ಭಾರತದ ಪರ ವಿಶೇಷ ಸಾಧನೆಗೈದ ಜಡೇಜಾ

Public TV
2 Min Read
Ravindra Jadeja 1

ಇಂದೋರ್: ಭಾರತ ಕ್ರಿಕೆಟ್ (Cricket) ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (International Cricket) ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 500 ವಿಕೆಟ್ ಪಡೆದ ಹಾಗೂ 5,000 ರನ್ ಗಳಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

ಇಂದೋರ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ (IND vs AUS) ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ (Test Cricket) ಅವರು ಈ ಸಾಧನೆ ಮಾಡಿದ್ದಾರೆ. ಆಸೀಸ್ ಓಪನರ್ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡುವ ಮೂಲಕ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500ನೇ ವಿಕೆಟ್ ಪಡೆದರು. ಇದನ್ನೂ ಓದಿ: ಮೊದಲ ದಿನವೇ 14 ವಿಕೆಟ್‌ ಪತನ – ಪಿಚ್‌ ವಿರುದ್ಧ ಭಾರೀ ಟೀಕೆ

Ravindra Jadeja 2

ಜಡೇಜಾ ಒಟ್ಟು 298 ಪಂದ್ಯಗಳಲ್ಲಿ ಒಟ್ಟು 503 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲ ಜಡೇಜಾ 298 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 241 ಇನ್ನಿಂಗ್ಸ್‌ಗಳಲ್ಲಿ ಒಟ್ಟು 5,527 ರನ್ ಗಳಿಸಿದ್ದಾರೆ. ಒಟ್ಟು ಮೂರು ಶತಕಗಳು ಮತ್ತು 31 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಲೆಜೆಂಡರಿ ಆಲ್‌ರೌಂಡರ್ ಮತ್ತು ಭಾರತದ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ (Kapil Dev) ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ವಿಕೆಟ್ ಮತ್ತು 5,000 ರನ್ ಗಳಿಸಿದ ಭಾರತದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಕಪಿಲ್ ದೇವ್ 356 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 687 ವಿಕೆಟ್ ಕಬಳಿಸಿದ್ದಾರೆ. 356 ಪಂದ್ಯಗಳನ್ನಾಡಿ ಒಟ್ಟು 9,031 ರನ್ ಗಳಿಸಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ 9 ಶತಕ ಮತ್ತು 41 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇದನ್ನೂ ಓದಿ: ಫಾಲೋ ಆನ್‌ಗೆ ತುತ್ತಾದ್ರೂ 1 ರನ್ ರೋಚಕ ಜಯ – 22 ವರ್ಷದ ಬಳಿಕ ನ್ಯೂಜಿಲೆಂಡ್ ಸಾಧನೆ

kapil dev 1

ಜಡೇಜಾ ಮತ್ತು ಕಪಿಲ್ ದೇವ್ ಅವರಲ್ಲದೆ, ಈ ಸಾಧನೆ ಪಟ್ಟಿಯಲ್ಲಿ ಪಾಕಿಸ್ತಾನದ ವಾಸಿಂ ಅಕ್ರಮ್, ಇಮ್ರಾನ್ ಖಾನ್ ಮತ್ತು ಶಾಹಿದ್ ಅಫ್ರಿದಿ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ನ್ಯೂಜಿಲೆಂಡ್‌ನ ಡೇನಿಯಲ್ ವೆಟ್ಟೋರಿ, ಇಂಗ್ಲೆಂಡ್‌ನ ಇಯಾನ್ ಬೋಥಮ್, ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್ ಮತ್ತು ಜ್ಯಾಕ್ ಕಾಲಿಸ್ ಮತ್ತು ಶ್ರೀಲಂಕಾದ ಚಮಿಂಡಾ ವಾಸ್ ಕೂಡ ಇದ್ದಾರೆ.

ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 33.2 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಗಿದೆ. ನಂತರ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 54 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 156 ರನ್‌ಗಳಿಸಿದೆ. ಭಾರತದ ಪರವಾಗಿ ಎಲ್ಲಾ 4 ವಿಕೆಟ್‌ಗಳನ್ನು ರವೀದ್ರ ಜಡೇಜಾ ಪಡೆದಿರುವುದು ವಿಶೇಷ.

Share This Article
Leave a Comment

Leave a Reply

Your email address will not be published. Required fields are marked *