ಹುಬ್ಬಳ್ಳಿ: ಹಿಜಬ್ ವಿವಾದದ ಹೊತ್ತಲ್ಲೇ ಮಾಜಿ ಸಚಿವ ಜಮೀರ್ ಅಹ್ಮದ್ ವ್ಯಾಖ್ಯಾನ ರಾಷ್ಟ್ರಮಟ್ಟದಲ್ಲಿ ವಿವಾದ ಆಗ್ತಿದೆ.
ಹುಬ್ಬಳ್ಳಿಯಲ್ಲಿ ಮಾತನಾಡಿ, ಬುರ್ಖಾ ಪದ್ಧತಿ ಇಲ್ಲದ ಕಾರಣವೇ ಭಾರತದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಅಂತ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ. ಯುವತಿಯರ ಸೌಂದರ್ಯ ರಕ್ಷಣೆಗೆ ಬುರ್ಖಾ, ಹಿಜಬ್ ಪದ್ಧತಿ ಇದೆ ಎಂದು ಹೇಳಿದ್ದಾರೆ.
Advertisement
Advertisement
ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲು ಅನುಸರಿಸಿಕೊಂಡು ಬರುತ್ತಿದ್ದಾರೆ. ಆದರೆ ಬುರ್ಖಾ ಹಾಗೂ ಹಿಜಬ್ ಹಾಕಲೇಬೇಕೆಂದು ಒತ್ತಾಯವಿಲ್ಲ. ಇಷ್ಟ ಇದ್ದವರು ಹಾಕಬಹುದು, ಇಷ್ಟ ಇಲ್ಲದವರು ಬಿಡಬಹುದು. ಇದು ಒಂದು ವಿವಾದವೇ ಅಲ್ಲ ಎಂದಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಬ್ ಧರಿಸುತ್ತಿದ್ದಾರೆ: ಜಮೀರ್ ಅಹ್ಮದ್
Advertisement
Advertisement
ಬಿಜೆಪಿಯವರು ತಮ್ಮ ರಾಜಕೀಯ ಲಾಭಕ್ಕಾಗಿ ಮಾಡಿದ ಹುನ್ನಾರ. ವಿದ್ಯಾರ್ಥಿಗಳಲ್ಲಿ ಜಾತಿ ವಿಷ ಬೀಜ ಬಿತ್ತಿದ್ದಾರೆ ಅಂತ ಜಮೀರ್ ಟೀಕಿಸಿದ್ದಾರೆ. ಕೇರಳ ರಾಜ್ಯಪಾಲರು ಇಸ್ಲಾಂನಲ್ಲಿ ಹಿಜಬ್ ಕಡ್ಡಾಯ ಇಲ್ಲ ಎಂಬ ಹೇಳಿಕೆಗೆ ಜಮೀರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.