ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆ ಕೊನೆಗೂ ಪೊಲೀಸ್ ಠಾಣೆ ತಲುಪಿದೆ. ಚುನಾವಣೆ ಪ್ರಕ್ರಿಯೆಗೆ ಅಡ್ಡಿ ಪಡಿಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿ ಪ್ರಮೀಳಾ ಜೋಷಾಯಿ ಮಾಗಡಿ ರೋಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೋರ್ಟ್ ಆದೇಶದಂತೆ 14.08.2022 ಒಳಗೆ ನಿರ್ಮಾಪಕರ ಸಂಘದ ಚುನಾವಣೆ ಆಗ್ಬೇಕಿದೆ. ನಾಮಪತ್ರ ವಾಪಸ್ ಪಡೆಯಲು 6 ನೇ ತಾರೀಖು ಕೊನೆಯ ದಿನವಾಗಿತ್ತು. ನಾಮಪತ್ರ ವಾಪಸ್ ಪಡೆದು ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಅನೌನ್ಸ ಮಾಡಲು ಬಿಡ್ತಿಲ್ಲ ಎಂದು ರಮೆಶ್ ಯಾದವ್, ಪ್ರವೀಣ್ ಕುಮಾರ್, ಆರ್ ಎಸ್ ಗೌಡ ಅವರಿಂದ ಚುನಾವಣೆ ಪ್ರಕ್ರಿಯೆಗೆ ಅಡ್ಡಿ ಆಗುತ್ತಿದೆ ಎಂದು ಆರೋಪಿಸಿ ಪ್ರಮೀಳ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
Advertisement
ನಾಮೆನೇಷನ್ ಬಾಕ್ಸ್ ಓಪನ್ ಮಾಡಲು ಕೊಡ್ತಿಲ್ಲ ಎಂದು ಮತ್ತು ನಿರ್ಮಾಪಕರ ಸಂಘದ ಪದಾಧಿಕಾರಿಗಳಿಂದ ತೊಂದರೆ ಆಗುತ್ತಿದೆ ಎಂದು ಹಾಗೂ ಚುನಾವಣಾ ಅಧಿಕಾರಿಯ ಅಖಾಡದಲ್ಲಿ ಅಂತಿಮ ತಿರ್ಮಾನ ಆಗ್ಬೇಕಿದೆ ಎಂದು ಅವರು ತಿಳಿಸಿದ್ದಾರೆ.