ತುಮಕೂರು: ಭಾರತ್ ಜೋಡೋ ಯಾತ್ರೆಯಲ್ಲಿ (Bharath Jodo Yatra) ಜಡಿ ಮಳೆಗೂ ಜಗ್ಗದ ರಾಹುಲ್ಗಾಂಧಿ (Rahul Gandhi) ರನ್ನಿಂಗ್ ಮಾಡುವ ಮೂಲಕ ಕಾಂಗ್ರೆಸ್ ನಾಯಕರನ್ನು ಹುರಿದುಂಬಿಸಿಸುತ್ತಿದ್ದಾರೆ.
ತುಮಕೂರಿನಲ್ಲಿ (Tumkur) ರಾಹುಲ್ಗಾಂಧಿ ಪಾದಯಾತ್ರೆ ವೇಳೆ, ರಾಹುಲ್ ಗಾಂಧಿ ಕಾಂಗ್ರೆಸ್ ಬಾವುಟ (Congress Flag) ಹಿಡಿದು ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಜೊತೆ ಓಡಿದ್ದಾರೆ. ಇದನ್ನೂ ಓದಿ: ರಾಹುಲ್ಗಾಂಧಿ ಪೋಸ್ಟರ್ಗೆ `ಚಪ್ಪಲಿ ಎಸೆಯಿರಿ’ ಆಂದೋಲನಕ್ಕೆ ಕರೆ ಕೊಟ್ಟ ಬಿಜೆಪಿ ನಾಯಕ
ಮೊನ್ನೆಯಷ್ಟೇ ಸಿದ್ದರಾಮಯ್ಯ (Siddaramaiah) ಜೊತೆ ಓಡಿದ್ದ ರಾಹುಲ್ ಗಾಂಧಿ, ಇಂದು ಬಸವನಗುಡಿ ಬಳಿ ಡಿಕೆ ಶಿವಕುಮಾರ್ ಕೈ ಹಿಡಿದುಕೊಂಡು ಹೈಸ್ಪೀಡ್ ರನ್ನಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದೆಹಲಿ ಸಚಿವ ರಾಜೀನಾಮೆ
ಪಾದಯಾತ್ರೆ ವೇಳೆ ಕಾಂಗ್ರೆಸ್ ಧ್ವಜವನ್ನು ಡಿಕೆಶಿ ಕೈಗಿಟ್ಟ ರಾಹುಲ್, ಸುಮಾರು 100 ಮೀಟರ್ನಷ್ಟು ದೂರ ಒಂದೇ ಸಮನೇ ಓಡಿದ್ದಾರೆ. ಈ ವೇಳೆ ರಾಹುಲ್ ಕಾಲನ್ನು ಉಳುಕಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಸ್ಪೀಡ್ಗೆ ಓಡದ ಡಿಕೆಶಿ ಸ್ವಲ್ಪ ದೂರ ಓಡಿ ಸುಸ್ತಾಗಿ ಬಳಿಕ ನಡೆದುಕೊಂಡು ಪಾದಯಾತ್ರೆ ಮುಂದುವರೆಸಿದ್ದಾರೆ.