ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ನೆರಳಲ್ಲಿ ಓಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಒಂದೊಂದು ಸಲ ರಾಹುಲ್ ಗಾಂಧಿ (Rahul Gandhi) ತರಹ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಲೇವಡಿ ಮಾಡಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) ಭಾರತ್ ಜೋಡೋ ಯಾತ್ರೆ ಅಂತ ಬಹಳ ದಿನ ರಾಹುಲ್ ಗಾಂಧಿ ಜೊತೆ ನಡೆದಿದ್ದಾರೆ. ಸಹವಾಸ ದೋಷದಿಂದ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ತರಹ ಮಾತನಾಡುತ್ತಿದ್ದಾರೆ ಎಂದ ಅವರು, ಕಾಂಗ್ರೆಸ್ ಏನು ಮಾಡಿಲ್ಲ ಅಂತಾ ಕಳೆದ ಎರಡು ಲೋಕಸಭೆಯಲ್ಲಿ ನಿಮಗೆ ವಿರೋಧ ಪಕ್ಷದ ಅರ್ಹತೆ ಸಿಗಲಿಲ್ಲ. ಎರಡು ರಾಜ್ಯದಲ್ಲಿ ಕಾಂಗ್ರೆಸ್ (Congress) ಇದೆ. ಅದು ಈಗ ಹೋಗೋದಿದೆ. ಆದರೂ ಕಾಂಗ್ರೆಸ್‌ನವರ ದುರಹಂಕಾರ ಕಡಿಮೆ ಆಗಿಲ್ಲ ಎಂದು ಕಿಡಿಕಾರಿದರು.
Advertisement
Advertisement
ನಿನ್ನೆ ಪ್ರಧಾನ ಮಂತ್ರಿಗಳು ಎರಡು, ಮೂರು ಅದ್ಭುತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದೇಶದಲ್ಲಿ ನಿರ್ಮಾಣವಾಗಿದೆ. ಇದು ನಮಗೆಲ್ಲ ಸಂತೋಷ. ಕಳೆದ 7 ವರ್ಷದಲ್ಲಿ ಭಾರತ ಸರ್ಕಾರದಿಂದ ಕರ್ನಾಟಕ ಸರ್ಕಾರಕ್ಕೆ ಅಭೂತ ಪೂರ್ವ ಬೆಂಬಲ ಸಿಕ್ಕಿದೆ. ಹೆದ್ದಾರಿ ಹಾಗೂ ರೈಲ್ವೆಯಲ್ಲಿ ಅಭೂತ ಪೂರ್ವ ಕೆಲಸ ಆಗಿದೆ. 52 ಸಾವಿರ ಕಿ.ಮೀ ರೈಲ್ವೆ ವಿದ್ಯುದ್ದೀಕರಣ ಆಗಿದೆ. 8 ವರ್ಷದಲ್ಲಿ 30 ಸಾವಿರ ಕಿ.ಮೀ ನಮ್ಮ ಕಾಲದಲ್ಲಿ ಆಗಿದೆ. ಕಾಂಗ್ರೆಸ್ 50 ವರ್ಷ ಏನ್ ಮಾಡಿದೆ ಅದನ್ನು ನಾವು 7 ವರ್ಷದಲ್ಲಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಕೇಸ್ – 30 ವರ್ಷಗಳ ನಂತರ ನಳಿನಿ ಶ್ರೀಹರನ್ ಸೇರಿ 3 ಅಪರಾಧಿಗಳು ರಿಲೀಸ್
Advertisement
Advertisement
ನಾವು ಕೆಂಪೇಗೌಡ ಏರ್‌ಪೋರ್ಟ್ ಮಾಡಿದ್ದೇವೆ ಅಂತಾರೆ. ಇದು ಯಡಿಯೂರಪ್ಪ ಕಾಲದಲ್ಲಿ ರೆಸ್ಯೂಲೇಶನ್ ಆಗಿತ್ತು. ಕಾಂಗ್ರೆಸ್‌ನವರಿಗೆ ಅಭಿವೃದ್ಧಿ ಬೇಕಿಲ್ಲ, ಜನರ ಕಲ್ಯಾಣ ಬೇಕಿಲ್ಲ. ನಿಮಗೆ ಬೇಕಾಗಿರೋದು ರಾಜಕಾರಣ ಎಂದು ಆರೋಪಿಸಿದರು. ಇದನ್ನೂ ಓದಿ: ಈರಣ್ಣ ಕಡಾಡಿ ಕಾರಿಗೆ ಮುತ್ತಿಗೆ – ಗಂಭೀರ ಘಟನೆಯಲ್ಲ: ಲಕ್ಷ್ಮಣ ಸವದಿ