ಕೋಲ್ಕತ್ತಾ: ಬಿಜೆಪಿ (BJP) ಆಡಳಿತದಲ್ಲಿ ಗೂಂಡಾಗಳು, ಗಲಭೆಕೋರರನ್ನ ತಲೆಕೆಳಗೆ ಮಾಡಿ ನೇತು ಹಾಕ್ತೀವಿ ಎಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಿರುದ್ಧ ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ (Mahua Moitra) ತಿರುಗೇಟು ನೀಡಿದ್ದಾರೆ.
ಗುಜರಾತ್ ಪ್ರಕರಣವನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಮಹುವಾ ಅವರು, ಬಿಹಾರದಲ್ಲಿ ಗಲಭೆಕೋರರನ್ನು ತಲೆಕೆಳಗಾಗಿ ಗಲ್ಲಿಗೇರಿಸುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಕೊಲೆಗಾರರು ಮತ್ತು ಅತ್ಯಾಚಾರಿಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತಾರೆ. ಅವರಿಗೆ ಲಡ್ಡು ತಿನ್ನಿಸುತ್ತಾರೆ ಎಂದು ಅಮಿತ್ ಶಾಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಗಲಭೆಕೋರರನ್ನ ತಲೆಕೆಳಗಾಗಿ ನೇತು ಹಾಕ್ತೀವಿ – ಅಮಿತ್ ಶಾ ಗುಡುಗು
ಗುಜರಾತ್‌ನ ಬಿಲ್ಕಿಸ್ ಬಾನೋ ಅತ್ಯಾಚಾರ (Bilkis Bano Rape Case) ಅಪರಾಧಿಗಳ ಬಿಡುಗಡೆ ಪ್ರಕರಣ ಉಲ್ಲೇಖಿಸಿ ಬಿಜೆಪಿ ವಿರುದ್ಧ ಮಹುವಾ ಕಿಡಿಕಾರಿದ್ದಾರೆ. “ಕಳೆದ ವರ್ಷ ಗುಜರಾತ್ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮುಂಚೆ ರಾಜ್ಯ ಸರ್ಕಾರ ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿತು. ಟಿಎಂಸಿಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಹೌರಾದಲ್ಲಿ ನಡೆದ ಶಿವಪುರ ಭಯೋತ್ಪಾದಕ ಘಟನೆಯ ವಿಚಾರವಾಗಿ ಕೇಂದ್ರ ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹೌರಾದಲ್ಲಿ ನಡೆದ ಹಿಂಸಾಚಾರದ ಹಿಂದೆ ಶಾ ಇದ್ದಾರೆಂದು ಹೇಳಿದ್ದರು” ಎಂದು ಮಹುವಾ ತಿಳಿಸಿದ್ದಾರೆ.
ಅಮಿತ್ ಶಾ ಅವರು ಶನಿವಾರ ಬಿಹಾರದಲ್ಲಿ ನಡೆದ ರ‍್ಯಾಲಿಯಲ್ಲಿ, ರಾಮನವಮಿ ಆಚರಣೆಯ ಸಂದರ್ಭದಲ್ಲಿ ರಾಜ್ಯದ ಹಲವಾರು ಪ್ರದೇಶಗಳಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ನಿತೀಶ್ ಕುಮಾರ್ ಸರ್ಕಾರ ವಿಫಲವಾಗಿದೆ. 2025ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂಸಾಚಾರ ನಡೆಸುತ್ತಿರುವ ಗಲಭೆಕೋರರನ್ನು ತಲೆಕೆಳಗಾಗಿ ನೇತುಹಾಕಿ ಗಲ್ಲಿಗೇರಿಸುತ್ತೇವೆ ಎಂದಿದ್ದರು. ಇದನ್ನೂ ಓದಿ: ಮಾನಹಾನಿ ಪ್ರಕರಣ – ಏಪ್ರಿಲ್ 13 ರವರೆಗೂ ರಾಗಾಗೆ ರಿಲೀಫ್
ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಅಮಿತ್ ಶಾ, ರಾಜ್ಯದಲ್ಲಿ ಭಯೋತ್ಪಾದನೆಯನ್ನು ಹರಡಲು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕಾರಣ. ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಎಂದಿಗೂ ಬಿಹಾರದಲ್ಲಿ ಶಾಂತಿಯನ್ನು ತರಲು ಸಾಧ್ಯವಿಲ್ಲ. ಬಿಹಾರವನ್ನು ಶಾಂತಿಯುತ ರಾಜ್ಯವನ್ನಾಗಿ ಮಾಡಲು “ಮಹಾಘಟಬಂಧನ್” ಕಿತ್ತುಹಾಕಬೇಕು ಎಂದು ಜನತೆಗೆ ಕರೆ ನೀಡಿದ್ದರು.