ಕನ್ನಡತಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ಮತ್ತು ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ ನಟಿ. ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗೋ ರಶ್ಮಿಕಾ ಈಗ ನನ್ನನ್ನು ರಶ್ ಎಂದು ಕರೆಯಿರಿ ಅಂತಾ ಹೇಳಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ.
ಕನ್ನಡದ `ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ನಟಿ ರಶ್ಮಿಕಾಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಎಲ್ಲಾ ಚಿತ್ರರಂಗದಲ್ಲೂ ರಶ್ಮಿಕಾ ಛಾಪೂ ಮೂಡಿಸುತ್ತಿದ್ದಾರೆ. ಹೊಸ ಬ್ರ್ಯಾಂಡ್ನ್ನು ಪರಿಚಯಿಸುದರಿಂದ ಹಿಡಿದು ಸ್ಟಾರ್ ನಾಯಕರ ಚಿತ್ರಗಳಿಗೆ ಇವರೇ ಬೇಕು ಎನ್ನುವಷ್ಟರ ಮಟ್ಟಿಗೆ ರಶ್ಮಿಕಾ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಇದೀಗ ನನ್ನನ್ನು ರಶ್ ಎಂದು ಕರೆಯಿರಿ ಎಂದಿರೋ ವಿಡಿಯೋವೊಂದು ಬಾರೀ ವೈರಲ್ ಆಗಿದೆ.
ಸಿನಿಮಾ ಸೆಟ್ನಲ್ಲಿ ರಶ್ಮಿಕಾ ಎಂದು ಹೇಳೋಕೆ ತಡವರಿಸುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದು, ರಶ್ಮಿಕಾ ಉದ್ದನೆಯ ಹೆಸರು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನೀವು ಚಿಂತಿಸಬೇಡಿ. ದಯವಿಟ್ಟು ನನ್ನನ್ನು ರಶ್ ಎಂದು ಕರೆಯಿರಿ, ನಾನೇನು ಅಂದುಕೊಳ್ಳುವುದಿಲ್ಲ ಅಂತಾ ರಶ್ಮಿಕಾ ಮನವಿ ಮಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಗ್ರೀನ್ ಕಲರ್ ಗೌನ್ನಲ್ಲಿ ಸಂಜನಾ ಗಲ್ರಾನಿ ಮಿಂಚಿಂಗ್
Rashmika, a long name!
I get you don’t worry ????
Please call me Rush, I wouldn’t mind it at all!????❤️
Catch my new video live on Youtube now! https://t.co/HDH8V2dzdM
— Rashmika Mandanna (@iamRashmika) May 18, 2022
`ಪುಷ್ಪ’ ಬಿಗ್ ಸಕ್ಸಸ್ ನಂತರ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಮತ್ತು ಹಿಂದಿ ಸಿನಿಮಾಗಳು ರಿಲೀಸ್ಗೆ ರೆಡಿಯಿದೆ.