ಬೆಂಗಳೂರು: ಬಿಎಂಟಿಸಿ (BMTC) ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬಿಎಂಟಿಸಿ ಹೊಸ ಪ್ರಿಪೇಯ್ಡ್ ಕಾರ್ಡ್ ಅನ್ನು ಪರಿಚಯಿಸೋದಕ್ಕೆ ಮುಂದಾಗಿದೆ. ಮೆಟ್ರೋ ಕಾರ್ಡ್‌ನಂತೆಯೇ ಕ್ಯಾಶ್‌ಲೆಸ್ ಪ್ರಯಾಣ ಮಾಡೋದಕ್ಕೆ ರಿಚಾರ್ಜೆಬಲ್ ಪ್ರೀಪೇಯ್ಡ್ ಕಾರ್ಡ್ ಇದಾಗಿದೆ.
ಚಿಲ್ಲರೆ ಕಿರಿ ಕಿರಿ ತಪ್ಪಿಸೋದಕ್ಕೆ. ನೂಕುನುಗ್ಗಲಲ್ಲಿ ಟಿಕೆಟ್ ತಗೋಳೋಕೆ ಸಮಸ್ಯೆ ಇರಲ್ಲ. ಕ್ಯೂರ್ ವಂಚನೆ ಆಗಲ್ಲ. ಪ್ರಯಾಣಿಕರು ಪ್ರಿಪೇಯ್ಡ್ ಕಾರ್ಡ್ ಗೆ (Prepaid Card) ಮಾಡಿಸಿಕೊಂಡು ಕಾರ್ಡ್ ಬಳಕೆ ಮಾಡ್ತಾ ಬಸ್ ನಲ್ಲಿ ಪ್ರಯಾಣ ಮಾಡಬಹುದು.

ಪ್ರಿಪೇಯ್ಡ್ ಕಾರ್ಡ್ ಅನ್ನು ಮಿಷಿನ್ ಡೈರೆಕ್ಟ್ ಟ್ಯಾಪ್ ಮಾಡಿದ್ರೆ ಪ್ರಯಾಣ ಮಾಡುವ ದರ ಕಟ್ ಆಗುತ್ತೆ. ಸೆಕೆಂಡ್ ಗಳಲ್ಲಿ ಟಿಕೆಟ್ ಸಿಗುತ್ತೆ. ಈ ರೀತಿ ಪ್ರಿಪೇಯ್ಡ್ ಕಾರ್ಡ್ ಅನ್ನು ಪರಿಚಯ ಮಾಡೋಕೆ ಬಿಎಂಟಿಸಿ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ಜೂನ್ ತಿಂಗಳಲ್ಲೇ ಈ ವ್ಯವಸ್ಥೆ ಚಾಲ್ತಿಗೆ ಬರುವ ಸಾಧ್ಯತೆಯಿದೆ.
ಪ್ರಿಪೇಯ್ಡ್ ಕಾರ್ಡ್ ಪರಿಚಯ ಮಾಡ್ತಾ ಇರೋ ಬಗ್ಗೆ ಬಿಎಂಟಿಸಿಯ ಸಿಟಿಎಂ ರಾಜೇಶ್ ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿದ್ದಾರೆ. ಮೆಟ್ರೋದಲ್ಲಿ ರೀಚಾರ್ಜೆಬಲ್ ಪ್ರಿಪೇಯ್ಡ್ ಕಾರ್ಡ್ ಇದೆ. ಆದ್ರೆ ಬಿಎಂಟಿಸಿ ಅಲ್ಲಿ, ಇಲ್ಲ ಬಿಎಂಟಿಸಿಯಲ್ಲಿ ಪ್ರಿಪೇಯ್ಡ್ ಕಾರ್ಡ್ ಜಾರಿಗೆ ನಿರ್ಧಾರ ಆಗಿದೆ. ಸ್ಮಾರ್ಟ್ ಕಾರ್ಡ್ ಕೊಡೋದಕ್ಕೂ ಕೂಡ ಪ್ಲ್ಯಾನ್ ಆಗಿದೆ. ಆದರೆ ಸ್ಮಾರ್ಟ್ ಕಾರ್ಡ್ ಬೇರೆ ಮತ್ತೆ ಪ್ರಿಪೇಯ್ಡ್ ಕಾರ್ಡ್ ಬೇರೆ ಎರಡು ಕಾರ್ಡ್ ಜೂನ್ ನಲ್ಲಿ ವಿತರಣೆ ಮಾಡಬೇಕು ಅಂತಾ ಬಿಎಂಟಿಸಿ ನಿರ್ಧರಿಸಿದೆ.

ಪ್ರೀಪೇಯ್ಡ್ ಕಾರ್ಡ್ ದರ ಎಷ್ಟು? ಎಲ್ಲಿ ಸಿಗುತ್ತೆ?
1. ಪ್ರಿಪೇಯ್ಡ್ ಕಾರ್ಡ್ ಬೆಲೆ 50 ರೂಪಾಗಿ ಇರಲಿದೆ
2. ಮಿನಿ, ರೀಚಾರ್ಜ್ 50 ರೂಪಾಯಿ ಗರಿಷ್ಠ ಬ್ಯಾಲೆನ್ಸ್ 10 ಸಾವಿರ
3. ವ್ಯಾಲಿಡಿಟಿ 3 ವರ್ಷ, ಬಳಸುತ್ತಿದ್ರೆ ಆಟೋ-ರಿನಿವಲ್ ಆಗುತ್ತೆ
4. ಟಿಟಿಎಂಸಿ ಸೆಂಟರ್ ಗಳಾದ ಮೆಜೆಸ್ಟಿಕ್, ಶಾಂತಿನಗರ, ಶಿವಾಜಿನಗರ , ಯಶವಂತಪುರ ಮತ್ತು ಕಂಡಕ್ಟರ್ ಮುಖಾಂತರ ಕೂಡ ಪ್ರಿಪೇಯ್ಡ್ ಕಾರ್ಡ್ ವಿತರಣೆಗೆ ನಿರ್ಧರಿಸಲಾಗಿದೆ.
ಹೇಗೆ ಕೆಲಸ ಮಾಡುತ್ತೆ?
1. TTMC ಕೌಂಟರ್‌ನಲ್ಲಿ ಆಧಾರ್ ಮತ್ತು 50+ ರೂಪಾಯಿಗೆ ರೀಚಾರ್ಜ್ ಹಣ ಕೊಟ್ಟು ಕಾರ್ಡ್ ಪಡೆಯಬಹುದು.
2. ಬಸ್ ಹತ್ತಿದಾಗ ಕಂಡಕ್ಟರ್ ETM ಮಿಷನ್‌ಗೆ ಕಾರ್ಡ್ ಟ್ಯಾಪ್ ಮಾಡಬೇಕು. ಇದರಿಂದ ನಿಗದಿತ ಸ್ಥಳಕ್ಕೆ ಅಗತ್ಯ ಬೆಲೆ ಆಟೋ-ಕಟ್ ಆಗಿ ಟಿಕೆಟ್ ಕೈಗೆ ಸಿಗುತ್ತೆ.
