ವಾಷಿಂಗ್ಟನ್: ಪಿಜ್ಜಾ ಡೆಲಿವರಿ ಬಾಯ್ (Pizza Delivery Worker) ಆಗಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಯುವಕನನ್ನು ಅಪರಿಚಿತ ದಾಳಿಕೋರನೊಬ್ಬ ಗುಂಡಿಕ್ಕಿ ಕೊಂದಿರುವ ಘಟನೆ ನ್ಯೂಯಾರ್ಕ್ (New York) ನಗರದ ಬ್ರೂಕ್ಲಿನ್‌ನಲ್ಲಿ ನಡೆದಿದೆ.
28 ವರ್ಷದ ಗುರುದೀಪ್ ಸಿಂಗ್ ಮೃತ ಯುವಕ, ಈತ ಮೂಲತಃ ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ಜಬೋವಾಲ್ ಗ್ರಾಮದವನಾಗಿದ್ದು. ಸಿಂಗ್ 2017 ರಲ್ಲಿ ‘ಡಂಕಿ ಮಾರ್ಗ’ದ (ಅಮೆರಿಕ, ಕೆನಡಾ ಅಥವಾ ಯುರೋಪ್‌ನಂತಹ ದೇಶಗಳಿಗೆ ಪ್ರವೇಶಿಸಲು ವಲಸಿಗರು ಬಳಸುವ ರಹಸ್ಯ ಮಾರ್ಗ) ಮೂಲಕ ಅಮೆರಿಕಕ್ಕೆ ತೆರಳಿದ್ದ. ಕಳೆದ 9 ವರ್ಷಗಳಿಂದ ಅಲ್ಲಿಯೇ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ.
ಗುರುದೀಪ್ ಸಿಂಗ್ ಪಿಜ್ಜಾ ಡೆಲಿವರಿ ಕೆಲಸ ಮಾಡುತ್ತಿದ್ದ ವೇಳೆ ಅಪರಿಚಿತ ದಾಳಿಕೋರನಿಂದ ಗುಂಡಿನ ದಾಳಿಗೆ ಒಳಗಾಗಿದ್ದಾರೆ ಎನ್ನಲಾಗಿದೆ. ದರೋಡೆ ಯತ್ನದ ವೇಳೆ ಈ ಘಟನೆ ನಡೆದಿರಬಹುದು ಎಂಬ ಶಂಕೆ ಇದ್ದರೂ, ಗುಂಡಿನ ದಾಳಿಯ ನಿಖರ ಕಾರಣ ಮತ್ತು ದಾಳಿಕೋರನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಹೊರಬರಬೇಕಿದೆ. ಇದನ್ನೂ ಓದಿ: ಎಸ್‌ಐಆರ್‌ನಲ್ಲಿ ಮ್ಯಾಪಿಂಗ್ ಆಗದೇ ಇರುವವರಿಗೆ ಜಾರಿಯಾಗಲಿದೆ ನೋಟಿಸ್
ಗುರುದೀಪ್ ಸಿಂಗ್ ಹತ್ಯೆಯನ್ನು ಖಂಡಿಸಿ ಉತ್ತರ ಅಮೆರಿಕದಲ್ಲಿರುವ ಪಂಜಾಬಿ ಹಾಗೂ ಸಿಖ್ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಉತ್ತರ ಅಮೆರಿಕಾದ ಪಂಜಾಬಿ ಸಂಘಟನೆ NAPA ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿದೆ. ತನಿಖೆ ಪೂರ್ಣಗೊಳ್ಳುವ ಮುನ್ನ ಹತ್ಯೆಯ ಉದ್ದೇಶದ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಬಾರದು. ಇಂತಹ ಹಿಂಸಾಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘಟನೆ ಮನವಿ ಮಾಡಿದೆ. ಇದನ್ನೂ ಓದಿ: ʻಆಪರೇಷನ್ ಸಿಂಧೂರʼ ವೇಳೆ ಧ್ವಂಸಗೊಂಡಿದ್ದ ಜೈಶ್ ಉಗ್ರ ಸಂಘಟನೆಯ ಪ್ರಧಾನ ಕಚೇರಿ ಮತ್ತೆ ನಿರ್ಮಾಣ

