ಕೊಪ್ಪಳ: ಅಂಜನಾದ್ರಿಯ (Anjanadri) ಹುಂಡಿ ಎಣಿಕೆಯಾದ ನಾಲ್ಕು ದಿನಗಳ ಬಳಿಕ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಇದೀಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಅಂಜನಾದ್ರಿ ಬೆಟ್ಟ ಹನುಮ ಹುಟ್ಟಿದ ಸ್ಥಳ ಎಂದೇ ಖ್ಯಾತಿ ಪಡೆದಿದೆ. ಇತ್ತೀಚಿಗೆ ಜು.3ರಂದು ಅಂಜನಾದ್ರಿಯ ಆಂಜನೇಯನ ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಅದಾದ ಬಳಿಕ ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ನಾಲ್ಕು ದಿನಗಳ ಬಳಿಕ ಪತ್ರಿಕಾ ಪ್ರಕಟಣೆ ಹೊರಡಿಸಿದ ತಾಲೂಕು ಆಡಳಿತದ ನಡೆ ಇದೀಗ ಅನುಮಾನಕ್ಕೆ ಗ್ರಾಸವಾಗಿದೆ. ಇದನ್ನೂ ಓದಿ: ಲವ್ ಮಾಡಿದ್ದಕ್ಕೆ ಪೋಷಕರು ಬುದ್ಧಿ ಹೇಳಿದ್ದೇ ತಪ್ಪಾಯ್ತು – ಸ್ಯಾಂಕಿ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
ಇನ್ನೂ ಕಳೆದ ಬಾರಿ ಮಾ.23ರಂದು ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಇದೀಗ 94 ದಿನಗಳಲ್ಲಿ ಬರೋಬ್ಬರಿ 71,77,460 ರೂ. ಕಾಣಿಕೆ ಹಣ ಸಂಗ್ರಹವಾಗಿದೆ. ಕಾಣಿಕೆಯಲ್ಲಿ ನೇಪಾಳ, ಅಮೆರಿಕಾ, ಥೈಲ್ಯಾಂಡ್ ಹಾಗೂ ಹಾಂಕಾಂಗ್ ಕರೆನ್ಸಿ ಪತ್ತೆಯಾಗಿದೆ.
