ಮಂಗಳೂರು: ನಗರದ ಹೋಟೆಲ್‌ಗಳು, ಕ್ಯಾಟರಿಂಗ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳ ದಾಳಿ ಮುಂದುವರಿದಿದೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಹೆಚ್ ನೇತೃತ್ವದಲ್ಲಿ ದಾಳಿ ನಡೆದಿದೆ. ರೈಲ್ವೇ ಹಾಗೂ ವಿಮಾನಗಳಿಗೆ ಸರಬರಾಜಾಗುವ ಆಹಾರಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಮಂಗಳೂರಿನ ವಂದೇ ಭಾರತ್ ರೈಲು ಸೇವೆಗೆ ಕ್ಯಾಟರಿಂಗ್ ಮತ್ತು ಆಹಾರ ಸರಬರಾಜು ಮಾಡುವ ಕ್ಯಾಟರಿಂಗ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಮಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿರುವ ಕ್ಯಾಸಿನೋ ಏರ್ ಕ್ಯಾಟರ್ಸ್ & ಫ್ಲೈಟ್ ಸರ್ವಿಸಸ್ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಯಿತು.
ಆಹಾರ ತಯಾರಿಸುವ ಸ್ಥಳ ಭಾರೀ ಅವ್ಯವಸ್ಥೆ, ಶುಚಿತ್ವದ ಕೊರತೆ ಹಿನ್ನೆಲೆಯ ಸಿಬ್ಬಂದಿಯನ್ನು ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲಿಯೇ ತಕ್ಷಣವೇ ಶುಚಿಗೊಳಿಸಲು ಸೂಚಿಸಿದರು. ಫ್ರೀಜರ್‌ನಲ್ಲಿ ಒಂದೇ ಕಡೆ ಸಸ್ಯಾಹಾರಿ ಹಾಗೂ ಮಾಂಸಹಾರಿ ಆಹಾರ ಪತ್ತೆಯಾಗಿದೆ. ಸಸ್ಯಾಹಾರಿ ಹಾಗೂ ಮಾಂಸಹಾರಿ ಆಹಾರ ಒಂದೇ ಫ್ರೀಜರ್‌ನಲ್ಲಿ ಇಡದಂತೆ ಅಧಿಕಾರಿಗಳು ಸೂಚನೆ ನೀಡಿದರು. ರೈಲ್ವೆ ನಿಲ್ದಾಣಗಳ ಹೋಟೆಲ್‌ಗಳಲ್ಲೂ ಪರಿಶೀಲನೆ ನಡೆಸಿದರು.

