖ್ ಖಾನ್ ಮಗಳಿಗೆ ಹಿಜಬ್ ತೋಡಿಸೋಕೆ ಗಂಡಸ್ತನ ಇಲ್ವಾ..? ಬಡವರ ಮಕ್ಕಳಿಗೆ ಹಿಜಬ್ ಹಾಕಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡ್ತಿದ್ದೀರಿ. ಕಾನೂನು ಪಾಲನೆ ಮಾಡಿ ಅಂತ ಕೋರ್ಟ್ (Court) ಹೇಳಿದೆ. ಶಾಲೆಯಲ್ಲಿ ಸಮವಸ್ತ್ರ ಅಂತ ಕೋರ್ಟ್ ಆದೇಶ ನೀಡಿದೆ. ಹಿಜಬ್ ನಿಂದಾಗಿ ಹಿಂದೂಗಳು ಎಚ್ಚರ ಆಗಿದ್ದಾರೆ. ಹಿಜಬನ್ನು ಮನೆ ಅಥವಾ ಅವರ ಅಪ್ಪನ ಮುಂದೇನಾದರೂ ಹಾಕೊಳ್ಳಲಿ. ತಾಕತ್ ಇದ್ರೆ ನಿಮ್ಮ ಎಲ್ಲಾ ಮಹಿಳೆಯರಿಗೆ ಹಿಜಬ್ ಹಾಕಿಸಿ ಎಂದು ವಾಗ್ದಾಳಿ ನಡೆಸಿದರು.

ವ್ಯಾಪಾರಕ್ಕೆ ಮುಸಲ್ಮಾನರಿಗೆ ನಿರ್ಬಂಧಕ್ಕೆ ಹಣಮಂತ ಮಳಲಿ ಸಮರ್ಥನೆ ನೀಡಿದ್ದಾರೆ. ಮಾರ್ಕೆಟ್ ಬಂದ್ ಮಾಡಿ ಹಿಂದೂಗಳಿಗೆ ತೊಂದ್ರೆ ಕೊಡೋದು ಇನ್ಮುಂದೆ ನಡೆಯಲ್ಲ. ಇದರಿಂದಾಗಿ ನಿಮ್ಮ ವ್ಯಾಪಾರ ನಿರಂತರ ಬಂದ್ ಆಗುತ್ತೆ. ನೀವೇ(ಮುಸಲ್ಮಾನರೇ) ಹೇಳಿಕೊಟ್ಟಿದ್ದು ಹಿಂದೂಗಳ ಹತ್ರ ಖರೀದಿ ಮಾಡಬೇಡಿ ಅಂತ. ಮೊದಲು ಹೇಳಿಕೊಟ್ಟಿದ್ದು ನೀವೇ, ಈಗ ಹಿಂದೂಗಳು ಮಾಡ್ತಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಂದೂಗಳನ್ನು ಒಂದು ಮಾಡಲು ಹೊರಟರೆ ದಕ್ಷಿಣ ಕರ್ನಾಟಕ ಬಿಜೆಪಿ ಪಾಲಿಗೆ ಬಂದ್

ಈ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನು ಬರುವವರೆಗೂ ನಾವು ಜನಸಂಖ್ಯೆ ನಿಯಂತ್ರಣ ಮಾಡಬಾರದು. ಎರಡು ಇದ್ದವರು ಮೂರು, ಮೂರು ಇದ್ದವರು ನಾಲ್ಕು, ನಾಲ್ಕು ಇದ್ದವರು ಮಕ್ಕಳನ್ನು ಮಾಡಿ. ಮಕ್ಕಳನ್ನು ಹಡೆಯುವ ತಾಕತ್ ಇಲ್ಲದವರು ಮತಾಂತರ ಮಾಡ್ತಿದ್ದಾರೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಇನ್ಮುಂದೆ ನಡೆಯಲ್ಲ. ಮದುವೆ ವಯಸ್ಸಿಗೆ ಬಂದವರು 23 ಕೋಟಿ ಹಿಂದೂ ತರುಣರಿದ್ದಾರೆ ಎಂದು ಮಳಲಿ ಇದೇ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ ಬದಲಿಗೆ `ಲವ್ ಕೇಸರಿ’ ಟ್ರೆಂಡ್ ಸೃಷ್ಟಿಸಲು ಶ್ರೀರಾಮಸೇನೆ ಕರೆ

ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ಕಲ್ಲಂಗಡಿ ಹೊಡೆದಿದ್ದಾರಂತೆ, ಅವರಿಗೆ 10 ಸಾವಿರ ರೂ. ಕೊಟ್ಟಿದ್ದಾರೆ. ಅವರೇನು ಇವರ ಅಕ್ಕನ ಮಕ್ಕಳಾ..? ನಿಮಗೆ ಗಂಡಸ್ತನ ಇದ್ರೆ ಕಲ್ಲಂಗಡಿ ಅಷ್ಟೇ ಅಲ್ಲ, ಕಾಶ್ಮೀರದಲ್ಲಿ ನಮ್ಮ ಹಿಂದೂಗಳ ತಲೆ ಹೊಡೆದಿದ್ದಾರಲ್ವಾ. ಈ ವಿಚಾರ ನಿಮಗೆ ಗೊತ್ತಿಲ್ಲವೇನೋ. ಪಾಕಿಸ್ತಾನ್ ಜಿಂದಾಬಾದ್ ಅಂದವರಿಗೆ ಇವರು ಬಹುಮಾನ ಕೊಟ್ಟು ಬರ್ತಾರೆ ಎಂದು ಗರಂ ಆದರು.

Leave a Reply

Your email address will not be published.

Back to top button