ಬಳ್ಳಾರಿ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತಿದ್ದು, ಜಲಾಶಯ ತುಂಬಿರುವ ಪರಿಣಾಮ 60 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ ಎಂದು ಟಿಬಿ ಬೋರ್ಡ್ ಸ್ಪಷ್ಟನೆ ನೀಡಿದೆ.
Advertisement
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಕುರಿತು ನಿನ್ನೆಯೇ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಡಪ, ಅನಂತಪುರ ಹಾಗೂ ಮೆಹಬೂಬ್ ನಗರ ಜಿಲ್ಲಾಡಳಿತಗಳಿಗೆ ಟಿಬಿ ಬೋರ್ಡ್ ಮಾಹಿತಿ ರವಾನಿಸಿತ್ತು. ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಅಪಘಾತ – ನಿನ್ನೆಯಷ್ಟೇ ಕೆಲಸಕ್ಕೆ ಸೇರಿದ್ದ ಕೃತಿಕ ರಾಮಾನ್
Advertisement
Advertisement
ಈಗಾಗಲೇ 60 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವುದರಿಂದ ವಿಶ್ವವಿಖ್ಯಾತ ಹಂಪಿಯ ಹಲವು ಸ್ಮಾರಕಗಳು ಮುಳುಗಡೆಯಾಗಿವೆ. ಪ್ರಮುಖವಾಗಿ ಪುರಂದರದಾಸರ ಮಂಟಪ, ಧಾರ್ಮಿಕ ವಿಧಿವಿಧಾನ ಮಂಟಪ ಮುಳುಗಡೆಯಾಗಿವೆ. ಇನ್ನು ಈಗಾಗಲೇ ಸ್ಥಳೀಯ ಆಡಳಿತಗಳ ನೆರವಿನಿಂದ ಆಯಾ ಜಿಲ್ಲಾಡಳಿತಗಳೂ ಸಹ ಜನರಿಗೆ ನದಿಪಾತ್ರದ ಕಡೆ ಸುಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಆದರೆ ಜನರಲ್ಲಿ ಪ್ರವಾಹದ ಭಯ ಮಾತ್ರ ಮತ್ತೆ ಕಾಡುತ್ತಿದೆ.