– ಜೈಲಲ್ಲಿರಬೇಕಾದವರು ಕುಮಾರಕೃಪಾದಲ್ಲಿದ್ದಾರೆ
ಬೆಂಗಳೂರು: ಬಿಜೆಪಿ (BJP) ಸರ್ಕಾರ ಬಂದ ಮೇಲೆ ಭ್ರಷ್ಟಾಚಾರ ರಾಜ್ಯ ಅನ್ನೋ ಬಿರುದು ಸಿಕ್ಕಿದೆ. ಬಿಜೆಪಿ ಅಂದ್ರೆ ಬ್ರೋಕರ್ ಜನತಾ ಪಕ್ಷ. ಬಿಜೆಪಿಯವರು ವಿಧಾನಸೌಧವನ್ನು (Vidhana Soudha) ಜಗತ್ತಿನ ದೊಡ್ಡ ಶಾಪಿಂಗ್ ಮಾಲ್ ಮಾಡಿದ್ದಾರೆ. ಈ ಶಾಪಿಂಗ್ ಮಾಲ್‍ನಲ್ಲಿ ವರ್ಗಾವಣೆ, ಪೋಸ್ಟಿಂಗ್, ಕಾಮಗಾರಿ, ಉದ್ಯೋಗ ಖರೀದಿ ಮಾಡಬಹುದು ಎಂದು ಬಿಜೆಪಿ ಸರ್ಕಾರದ ವಿರುದ್ಧ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ವಾಗ್ದಾಳಿ ನಡೆಸಿದ್ದಾರೆ.
Advertisement
ಕಲಬುರಗಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರ ರಾಜ್ಯ ಅನ್ನೋ ಬಿರುದು ಸಿಕ್ಕಿದೆ. ಬಿಜೆಪಿ ಅಂದ್ರೆ ಬ್ರೋಕರ್ ಜನತಾ ಪಕ್ಷ. ಬಿಜೆಪಿಯವರು ವಿಧಾನಸೌಧವನ್ನು ಜಗತ್ತಿನ ದೊಡ್ಡ ಶಾಪಿಂಗ್ ಮಾಲ್ ಮಾಡಿದ್ದಾರೆ. ಈ ಶಾಪಿಂಗ್ ಮಾಲ್‍ನಲ್ಲಿ ವರ್ಗಾವಣೆ, ಪೋಸ್ಟಿಂಗ್, ಕಾಮಗಾರಿ, ಉದ್ಯೋಗಗಳನ್ನು ಖರೀದಿ ಮಾಡಬಹುದು. ರಾಜ್ಯದ ಉತ್ತಮ ಸೇಲ್ಸ್‌ಮೆನ್‌ಗಳು ಅಲ್ಲಿದ್ದಾರೆ. ಅಧಿಕಾರಿಗಳು, ಮಂತ್ರಿಗಳು, ಅನೇಕ ಶಾಸಕರೇ ಅದರ ಸೇಲ್ಸಮೆನ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
Advertisement
Advertisement
ಪಿಡಬ್ಲೂಡಿ ಜೆಇ 10.5 ಲಕ್ಷ ಹಣ ಸಮೇತ ವಿಧಾನಸೌಧದಲ್ಲಿ ಸಿಕ್ಕಿಬಿದ್ದಿದ್ದಾನೆ. ವಿಧಾನಸೌಧದಲ್ಲಿ ಯಾರು ಈ ಹಣವನ್ನು ತಗೆದುಕೊಳ್ಳಲು ಕೂತಿದ್ದರು? ಯಾರಿಗೆ ಹಣ ಕೊಡಲು ಹೋಗಿದ್ದರು ಅನ್ನೋ ಬಗ್ಗೆ ತನಿಖೆಯಾಗಬೇಕು. ಸಿಎಂ ಹೈಕಮಾಂಡ್‍ಗೆ ಮಧ್ಯವರ್ತಿ. ಸಿಎಂಗೆ ಸಚಿವರು ಮಧ್ಯವರ್ತಿಯಾಗಿದ್ದಾರೆ. ಕೆಲ ಪ್ರಕರಣದಲ್ಲಿ ರೌಡಿ ಶೀಟರ್‌ಗಳು ಕೂಡಾ ಮಧ್ಯವರ್ತಿಯಾಗಿದ್ದಾರೆ. ಈ ಸರ್ಕಾರವನ್ನು ಸಿಎಂ ನಡೆಸುತ್ತಿಲ್ಲ. ಆಡಳಿತದಲ್ಲಿ ರೌಡಿ ಮೋರ್ಚಾ ಓಪನ್ ಮಾಡಿದ್ದಾರೆ. ಸ್ಯಾಂಟ್ರೋ ರವಿಗೆ ಹೋಮ್ ಮಿನಿಸ್ಟರ್‌ಗಿಂತ ಹೆಚ್ಚಿನ ಮಾಹಿತಿ ಇದೆಯಂತೆ. ಅಧಿಕಾರಿಗಳ ವರ್ಗಾವಣೆ ಮಾಡಿಸೋದೆ ಆತನ ಸೋಶಿಯಲ್ ವರ್ಕ್ ಅಂತೆ. ಆತನ ಆಡಿಯೋ ಕೇಳಿದ್ರೆ ಆತ ಸುಳ್ಳು ಹೇಳುತ್ತಿಲ್ಲ ಅಂತ ಅನ್ಸುತ್ತೆ. ಯಾರನ್ನು ಒದ್ದು ಒಳಗೆ ಹಾಕಬೇಕಿತ್ತೋ ಅಂತವರ ಕಾಲಿಗೆ ಅಧಿಕಾರಿಗಳು ಬೀಳುವಂತಾಗಿದೆ. ಜೈಲಲ್ಲಿರಬೇಕಾದವರು ಕುಮಾರಕೃಪಾದಲ್ಲಿದ್ದಾರೆ ಎಂದು ಕಿಡಿಕಾರಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k