ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರ (Karnataka Govt) 71ನೇ ಕನ್ನಡ ರಾಜ್ಯೋತ್ಸವ (Kannada Rajyostava) ನಿಮಿತ್ಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 71 ಗಣ್ಯರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಪೈಕಿ ಕಲಬುರಗಿ (Kalaburagi) ಜಿಲ್ಲೆಯಿಂದ `ಪಬ್ಲಿಕ್ ಟಿವಿ’ಯ (PUBLiC TV) ಪಬ್ಲಿಕ್ ಹೀರೋ ಆದ ಜೇವರ್ಗಿ ತಾಲೂಕಿನ ಸೊನ್ನ ಮಠದ (Sonna Mutt) ಪೀಠಾಧಿಪತಿ ಶಿವಾನಂದ ಸ್ವಾಮಿ ಅವರಿಗೂ ಕೂಡ 2026ರ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ಶ್ರೀಗಳು ಕಳೆದ ಹಲವು ದಶಕಗಳಿಂದ ಮಠದ ಜೊತೆ ಜೊತೆಗೆ ಬಡ, ನಿರ್ಗತಿಕ ಹಾಗೂ ಅಲೆಮಾರಿ ಮಕ್ಕಳಿಗೆ ಮಠದಲ್ಲಿ ಉಚಿತ ವಸತಿ, ಶಿಕ್ಷಣವನ್ನು ನೀಡುತ್ತಾ ಬಂದಿದ್ದಾರೆ. ಶ್ರೀಗಳ ಈ ಕೆಲಸವನ್ನ ಗುರುತಿಸಿ, `ಪಬ್ಲಿಕ್ ಟಿವಿ’ 2019ರಲ್ಲಿಯೇ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಅವರು ರಾತ್ರಿ 9 ಗಂಟೆಗೆ ನಡೆಸಿಕೊಡುವ ಬಿಗ್ ಬುಲೆಟಿನ್ನಲ್ಲಿ `ಪಬ್ಲಿಕ್ ಹೀರೋ’ ಅಂತಾ ವರದಿಯನ್ನ ಪ್ರಸಾರ ಮಾಡಿದ್ದರು. ಇದನ್ನೂ ಓದಿ: Rajyotsava Award | ಕಾಗೋಡು ತಿಮ್ಮಪ್ಪ, ನಟ ಅಶೋಕ್, ಜಿಮ್ ರವಿ ಸೇರಿ 71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಇದೀಗ ರಾಜ್ಯ ಸರ್ಕಾರ ಅವರ ಸೇವಾ ಕಾರ್ಯ ಗುರುತಿಸಿ, 2026ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕಲಬುರಗಿಯಿಂದ ಈ ವರ್ಷ ಒಟ್ಟು ಮೂವರು ಗಣ್ಯರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
