– ಮೇ 3ಕ್ಕೆ ವಿಚಾರಣೆಗೆ ದಿನಾಂಕ ನಿಗದಿ
ಸೂರತ್: ಮಾನಹಾನಿ ಪ್ರಕರಣದಲ್ಲಿ (Defamation Case) ಜೈಲು ಶಿಕ್ಷೆಗೆ ಒಳಪಟ್ಟಿರುವ ಎಐಸಿಸಿ (AICC) ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಸೂರತ್ (Surat) ಜಿಲ್ಲಾ ನ್ಯಾಯಲಯದ ಆದೇಶ ಪ್ರಶ್ನಿಸಿ ಸೆಷನ್ಸ್ ನ್ಯಾಯಲಯಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಮೇಲ್ಮನವಿ ಅರ್ಜಿಯನ್ನು ಮೇ 3 ರಂದು ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ.
Advertisement
Advertisement
ಸೋಮವಾರ ದೆಹಲಿಯಿಂದ ಸಹೋದರಿ ಪ್ರಿಯಾಂಕಾ ಗಾಂಧಿಯೊಂದಿಗೆ ಹೊರಟ ರಾಹುಲ್ ಗಾಂಧಿ ಮಧ್ಯಾಹ್ನ ವೇಳೆಗೆ ಸೂರತ್ ತಲುಪಿ ಕೋರ್ಟ್ ಮುಂದೆ ಹಾಜರಾದರು. ಜಿಲ್ಲಾ ನ್ಯಾಯಲಯ ನೀಡಿದ ಆದೇಶ ರದ್ದು ಮಾಡಬೇಕು, ವಿಚಾರಣೆ ಅಂತ್ಯವಾಗುವವರೆಗೂ ಮಧ್ಯಂತರ ತಡೆ ನೀಡಬೇಕು ಎಂದು ರಾಗಾ ಪರ ವಕೀಲರು ಮನವಿ ಮಾಡಿದರು.
Advertisement
Advertisement
ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಲಯ ಮೇ 3 ರಂದು ವಿಚಾರಣೆ ನಡೆಸಲಾಗುವುದು, ಏಪ್ರಿಲ್ 13ರ ವರೆಗೂ ಜಾಮೀನು ವಿಸ್ತರಿಸಿದೆ ಎಂದು ತಿಳಿಸಿತು. ರಾಹುಲ್ ಗಾಂಧಿ ವಿಚಾರಣೆ ಹಿನ್ನೆಲೆ ಸಾವಿರಾರು ಕಾರ್ಯಕರ್ತರು ಕೋರ್ಟ್ ಆವರಣದಲ್ಲಿ ಜಮಾಯಿಸಿದ್ದರು. ಇದನ್ನೂ ಓದಿ: ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದು ಸಿಬಿಐ ಜವಾಬ್ದಾರಿ: ಮೋದಿ
ರಾಹುಲ್ ಗಾಂಧಿ ವಿಚಾರಣೆ ವೇಳೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಹಿಮಾಚಲ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಸೇರಿದಂತೆ ಇತರ ಹಿರಿಯ ಕಾಂಗ್ರೆಸ್ ನಾಯಕರು ಸೆಷನ್ಸ್ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು.
ಈ ಬಗ್ಗೆ ಮಾತನಾಡಿರುವ ಕಾನೂನು ಸಚಿವ ಕಿರಣ್ ರಿಜಿಜು, ಕಾಂಗ್ರೆಸ್ ನ್ಯಾಯಾಂಗದ ಮೇಲೆ ಅನಾವಶ್ಯಕ ಒತ್ತಡ ಹೇರಲು ಪ್ರಯತ್ನಿಸುತ್ತಿದೆ. ನ್ಯಾಯಲಯದ ಮುಂಭಾಗದಲ್ಲಿ ಘೇರಾವ್ ಹಾಕಲಾಗುತ್ತಿದೆ. ವಿರೋಧ ಪಕ್ಷದ ಸದಸ್ಯರು ರಾಹುಲ್ ಗಾಂಧಿ ಅವರನ್ನು ಸೂರತ್ ಕೋರ್ಟ್‌ಗೆ ಕರೆದೊಯ್ಯುವ ರೀತಿ ಹೀಗೆಯೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಟಿಕೆಟ್ ಹಂಚಿಕೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಮಹೇಶ್ ಕುಮಟಳ್ಳಿ