ಜೈಪುರ: ರಾಜಸ್ಥಾನದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ(Rajasthan’s Urban Local Body Polls) ಆಡಳಿತಾರೂಢ ಬಿಜೆಪಿ(BJP) ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಒಟ್ಟು 10 ಮಹಾನಗರ ಪಾಲಿಕೆಗಳ ಪೈಕಿ 4ರಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಬಿಜೆಪಿ, ಒಟ್ಟಾರೆ 4,179 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದೆ. ವಿರೋಧ ಪಕ್ಷವಾದ ಕಾಂಗ್ರೆಸ್(Congress) 3,613 ವಾರ್ಡ್‌ಗಳನ್ನು ತನ್ನದಾಗಿಸಿಕೊಂಡಿದೆ.
ರಾಜ್ಯ ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ ಎಣಿಕೆ ನಡೆದ 10,244 ವಾರ್ಡ್‌ಗಳ ಪೈಕಿ 10,235 ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದೆ. ಜೈಪುರ, ಉದಯಪುರ, ಕೋಟಾ ಮತ್ತು ಭಿಲ್ವಾರಾ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಸರಳ ಬಹುಮತ ಪಡೆದುಕೊಂಡಿದೆ.
ಕಾಂಗ್ರೆಸ್ ಪಕ್ಷವು ಬಿಕಾನೇರ್ ಮಹಾನಗರ ಪಾಲಿಕೆಯಲ್ಲಿ ಬಹುಮತ ಗಳಿಸಿದ್ದು, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಭದ್ರಕೋಟೆ ಎಂದೇ ಪರಿಗಣಿಸಲಾದ ಝಾಲಾವಾಡ್ ನಗರ ಪರಿಷತ್ತಿನಲ್ಲಿ ಗಮನಾರ್ಹ ಜಯ ದಾಖಲಿಸಿದೆ.
नगर निकाय चुनाव में भाजपा की विजय के लिए राजस्थान की देवतुल्य जनता का हृदयतल से आभार एवं समर्पित भाजपा कार्यकर्ताओं का अभिनंदन!
यह जनादेश भाजपा की विकासोन्मुखी सोच, सुशासन की प्रतिबद्धता और जनसेवा के संकल्प पर जनता के अटूट विश्वास की मुहर है।#सशक्त_शहर_समृद्ध_राजस्थान pic.twitter.com/0GGnrY7hz9
— Bhajanlal Sharma (@BhajanlalBjp) September 14, 2026
ಈ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದ್ದು, ಒಟ್ಟು 2,273 ವಾರ್ಡ್‌ಗಳಲ್ಲಿ ಜಯಗಳಿಸಿದ್ದಾರೆ. ವಿಶೇಷವಾಗಿ, ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರ ತವರು ಕ್ಷೇತ್ರವಾದ ಭರತ್‌ಪುರ ಮಹಾನಗರ ಪಾಲಿಕೆಯ 65 ವಾರ್ಡ್‌ಗಳ ಪೈಕಿ 36ರಲ್ಲಿ ಪಕ್ಷೇತರರೇ ಗೆದ್ದು ಪ್ರಾಬಲ್ಯ ಮೆರೆದಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ – ಬುಡಕಟ್ಟು ಪ್ರದೇಶಗಳಲ್ಲೂ ಜಯಭೇರಿ
ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, “ಈ ಗೆಲುವು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ನಾಯಕತ್ವ ಮತ್ತು ಬಿಜೆಪಿಯ ಮೇಲಿನ ಜನರ ಅಚಲ ನಂಬಿಕೆಗೆ ಸಾಕ್ಷಿ” ಎಂದು ಬಣ್ಣಿಸಿದ್ದಾರೆ.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಅವರು, “ಬಿಜೆಪಿಯ ಗೆಲುವಿನ ಅಂತರ ಗಣನೀಯವಾಗಿ ಕುಸಿದಿದೆ. ವಾರ್ಡ್‌ಗಳ ಅಸಮರ್ಪಕ ಪುನರ್ವಿಂಗಡಣೆ ಹಾಗೂ ಫಲಿತಾಂಶದ ಮೇಲೆ ಪ್ರಭಾವ ಬೀರಲು ಆಡಳಿತ ಯಂತ್ರ ಮತ್ತು ಪೊಲೀಸರನ್ನು ದುರುಪಯೋಗಪಡಿಸಿಕೊಂಡಿದ್ದೇ ಕಾಂಗ್ರೆಸ್‌ನ ಅಲ್ಪ ಹಿನ್ನಡೆಗೆ ಕಾರಣ” ಎಂದು ಆರೋಪಿಸಿದ್ದಾರೆ.
राजस्थान के नगर निकाय चुनाव में भाजपा को प्रचंड जीत दिलाने के लिए जनता-जनार्दन का हृदय से आभार।
यह झूठ की गूंज के सामने सत्य की विजय का प्रमाण है।
यहां के मेरे परिवारजनों के इस जनादेश से एक बार फिर साफ हो गया है कि डबल इंजन सरकार की सुशासन एवं विकास की नीतियों को उनका पूरा…
— Narendra Modi (@narendramodi) September 14, 2026
ಮೋದಿ ಅಭಿನಂದನೆ:
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟ ರಾಜಸ್ಥಾನದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು. ಇದು ಸುಳ್ಳಿನ ಕೂಗಿನ ವಿರುದ್ಧ ಸತ್ಯಕ್ಕೆ ಸಂದ ಜಯಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಡಬಲ್ ಎಂಜಿನ್ ಸರ್ಕಾರದ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ನೀತಿಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂಬುದನ್ನು ಇಲ್ಲಿನ ನನ್ನ ಕುಟುಂಬವು ಈ ಜನಾದೇಶದ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಇದು ರಾಜ್ಯವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯುವುದು ಮಾತ್ರವಲ್ಲದೆ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಸಮೃದ್ಧಿಯನ್ನು ತರುವ ನಮ್ಮ ಸಂಕಲ್ಪವನ್ನು ಇನ್ನಷ್ಟು ಬಲಪಡಿಸುತ್ತದೆ. ಈ ಸಂದರ್ಭದಲ್ಲಿ, ಗೆಲುವು ಸಾಧಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಹಾಗೂ ಪಕ್ಷದ ನಿಷ್ಠಾವಂತ ಮತ್ತು ಶ್ರಮಜೀವಿ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

