ಲಕ್ನೋ: ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಗೆ ಹೂವಿನ ಹಾರ ಹಾಕಿ ಅದ್ದೂರಿ ಮೆರವಣಿಗೆ ಮಾಡಿರುವ ಪ್ರಸಂಗ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಹಿಂದೂ ಯುವ ವಾಹಿನಿಯ ಮಾಜಿ ಸದಸ್ಯ ಸುಶೀಲ್ ಪ್ರಜಾಪತಿ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ರಿಲೀಸ್ ಆದ ಆತನನ್ನು ಹೂವಿನ ಹಾರ ಹಾಕಿ ಸ್ವಾಗತಿಸಲಾಯಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಶಿವಮೊಗ್ಗದಲ್ಲಿ ಒಂದೇ ಕುಟುಂಬದ 4 ಮಂದಿ ನಾಪತ್ತೆ
ಜೈಲಿಂದ ಹೊರಬಂದ ಅತ್ಯಾಚಾರ ಆರೋಪಿಗೆ ಚೆಂಡು ಹೂವಿನ ಹಾರ ಹಾಕಿ, ಘೋಷಣೆಗಳನ್ನು ಕೂಗುತ್ತಾ ಹೆಗಲ ಮೇಲೆ ಹೊತ್ತು ಬೆಂಬಲಿಗರು ರೋಡ್ ಶೋ ಮಾಡಿದ್ದಾರೆ. ಘಟನೆಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಆರೋಪಿಯು ವಿದ್ಯಾರ್ಥಿನಿಯನ್ನು ವಕೀಲರಿಗೆ ಪರಿಚಯಿಸುವ ನೆಪದಲ್ಲಿ ಫ್ಲಾಟ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸುಮಾರು ಒಂಬತ್ತು ತಿಂಗಳ ನಂತರ, ಆರೋಪಿಯನ್ನು ಮೇ 17 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಅತ್ಯಾಚಾರ ಆರೋಪಿ ಮೆರವಣಿಗೆ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 50 ಸಾವಿರ ಸಾಲಕ್ಕೆ ತಿಂಗಳಿಗೆ 10,000 ರೂ. ಬಡ್ಡಿ ನೀಡುವಂತೆ ಚಿತ್ರಹಿಂಸೆ – ಮೀಟರ್ ಬಡ್ಡಿ ಶೂಲಕ್ಕೆ ವ್ಯಕ್ತಿ ಆತ್ಮಹತ್ಯೆ

