ಐಪಿಎಲ್ 2026 ಪ್ಲೇ ಆಫ್ ರೇಸ್‌ನಲ್ಲಿ ಪಂಜಾಬ್ ಕಿಂಗ್ಸ್ (Punjab Kings) ಸತತ ಆರು ಸೋಲುಗಳಿಂದ ಭಾರಿ ಹಿನ್ನಡೆ ಅನುಭವಿಸಿದೆ. ತಂಡದ ಕಳಪೆ ಪ್ರದರ್ಶನಕ್ಕೆ ನಾಯಕ ಶ್ರೇಯಸ್ ಅಯ್ಯರ್ ಮೇಲೆ ಪಿಬಿಕೆಎಸ್ ಪ್ರೀತಿ ಜಿಂಟಾ (Preity Zinta) ಅಸಮಾಧಾನಗೊಂಡಿದ್ದಾರೆ.
ಐಪಿಎಲ್ ಈ ಋತುವಿನ ಆರಂಭದಿಂದಲೂ ಉತ್ತಮ ಪ್ರದರ್ಶನದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದ ಪಿಬಿಕೆಎಸ್ ಈಗ 4ನೇ ಸ್ಥಾನಕ್ಕೆ ಕುಸಿತ ಕಂಡಿದೆ. ತಂಡದ ಪ್ಲೇ ಆಫ್ ಹಾದಿ ಬಲು ಕಠಿಣ ಎನ್ನುವಂತಾಗಿದೆ. ಇಂದಿನ ಪಂದ್ಯದಲ್ಲಿ ಎಸ್‌ಆರ್‌ಹೆಚ್ ವಿರುದ್ಧ ಸಿಎಸ್‌ಕೆ ಗೆದ್ದರೆ ಶ್ರೇಯಸ್ (Shreyas Iyer) ಪಡೆ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿಯಲಿದೆ. ಇದನ್ನೂ ಓದಿ: IPL 2026 | ʻಜೋಶ್ʼನಲ್ಲಿ ಗೆದ್ದ ಆರ್‌ಸಿಬಿ – ಪ್ಲೇ ಆಫ್‌ಗೆ ರಾಯಲ್ ಎಂಟ್ರಿ
Seeing Preity Zinta man and Shreyas this sad really hurts 🥺😭💔
— Shreyass Eraa (@IyerShreyass) May 17, 2026
ಭಾನುವಾರ ಧರ್ಮಶಾಲಾದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು 23 ರನ್‌ಗಳಿಂದ ಆರ್‌ಸಿಬಿ ವಿರುದ್ಧ ಸೋಲನುಭವಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿಗೆ ವೆಂಕಟೇಶ್ ಅಯ್ಯರ್ ಅಜೇಯ 73 ರನ್‌ಗಳ ಕೊಡುಗೆ ನೀಡಿದರು. ಆ ಮೂಲಕ ಅಗ್ರ ಸ್ಕೋರರ್ ಆಗಿದ್ದರು. ವಿರಾಟ್ ಕೊಹ್ಲಿ ಅವರ ಅಬ್ಬರದ ಅರ್ಧಶತಕದಿಂದಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 222/4 ಸ್ಪರ್ಧಾತ್ಮಕ ಮೊತ್ತವನ್ನು ಗಳಿಸಿತ್ತು. ಆದರೆ, ಪಿಬಿಕೆಎಸ್ 199 ರನ್ ಗಳಿಸಿ 23 ರನ್‌ಗಳಿಂದ ಸೋತಿತು. ಆರ್‌ಸಿಬಿ ಪರ ರಸಿಕ್ ಸಲಾಂ ದಾರ್ ಮೂರು ಹಾಗೂ ಭುವನೇಶ್ವರ್ ಕುಮಾರ್ ಎರಡು ವಿಕೆಟ್‌ಗಳನ್ನು ಪಡೆದು ಗಮನ ಸೆಳೆದರು.
ಪಂದ್ಯದ ನಂತರ ಪಿಬಿಕೆಎಸ್ ಮುಖ್ಯ ತರಬೇತುದಾರ ಡ್ರೆಸ್ಸಿಂಗ್ ಕೋಣೆಯಲ್ಲಿ ನಿರಾಶೆಗೊಂಡರು. ನಾಯಕ ಶ್ರೇಯಸ್ ಅಯ್ಯರ್ ಮೈದಾನದಲ್ಲಿ ಸಹ-ಮಾಲೀಕರಾ ಪ್ರೀತಿ ಜಿಂಟಾ ಅವರೊಂದಿಗೆ ಗಂಭೀರ ಚರ್ಚೆ ನಡೆಸುತ್ತಿರುವ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: IPL Playoffs | ಆರ್‌ಸಿಬಿ ತಂಡದ `ಗೇಮ್ ಚೇಂಜರ್ʼ ಹೇಜಲ್‌ವುಡ್
ಪಂಜಾಬ್ ಕಿಂಗ್ಸ್ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಲಿದೆ. ಈ ಪಂದ್ಯದ ಬಗ್ಗೆ ಶ್ರೇಯಸ್ ಆಶಾವಾದಿಯಾಗಿದ್ದಾರೆ.

