CinemaLatestMain PostSouth cinema

51ನೇ ವಯಸ್ಸಿಗೆ ಗಂಡು ಮಗುವಿಗೆ ತಂದೆಯಾದ ನಿರ್ಮಾಪಕ ದಿಲ್‌ರಾಜು

Advertisements

ಟಾಲಿವುಡ್‌ನ ಖ್ಯಾತ ನಿರ್ಮಾಪಕ ದಿಲ್ ರಾಜು ಮನೆಯಲ್ಲಿ ಸಂತಸ ಮನೆ ಮಾಡಿದೆ. ಹೊಸ ಅತಿಥಿಯ ಆಗಮನವಾಗಿರುವ ಖುಷಿಯಲ್ಲಿದ್ದಾರೆ. 51ನೇ ವಯಸ್ಸಿಗೆ ಗಂಡು ಮಗುವಿಗೆ ನಿರ್ಮಾಪಕ ದಿಲ್‌ರಾಜು ತಂದೆಯಾಗಿದ್ದಾರೆ. ಎರಡು ವರ್ಷದ ಹಿಂದಷ್ಟೇ, ತೇಜಸ್ವಿನಿ ಅವರನ್ನು ದಿಲ್‌ರಾಜು ವಿವಾಹವಾಗಿದ್ದರು.

ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ದಿಲ್‌ರಾಜು ಮೊದಲ ಪತ್ನಿ ಅನಿತಾ ಅನಾರೋಗ್ಯದಿಂದ ಬಳಲುತ್ತಿದ್ದರು. 2017ರಲ್ಲಿ ಮೊದಲ ತ್ನಿ ಅನಿತಾ ನಿಧನರಾಗಿದ್ದರು. 2020ರಲ್ಲಿ ತೇಜಸ್ವಿನಿ ಜತೆ ಗುರುಹಿರಿಯರ ಸಮ್ಮುಖದಲ್ಲಿ ಎರಡನೇ ಮದುವೆಯಾಗಿದ್ದರು. ಇದೀಗ ದಿಲ್‌ರಾಜ್ ಕುಟುಂಬದಿಂದ ಸಿಹಿ ಸುದ್ದಿ ಸಿಕ್ಕಿದೆ. ದಿಲ್‌ರಾಜ್ ಪತ್ನಿ ಇಂದು ಬುಧವಾರ ಬೆಳಿಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದನ್ನೂ ಓದಿ:ಪಿಂಕ್ ಕಲರ್ ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

ಇನ್ನು ಮೊದಲ ಪತ್ನಿಗೆ ಒಬ್ಬಳು ಮಗಳಿದ್ದು, ಈಗ ದಿಲ್‌ರಾಜು ನಿರ್ಮಾಣ ಸಂಸ್ಥೆಯ ಹೊಣೆ ಹೊತ್ತಿದ್ದಾರೆ. ಆಂಧ್ರದಲ್ಲಿ `ಕೆಜಿಎಫ್ 2′ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ದಿಲ್‌ರಾಜ್ ಹೊತ್ತಿದ್ದರು. ಈಗ ಯಶ್ ಜತೆ 100 ಕೋಟಿ ವೆಚ್ಚದ ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

Live Tv

Leave a Reply

Your email address will not be published.

Back to top button