ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಮತ್ತೆ ಹೊಸ ಅವತಾರದಲ್ಲಿ ಅಭಿಮಾನಿಗಳ ಕಣ್ಣಿಗೆ ದರ್ಶನ ಕೊಟ್ಟಿದ್ದಾರೆ. ಸೌತ್ ಮತ್ತು ಬಾಲಿವುಡ್ ನಟಿಯಾಗಿರುವ ರಶ್ಮಿಕಾ, ಖಾಸಗಿ ಇವೆಂಟ್ನಲ್ಲಿವೊಂದರಲ್ಲಿ ರ್ಯಾಂಪ್ ಮಾಕ್ (Ramp Walk) ಮಾಡಿದ್ದಾರೆ. ಸದ್ಯ `ಪುಷ್ಪ’ (Pushpa) ನಟಿಯ ಹೊಸ ಲುಕ್ ನೆಟ್ಟಿಗರ ಗಮನ ಸೆಳೆದಿದೆ.
View this post on Instagram
ಬಾಲಿವುಡ್ ಅಂಗಳದ ನೀರು ಕುಡಿದ ಮೇಲೆ ಇದೀಗ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಇದನ್ನೂ ಓದಿ: ಲಿಂಗಭೈರವಿ ದೇವಿಯ ಮೋರೆ ಹೋದ ಸಮಂತಾ
ಮುಂಬೈನಲ್ಲಿ (Mumbai) ನಡೆದ ಫ್ಯಾಷನ್ ವಿಕ್ ಇವೆಂಟ್ವೊಂದರಲ್ಲಿ ರಶ್ಮಿಕಾ ರ್ಯಾಂಪ್ ವಾಕ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕಪ್ಪು ಬಣ್ಣ ಮಾಡ್ರನ್ ಸೀರೆಯಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋಸ್ ಇಂಟರ್ನೆಟ್ನಲ್ಲಿ ಸದ್ದು ಮಾಡ್ತಿದೆ.
ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಾತ್ರವಲ್ಲದೇ ಅಥಿಯಾ ಶೆಟ್ಟಿ, ತಾಪ್ಸಿ ಪನ್ನು, ಮಲೈಕಾ ಅರೋರಾ, ಪರಿಣಿತಿ ಚೋಪ್ರಾ ಸೇರಿದಂತೆ ಹಲವರು ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾರೆ.