ವಿಜಯಪುರ: ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದ ಕಬ್ಬು ಬೆಳಗಾರರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದು 3,600 ರೂ. ಬೆಂಬಲ ಬೆಲೆ ಘೋಷಿಸಿದೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಕೃಷ್ಣೆಯ ಒಡಲಿನ ರೈತರು, ಭೀಮಾ ಒಡಲಿನ ರೈತರು ಅಂತಾ ಬೆಂಬಲ ಬೆಲೆ ಕೊಡಲು ಸಕ್ಕರೆ ಕಾರ್ಖಾನೆಗಳು ತಗಾದೆ ತೆಗೆದಿವೆ. ಈ ತಾರತಮ್ಯಕ್ಕೆ ಜಿಲ್ಲೆಯ ರೈತರು ಸಿಡೆದೆದಿದ್ದಾರೆ.
ಕಬ್ಬು ಒಂದು ಟನ್ಗೆ 3,600 ರೂ. ಬೆಂಬಲ ಬೆಲೆಯನ್ನ ರಾಜ್ಯ ಸರ್ಕಾರ ಘೋಷಿಸಿದೆ. ಇದನ್ನ ಬೆಳಗಾವಿ,ಬಾಗಲಕೋಟೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಒಪ್ಪಿಕೊಂಡಿವೆ. ಅಲ್ಲದೆ ವಿಜಯಪುರ ಜಿಲ್ಲೆಯ ಕೃಷ್ಣಾ ನದಿ ಪಾತ್ರದಲ್ಲಿ ಬರುವ ಸಕ್ಕರೆ ಖಾರ್ಖಾನೆಗಳು ಈ ಬೆಲೆ ಕೊಡಲು ಒಪ್ಪಿಕೊಂಡಿವೆ. ಆದ್ರೆ ವಿಜಯಪುರ ಜಿಲ್ಲೆಯ ಭೀಮಾ ನದಿ ಪಾತ್ರದ 7 ಸಕ್ಕರೆ ಕಾರ್ಖಾನೆಗಳು ಈ ಬೆಲೆ ನೀಡಲು ನಿರಾಕರಿಸಿದ್ದು, ತಗಾದೆ ತಗೆದಿದ್ದಾರೆ. ಇದರಿಂದ ಒಂದೇ ಜಿಲ್ಲೆಯಲ್ಲಿ ಈ ತಾರತಮ್ಯ ಏಕೆ ಎಂದು ರೈತರು ಕೆಂಡಾಮಂಡಲರಾಗಿದ್ದಾರೆ. ಇದನ್ನೂ ಓದಿ: 2 ವರ್ಷದ ಬಳಿಕ ಆರ್ಬಿಐ ನಿಗದಿತ ಗರಿಷ್ಠ ಮಿತಿ ದಾಟಿದ ಹಣದುಬ್ಬರ; ಈರುಳ್ಳಿ, ಬೆಳ್ಳುಳ್ಳಿ ದರ ಗಗನಕ್ಕೆ
ಕೃಷ್ಣಾ ನದಿ ಪಾತ್ರದ ಕಬ್ಬು 11.25 ಇಳುವರಿ ಕೊಡುತ್ತವೆ. ಆದರೆ ಭೀಮಾ ನದಿ ಪಾತ್ರದ ಕಬ್ಬು 9.25 ಇಳುವರಿ ಕೊಡುತ್ತವೆ. ಕಾರಣ ಭೀಮಾ ನದಿ ಪತ್ರದ ಸಕ್ಕರೆ ಕಾರ್ಖಾನೆಗಳು 3,600 ರೂ. ಕೊಡಲು ಸಾಧ್ಯವಿಲ್ಲ. 3,300 ರೂ. ಕೊಡುತ್ತವೆ ಅಂತಾ ಹೇಳ್ತಿದ್ದಾರೆ. ಆದ್ರೆ ಭೀಮಾ ನದಿ ಪಾತ್ರದ ರೈತರು ಮಾತ್ರ ಇದನ್ನ ಒಪ್ಪುತ್ತಿಲ್ಲ. ಜೊತೆಗೆ ಸಕ್ಕರೆ ಕಾರ್ಖಾನೆಗಳಲ್ಲಿ ತೂಕದಲ್ಲಿ ಕಳ್ಳಾಟ ನಡೆಸುತ್ತಾರೆ. ಅದರಿಂದ ಇಳುವರಿ ಕಡಿಮೆ ತೋರಿಸುತ್ತದೆ. ರಾಜ್ಯ ಸರ್ಕಾರದಿಂದಲೇ ತೂಕದ ತಪಾಸಣೆ ನಡೆಯಲಿ. ಆಗ ಕಾರ್ಖಾನೆಗಳ ಕಳ್ಳಾಟ ಬಯಲಾಗಲಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಸಕ್ಕರೆ ಕಾರ್ಖಾನೆಗಳಿಗೆ ಬೆಲೆ ನಿರ್ಧರಿಸಿ, ಎರಡು ದಿನ ಗಡುವು ನೀಡಲಾಗಿತ್ತು. ಆದ್ರೆ ಮೂರು ದಿನ ಕಳೆದ್ರೂ ಕಾರ್ಖಾನೆಗಳು ತಮ್ಮ ನಿಲುವು ಪ್ರಕಟಿಸಿಲ್ಲ. ಹೀಗಾಗಿ ರೈತರು ಈ ಕೂಡಲೆ ಬೆಲೆ ಘೋಷಿಸುವರೆಗೂ ಕಾರ್ಖಾನೆ ಬಂದ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಶಾಲೆಯ ಅಡುಗೆ ಕೋಣೆಗೆ ಬೆಂಕಿ ಹಚ್ಚಿ ಸಿಲಿಂಡರ್ ಸ್ಫೋಟಿಸಲು ಯತ್ನ – ಸ್ಥಳೀಯರಿಂದ ಪ್ರತಿಭಟನೆ
