ಪಾಟ್ನಾ: ನಿತೀಶ್ ಕುಮಾರ್ (Nitish Kumar) ನೇತೃತ್ವದ ಮಹಾಘಟಬಂದನ್ ಸರ್ಕಾರವು ಬಿಹಾರದ ಸಸಾರಾಮ್ ಮತ್ತು ಷರೀಫ್ ಪಟ್ಟಣಗಳಲ್ಲಿ ಕೋಮು ಗಲಭೆ, ಹಿಂಸಾಚಾರ ತಡೆಗಟ್ಟುವಲ್ಲಿ ವಿಫಲವಾಗಿದೆ. ಮುಂದಿನಬಾರಿ ಇಲ್ಲಿ ಬಿಜೆಪಿ ಸರ್ಕಾರವನ್ನು (BJP Government) ಅಧಿಕಾರಕ್ಕೆ ತಂದರೆ ಗಲಭೆಕೋರರನ್ನ ತಲೆಕೆಳಗಾಗಿ ನೇತುಹಾಕುವ ಮೂಲಕ ಗಲ್ಲಿಗೇರಿಸಲಾಗುವುದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಗುಡುಗಿದ್ದಾರೆ.
Advertisement
ಬಿಹಾರದ (Bihar) ನವಾಡ ಜಿಲ್ಲೆಯ ಹಿಸುವಾದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, 2025ಕ್ಕೆ ಬಿಹಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಗಲಭೆಕೋರರನ್ನ ತಲೆಕೆಳಗಾಗಿ ಗಲ್ಲಿಗೇರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಕ್ಕೆ ಅಮೆರಿಕ, ಜರ್ಮನಿ ಸ್ಪಂದನೆ ಅನಗತ್ಯ: ಕೇಂದ್ರ ಸಚಿವ ಜೈಶಂಕರ್
Advertisement
ಈಗಾಗಲೇ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ 40 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಖಚಿತವಾಗಿದೆ. ಬಿಹಾರದ ಜನರು ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸಲು ನಿರ್ಧರಿಸಿದ್ದಾರೆ. ನರೇಂದ್ರ ಮೋದಿ (Narendra Modi) ಅವರು 3ನೇ ಅವಧಿಗೆ ಪ್ರಧಾನಿಯಾಗಾಬೇಕೆಂದು ದೇಶದ ಜನ ಬಯಸಿದ್ದಾರೆ. ಇದರಿಂದ ನಿತೀಶ್ ಕುಮಾರ್ ಪ್ರಧಾನಿಯಾಗಬೇಕೆಂಬ ಕನಸಿನಿಂದ ದೂರ ಸರಿದಿದ್ದಾರೆ ಎಂದು ಕುಟುಕಿದರು. ಇದನ್ನೂ ಓದಿ: ಮೋದಿ ಹೊರತುಪಡಿಸಿ ಯಾರೊಬ್ಬರು ಶೌಚಾಲಯ ನಿರ್ಮಾಣದ ಅಗತ್ಯತೆ ಬಗ್ಗೆ ಹೇಳಲಿಲ್ಲ – ಕೋವಿಂದ್
Advertisement
Advertisement
ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ದಮನ ಮಾಡುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದಾರೆ. ಆದರೆ ಲಾಲುಪ್ರಸಾದ್ ಯಾದವ್ ಹಾಗೂ ನಿತೀಶ್ ಕುಮಾರ್ ಅವರು ಭಯೋತ್ಪಾದನೆಗೆ ಸಹಾಯ ಮಾಡುವ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.