ದೊಡ್ಮನೆಗೆ ಎಂಟ್ರಿ ಕೊಟ್ಟ ದಿನದಿಂದ ರೂಪೇಶ್ ರಾಜಣ್ಣ (Rupesh Rajanna) ಮತ್ತು ಪ್ರಶಾಂತ್ ಸಂಬರ್ಗಿಗೂ ಮಾತಿನ ಜಟಾಪಟಿ ನಡೆಯುತ್ತಲೇ ಇದೆ. ಇತ್ತೀಚೆಗೆ ಕನ್ನಡದ ವಿಷ್ಯವಾಗಿ ಇಬ್ಬರ ನಡುವೆ ವಾಗ್ದಾಳಿ ನಡೆದಿತ್ತು. ಈಗ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಇಬ್ಬರ ನಡುವೆ ಕಿತ್ತಾಟ ನಡೆದಿದೆ.
ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಸಾಕಷ್ಟು ವಿಷ್ಯವಾಗಿ ಸಂಬರ್ಗಿ, ರೂಪೇಶ್ ರಾಜಣ್ಣ ಹೈಲೆಟ್ ಆಗಿದ್ದಾರೆ. ಆಗಾಗ ಇಬ್ಬರ ಮಾತಿನ ವಾಗ್ದಾಳಿ ತಾರಕಕ್ಕೆ ಏರುತ್ತಿದೆ. ಇದೀಗ ಮತ್ತೆ ಅದೇ ರೀತಿಯ ಘಟನೆವೊಂದು ನಡೆದಿದೆ. ವಾರದ ಕ್ಯಾಪ್ಟೆನ್ಸಿ ವಿಷ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ನಿಧಿ ಶೋಧ ಟಾಸ್ಕ್ ನೀಡಲಾಗಿದೆ. ಬಜರ್ ಆದಾಗ ಟಾರ್ಚ್ ಹಿಡಿದುಕೊಂಡು ನಿಧಿ ಶೋಧಕ್ಕೆ ಹೋಗಬೇಕು. ನಂತರ ಚಿನ್ನಕ್ಕಾಗಿ ಡೀಲಿಂಗ್ ಕೂಡ ಮಾಡಬೇಕು. ಈ ಸಂದರ್ಭದಲ್ಲಿ ಪ್ರಶಾಂತ್ ಸಂಬರ್ಗಿ ಅವರಿಂದ ಮೋಸ ಆಗಿದೆ ಎಂದು ಆರೋಪಿಸಿದರು ರೂಪೇಶ್ ರಾಜಣ್ಣ. ಈ ವಿಚಾರಕ್ಕೆ ಕಿತ್ತಾಟ ನಡೆದೇ ಇತ್ತು.
ನಿಮ್ಮ ರೀತಿ ಚಿಲ್ರೆ ಆಟ ಆಡಲ್ಲ. ಬಾಯಿಂದ ಮಾತುಗಳು ಬರ್ತಿವೆ, ಹೇಗೋ ತಡ್ಕೊಂಡಿದೀನಿ. ನಾನು ಏನಿದ್ದರೂ ನೇರವಾಗಿ ಡೀಲ್ ಮಾಡ್ತೀನಿ. ನಿಮ್ಮ ರೀತಿ ಹೇಡಿ ರೀತಿ ಮಾಡಲ್ಲ. ಮೊದಲ ದಿನ ನಿಮಗೆ ಕುತಂತ್ರಿ ಎಂದು ಹೇಳಿದ್ದಾರೆ. ಅದು ಸರಿಯಾಗಿಯೇ ಇದೆ’ ಎಂದರು ರೂಪೇಶ್ ರಾಜಣ್ಣ. ಇದಕ್ಕೆ ಪ್ರಶಾಂತ್ ಸಂಬರ್ಗಿ (Prashant Sambargi) ಟೀಕೆ ಮಾಡಿದರು. ಯಾರ ವಂಶ ಕುತಂತ್ರಿ ಅಂತ ಗೊತ್ತು’ ಎಂದು ಪ್ರಶಾಂತ್ ಹೇಳಿದರು. ಇದಕ್ಕೆ ರೂಪೇಶ್ ಸಿಟ್ಟಾದರು. ಇದನ್ನೂ ಓದಿ:ತಮಿಳು ಬಿಗ್ ಬಾಸ್ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ
ಇಷ್ಟಕ್ಕೆ ನಿಲ್ಲದ ಇವರ ಜಟಾಪಟಿ, ಆಯ್ತು ರಾಜಹುಲಿ ಅವರೇ ಬಿಡಿ ಎಂದಿದ್ದಾರೆ ಸಂಬರ್ಗಿ, ಅದಕ್ಕೆ ಪ್ರತಿಯುತ್ತರವಾಗಿ ನೀವು ಇಲಿ ನಾ ಎಂದು ಸಂಬರ್ಗಿಗೆ ರೂಪೇಶ್ ರಾಜಣ್ಣ ಟಾಂಗ್ (Tong) ಕೊಟ್ಟಿದ್ದಾರೆ. ಮಾಸ್ಟರ್ ಮೈಂಡ್ ಸಂಬರ್ಗಿ ಆಟಕ್ಕೆ ಮನೆಮಂದಿ ಕೂಡ ಗಪ್ ಚುಪ್ ಆಗಿದ್ದಾರೆ.