Bengaluru City

ಎಲೆಕ್ಟ್ರಾನಿಕ್ ಸಿಟಿ ಅಪಘಾತ – ನಿನ್ನೆಯಷ್ಟೇ ಕೆಲಸಕ್ಕೆ ಸೇರಿದ್ದ ಕೃತಿಕ ರಾಮಾನ್

Published

on

Share this

ಬೆಂಗಳೂರು: ಎಲೆಕ್ಟ್ರಾನಿಕ್ ಫ್ಲೈ ಓವರ್ ನಿನ್ನೆ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಯುವತಿ ನಿನ್ನೆಯಷ್ಟೆ ಕೆಲಸಕ್ಕೆ ಸೇರಿದ್ದರು ಎಂಬ ಎಕ್ಸ್ ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ.

ಮೃತ ಕೃತಿಕ ರಾಮಾನ್ ನಿನ್ನೆಯಷ್ಟೇ ಹೊಸ ಕಂಪನಿ ಕೆಲಸಕ್ಕೆ ಸೇರಿದ್ದರು. ಪ್ರೀತಮ್ ಸಹ ಇದೇ ಕಂಪನಿಗೆ ಕೆಲಸಕ್ಕೆ ಜಾಯಿನ್ ಆಗಬೇಕಿತ್ತು. ಈ ಇಬ್ಬರು ರೆಫರೆನ್ಸ್ ಆಧಾರ ಮೇಲೆ ಕಂಪನಿಗೆ ಸೇರಿದ್ದರು. ಕೃತಿಕಾರಿಗೆ ವರ್ಕ್ ಫ್ರಮ್ ಹೋಂ ಇತ್ತು. ಚೆನ್ನೈ ನಲ್ಲಿ ಕೆಲಸ ಮಾಡಲು ತೊಂದರೆಯಾಗಬಹುದೆಂದು ಬೆಂಗಳೂರಿನಲ್ಲೇ ಉಳಿದು ಕೆಲಸ ಮಾಡಲು ಬಂದಿದ್ದರು. ಇದನ್ನೂ ಓದಿ: ಫ್ಲೈಓವರ್ ಮೇಲಿಂದ ಬಿದ್ದು ಅಪಘಾತವಾದ ಸ್ಥಳದಲ್ಲೇ ಮತ್ತೊಂದು ಅಪಘಾತ

ಪ್ರೀತಂ, ಕೃತಿಕ ಇಬ್ಬರು ಸ್ನೇಹಿತರಾಗಿದ್ದು, ಕೃತಿಕಾಗೆ ಬೆಂಗಳೂರಿನಲ್ಲಿ ಉಳಿದುಕೊಳ್ಳಲು ಪ್ರೀತಮ್ ಸಹಾಯ ಮಾಡುತ್ತಿದ್ದರು. ನಿನ್ನೆಯಷ್ಟೆ ಕಂಪನಿಯ ಟ್ರೈನಿಂಗ್, ದಾಖಲಾತಿಗಳನ್ನು ಮುಗಿಸಿ ಕೆಲಸಕ್ಕೆ ಸೇರಿದ್ದರು. ಇದನ್ನೂ ಓದಿ: ಫ್ಲೈಓವರಿನಲ್ಲಿ ನಿಂತಿದ್ದ ಯುವಕ, ಯುವತಿಗೆ ಡಿಕ್ಕಿ ಹೊಡೆದಿದ್ದು ಎಂಜಿನಿಯರಿಂಗ್ ವಿದ್ಯಾರ್ಥಿ

ನಿನ್ನೆ ತಡರಾತ್ರಿ ಫ್ಲೈ ಓವರ್‍ನಲ್ಲಿ ನಿಂತು ಸೈಟ್ ಸಿಯಿಂಗ್ ಮಾಡುತ್ತಿದ್ದ ವೇಳೆ ಪ್ರೀತಮ್ ಹಾಗೂ ಕೃತಿಕಾಗೆ ಅತಿ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement