Bengaluru CityCinemaDistrictsKarnatakaLatestMain PostMysuruSandalwood

ನನ್ನ ತಂದೆ-ತಾಯಿ ಮೆಚ್ಚುವ ರೀತಿ ನಾನು ಕಾಲೇಜು ಜೀವನ ಕಳೆಯಲಿಲ್ಲ: ರಾಕಿಂಗ್‌ ಸ್ಟಾರ್

ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿರುವ ರಾಕಿಂಗ್ ಸ್ಟಾರ್ ಯಶ್ ಮೈಸೂರಿನ ಯುವಜನೋತ್ಸವ ಕಾರ್ಯದಲ್ಲಿ ಭಾಗಿದ್ದಾರೆ. ಈ ವೇಳೆ ಗುರಿ, ಸಾಧನೆ, ಆತ್ಮ ವಿಶ್ವಾಸದ ಬಗ್ಗೆ ಮಾತನಾಡಿದ್ದಾರೆ. ಶಿಕ್ಷಣ ಪಡೆದ ವಿಶ್ವ ವಿದ್ಯಾನಿಲಯದಲ್ಲಿ ರಾಕಿಂಗ್ ಯಶ್‌ಗೆ ಸನ್ಮಾನ ಕೂಡ ಮಾಡಲಾಗಿದೆ.

ಅರಮನೆ ನಗರಿ ಮೈಸೂರಿನಲ್ಲಿ ಯುವಜನೋತ್ಸವ ಕಾರ್ಯಕ್ರಮದ ಸಡಗರ ಜೋರಾಗಿದ್ದು, ಈ ಸಂಭ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಸಾಕ್ಷಿಯಾಗಿದ್ದಾರೆ. ಈ ವೇಳೆ ಸಿಎಂ ಬೊಮ್ಮಾಯಿ, ಅಶ್ವತ್ಥ ನಾರಾಯಣ್, ಯೂನಿವರ್ಸಿಟಿ ಕುಲಪತಿಗಳು ಭಾಗಿಯಾಗಿದ್ದಾರೆ. ಈ ವೇಳೆ ಸಭೆಯನ್ನ ಉದ್ದೇಶಿಸಿ ಯಶ್ ಮಾತನಾಡಿದ್ದಾರೆ.

ಇದು ನನ್ನೂರು ಮೈಸೂರು,‌ ನನ್ನ ವಿದ್ಯಾರ್ಥಿ ಜೀವನದಲ್ಲಿ ಗೊಂದಲದಲ್ಲಿ, ಯಾಮಾರಿಕೊಂಡು ಉಡಾಫೆಯಲ್ಲಿ ಬಾಲ್ಯ ಕಳೆದೆ. ನನ್ನ ತಂದೆ ತಾಯಿ ಮೆಚ್ಚುವ ರೀತಿ ನಾನು ಬಾಲ್ಯ ಮತ್ತು ಕಾಲೇಜು ಜೀವನ ಕಳೆಯಲಿಲ್ಲ. ಒಳ್ಳೆಯದು ಮಾಡ್ತೀನಿ ಅಂತಾ ಯೋಚಿಸಿ ನಿಜಕ್ಕೂ ಒಳ್ಳೆಯದಾಗುತ್ತೆ. ನಮ್ಮೊಳಗೆ ಒಂದು ಸರಕಾರ ಇರಬೇಕು. ಆ ಸರಕಾರಕ್ಕೆ ಒಂದು ಗುರಿ ಇದ್ದರೆ ನಾವು ನಮ್ಮ ನಮ್ಮ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಬಹುದು. ಸಾಧನೆ ಮಾಡಬೇಕು ಅಂತಾ ಎಲ್ಲವನೂ ತ್ಯಾಗ ಮಾಡಬೇಕು ಎಂದು ಹೇಳುವುದಿಲ್ಲ. ಕಾಲೇಜ್ ದಿನಗಳಲ್ಲಿ ಮಜಾನೂ ಮಾಡಿ, ಚಿಕ್ಕ ಚಿಕ್ಕ ಖುಷಿ ಅನುಭವಿಸಿ. ಸ್ನೇಹಿತರ ಜತೆ ಜೋಕ್ ಮಾಡಿ ನಗುನಗುತ್ತಾ ಬದುಕಿ ಎಂದು ಯಶ್ ಮಾತನಾಡಿದ್ದಾರೆ. ಇದನ್ನೂ ಓದಿ:`ರಾಕಿ ಭಾಯ್’ ಮನೆಯಲ್ಲಿ ರಾಖಿ ಹಬ್ಬದ ಸಂಭ್ರಮ

ಬಳಿಕ ನಟ ಯಶ್ ಅವರ ಸಾಧನೆಯನ್ನ ಗುರುತಿಸಿ, ಸಿಎಂ ಬೊಮ್ಮಾಯಿ, ಅಶ್ವತ್ಥ ನಾರಾಯಣ್, ಯೂನಿವರ್ಸಿಟಿ ಕುಲಪತಿಗಳಿಂದ ಯಶ್‌ಗೆ ಸನ್ಮಾನ ಮಾಡಲಾಯಿತು.

Live Tv

Leave a Reply

Your email address will not be published.

Back to top button