– `SIR’ ಅಭಿಯಾನ ಬಿಜೆಪಿ ಗೆಲ್ಲಿಲಿಸಲೆಂದೇ ಮಾಡಿರುವ ಡಿಸೈನ್ ಅಂತ ಲೇವಡಿ
ಬೆಂಗಳೂರು: ನೀಟ್ ಪ್ರಶ್ನೆಪತ್ರಿಕೆ ಅಕ್ರಮದಲ್ಲಿ ಆರ್‌ಎಸ್‌ಎಸ್, ಬಿಜೆಪಿ ಕೈವಾಡವಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಸೂಸೈಡ್ ಮಾಡಿಕೊಳ್ತಿರೋದು ಬಹಳ ದೊಡ್ಡ ದುರಂತ. ಇದರಲ್ಲಿ ಬಿಜೆಪಿ, ಆರ್‌ಎಸ್‌ಎಸ್ ನವರು ಇದ್ದಾರೆ. ಅವರಿಗೇ ಇದರ ಪಾಲು ಹೋಗ್ತಿದೆ. ಯಾಕೆ ಇನ್ನೂ ಒಬ್ಬರೂ ರಾಜೀನಾಮೆ ಕೊಡ್ತಿಲ್ಲ? ಹಗಲಿರುಳು ಓದಿದ ಮಕ್ಕಳ ಭವಿಷ್ಯ ಏನಾಗಬೇಕು? ಎಂದು ಪ್ರಶ್ನೆ ಮಾಡಿದ್ದರಲ್ಲದೇ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಝೆನ್-ಝೀ ಅಂತಾ ಮೋದಿ ಹೇಳ್ತಾರೆ, ಪರೀಕ್ಷೆ ಮೇಲೆ ಚರ್ಚೆ, ನೀಟ್ ಬಗ್ಗೆ ಚರ್ಚೆ ಯಾವಾಗ ಮಾಡ್ತಾರೆ ಮೋದಿ? ಈಗ ಎಲ್ಲಿದ್ದಾರೆ ದತ್ತಾತ್ರೇಯ ಹೊಸಬಾಳೆ ಅವರು? ಆರ್‌ಎಸ್‌ಎಸ್ ನವರು, ಪ್ರಚಾರಕರು ಮಕ್ಕಳ ಭವಿಷ್ಯ ಹಾಳು ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ʻSIRʼ ಅನ್ನೋದು ಬಿಜೆಪಿ ಗೆಲ್ಲಿಸಲೆಂದೇ ಮಾಡಿರುವ ಡಿಸೈನ್
ಇನ್ನೂ ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರೀಕ್ಷರಣೆ ಅಭಿಯಾನ ಕುರಿತು ಮಾತನಾಡಿ, ʻಎಸ್‌ಐಆರ್ʼ ಅನ್ನೋದು ಬಿಜೆಪಿ ಗೆಲ್ಲಿಲಿಸಲೆಂದೇ ಮಾಡಿರುವ ಡಿಸೈನ್. ಹೊಸ ರೂಲ್ಸ್ ತಂದು ತಯಾರನ್ನ ಬೇಕಿದ್ರೂ ಮತದಾರರ ಪಟ್ಟಿಯಿಂದ ತೆಗೆಯಬಹುದು. ಅಂದ್ರೆ ಸಂವಿಧಾನದ ಪ್ರಕಾರ ನಡೆಯುತ್ತಿದೆ ಅನ್ನೋದಕ್ಕೆ ಆಗುತ್ತಾ? ಇದು ಸಂಪೂರ್ಣ ಅಸಾಂವಿಧಾನಿಕ. ಹಾಗೆಂದ ಮಾತ್ರಕ್ಕೆ ಸರ್ ಮಾಡಬೇಡಿ ಅನ್ನುತ್ತಿಲ್ಲ. ಆದ್ರೆ ಸರಿಯಾದ ರೀತಿಯಲ್ಲಿ ಮಾಡಿ ಎಂದು ಒತ್ತಾಯಿಸಿದ್ದಾರೆ.

ಒಬ್ಬ ನಾಗರೀಕನಿಗೂ ತೊಂದರೆಯಾಗದಂತೆ ಸಂವಿಧಾನದ ಹಕ್ಕನ್ನ ಕೊಡಬೇಕು. ಉದಾಹರಣೆ ನನ್ನ ಹೆಸರು ಪ್ರಿಯಾಂಕ್ ಈ ಹೆಸರಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ವೋಟ್ ಡಿಲೀಟ್ ಆಗಲಿದೆ. ಪಶ್ಚಿಮ ಬಂಗಾಳದಲ್ಲಿ ಅಭ್ಯರ್ಥಿಯ ಹೆಸರನ್ನೇ ವೋಟರ್ ಲಿಸ್ಟ್ ನಿಂದ ತೆಗೆದಿದ್ದಾರೆ. ಇನ್ನೊಬ್ಬರು 17 ವರ್ಷ ಡಿಪ್ಲೊಮೆಟಿಕ್ ಪಾಸ್ ಪೋರ್ಟ್ ಹೋಲ್ಡರ್ ಅವರನ್ನ ಲಿಸ್ಟ್ ನಿಂದ ತೆಗೆದಿದ್ದಾರೆ. ಮಹಾರಾಷ್ಟ್ರದಲ್ಲಿ ವೈಸ್ ಅಡ್ಮಿರಲ್ ಅವರ ವೋಟ್ ಡಿಲೀಟ್ ಆಗಿದೆ. ಬಹುತೇಕ ಜನರನ್ನ ವೋಟ್ ನಿಂದ ದೂರ ಇಟ್ಟಿದ್ದಾರೆ. ಇದು ಕೇವಲ ಮುಸ್ಲೀಮರ ವಿಷಯವಲ್ಲ, ಎಲ್ಲ ವರ್ಗಕ್ಕೂ ಎಸ್ಐಆರ್ ತೊಂದರೆ ಮಾಡುತ್ತಿದೆ ಎಂದಿದ್ದಾರೆ.

