CinemaDistrictsKarnatakaLatestMain PostSouth cinema

ಪುಷ್ಪಾ 2 ಸಿನಿಮಾದ ಸ್ಕ್ರಿಪ್ಟ್ ಕೆಲಸ ಅಮೆರಿಕಾದಲ್ಲಿ

ಕೆಜಿಎಫ್ 2 ಸಿನಿಮಾ ಕೆಲ ನಿರ್ದೇಶಕರಿಗೆ ನಿದ್ದೆಗೆಡಿಸಿದೆ. ಮುಂದಿನ ತಮ್ಮ ಚಿತ್ರವನ್ನು ಹೇಗೆ ತಯಾರಿಸಬೇಕು ಎಂದು ಮಂಡೆ ಬಿಸಿ ಮಾಡಿಕೊಂಡು ಕೂತಿದ್ದಾರೆ ಕೆಲ ನಿರ್ದೇಶಕರು. ಅದರಲ್ಲೂ ಪುಷ್ಪಾ 2 ಸಿನಿಮಾದ ನಿರ್ದೇಶಕರಂತೂ ಹಗಲು ರಾತ್ರಿ ತಮ್ಮ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರಂತೆ. ಯಾರ ಸಹವಾಸವೂ ಬೇಡವೆಂದು ಏಕಾಂತದಲ್ಲಿ ಬರೆಯುವುದಕ್ಕಾಗಿ ಅಮೆರಿಕಾಗೆ ತೆರಳಿದ್ದಾರೆ ಎನ್ನುವ ಮಾಹಿತಿ ಇದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

ಕೆಜಿಎಫ್ 2 ಸಿನಿಮಾ ತೆರೆಗೆ ಬಂದಾಗ ಪುಷ್ಪಾ ಮತ್ತು ಕೆಜಿಎಫ್ 2 ಸಿನಿಮಾವನ್ನು ಹೋಲಿಸಿ ಮಾತನಾಡಲಾಗುತ್ತಿತ್ತು. ತೆಲುಗು ನಿರ್ದೇಶಕರೊಬ್ಬರು ಕೆಜಿಎಫ್ 2 ಮತ್ತು ಪುಷ್ಪಾ ಸಿನಿಮಾವನ್ನು ತೂಕ ಹಾಕಿ ಕಾಲೆಳೆದಿದ್ದರು. ಅದು ಸ್ವಲ್ಪ ವಿವಾದಕ್ಕೂ ಕಾರಣವಾಗಿತ್ತು. ಈಗ ಎಲ್ಲವನ್ನೂ ಸುಧಾರಿಸಿಕೊಂಡು ಪುಷ್ಪಾ ಸಿನಿಮಾದ ನಿರ್ದೇಶಕ ಸುಕುಮಾರ್ ಅಮೆರಿಕಾ ವಿಮಾನ ಏರಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

ಅದ್ಯ ಸುಕುಮಾರ್ ಅವರು ಅಮೆರಿಕಾದಲ್ಲೇ ಬೀಡುಬಿಟ್ಟಿದ್ದು, ಕಥೆಯಲ್ಲಿ ಭಾರೀ ಬದಲಾವಣೆ ಮಾಡುತ್ತಿದ್ದಾರಂತೆ. ಪುಷ್ಪಾ ಮೊದಲನೇ ಭಾಗದಲ್ಲಿ ಮಾಡಿದ್ದ ತಪ್ಪುಗಳನ್ನು ಸರಿ ಮಾಡಿಕೊಂಡು, ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡುವಂತಹ ಅಂಶಗಳನ್ನು ಬೆರೆಸಿ, ಈ ಬಾರಿ ಬಾಕ್ಸ್ ಆಫೀಸ್ ನಲ್ಲಿ ಭಾರೀ ಕಲೆಕ್ಷನ್ ಆಗುವ ರೀತಿಯಲ್ಲಿ ಸಿನಿಮಾ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

ಪುಷ್ಪಾ 2 ರಲ್ಲಿ ಹೊಸ ಪಾತ್ರಗಳು ಬರಲಿವೆ ಎನ್ನಲಾಗುತ್ತಿದೆ. ಅಲ್ಲದೇ, ಕನ್ನಡದ ನಟ ಧನಂಜಯ್ ಅವರ ಪಾತ್ರವನ್ನೂ ಇಲ್ಲಿ ಹಿಗ್ಗಿಸಲಾಗುತ್ತಿದೆ ಎನ್ನುವ ಮಾತೂ ಇದೆ. ಸಾಹಸ ದೃಶ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗಬಹುದು ಎನ್ನುತ್ತಿದೆ ಚಿತ್ರತಂಡ. ಈ ಎಲ್ಲ ಕಾರಣಗಳಿಂದಾಗಿ ತಮ್ಮ ಟೀಮ್ ಕಟ್ಟಿಕೊಂಡು ನಿರ್ದೇಶಕರು ಅಮೆರಿಕಾಗೆ ಹಾರಿದ್ದಾರೆ. ಹಾಗಾಗಿ ಸಿನಿಮಾದ ಶೂಟಿಂಗ್ ಕೂಡ ತಡವಾಗಬಹುದು ಎನ್ನಲಾಗುತ್ತಿದೆ.

Leave a Reply

Your email address will not be published.

Back to top button