ಬೆಂಗಳೂರು: ಹೇಳಿಕೊಳ್ಳೋದಕ್ಕೆ ಬೆಂಗಳೂರಿನ ಮೋಸ್ಟ್ ಅಫಿಶಿಯಲ್ ಏರಿಯಾಗಳು. ಡೈರಿ ಸರ್ಕಲ್, ಕೋರಮಂಗಲ, ಮಡಿವಾಳ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್ ಜಂಕ್ಷನ್ ಇವು ಐಟಿ ಹಬ್‍ನ ಸ್ಥಳಗಳು. ಆದರೆ ರಾತ್ರಿಯಾದರೆ ಸಾಕು ಇದು ಪೋಲಿ ಹುಡುಗರ ಅಡ್ಡವಾಗುತ್ತಿತ್ತು. ಮಹಿಳೆಯರು ಅತ್ಯಂತ ಹೆಚ್ಚು ಓಡಾಡುವ ಈ ಸ್ಥಳದಲ್ಲಿ ಪುಡಾರಿಗಳ ಕಿರಿಕ್‍ನಿಂದಾಗಿ ಹೆಣ್ಣುಮಕ್ಕಳು ಓಡಾಡೋದೇ ಕಷ್ಟ ಎನ್ನುವಂತಾಯಿತು. ಪೊಲೀಸರಿಗೆ ನಿತ್ಯ ದೂರಿನ ಗೋಳು. ಕೂಡಲೇ ಪೊಲೀಸರು ಈ ಭಾಗದ ಎಂಟು ಸ್ಥಳವನ್ನು ಗುರುತಿಸಿ ಮೋಸ್ಟ್ ಡೇಂಜರಸ್ ಪ್ಲೇಸ್ ಹೆಣ್ಣು ಮಕ್ಕಳಿಗೆ ಎಂದು ರೆಡ್ ಮಾರ್ಕ್ ಹಾಕಿದ್ರು.
Advertisement
ಫೀಲ್ಡಿಗಳಿದ ಲೇಡಿ ಡಿಸಿಪಿ:
ಡಿಸಿಪಿ ಇಶಾ ಪಂಥ್ ಈ ಪೋಲಿ ಅಡ್ಡಾವನ್ನು ಗುರುತಿಸಿ ನಮ್ಮ ಕೈಯಲ್ಲಿ ಆಗಲ್ಲ ಅಂತ ಸುಮ್ನೆ ಕೂತಿಲ್ಲ. ಕೂಡಲೇ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಗಮನಕ್ಕೆ ತಂದು ಈ ಕಾಮುಕರ ಅಡ್ಡಾದ ಬಗ್ಗೆ ಮಾಹಿತಿ ಕೊಟ್ಟರು. ಆಗ ಮಾಸ್ಟರ್ ಪ್ಲ್ಯಾನ್ ಶುರುವಾಯ್ತು.
Advertisement
Advertisement
ಮಿಡ್‍ನೈಟ್ ಲೇಡಿಸ್ ದರ್ಬಾರ್:
ಸ್ಥಳೀಯ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಒಂದಿಷ್ಟು ಸೆಲೆಬ್ರಿಟಿಗಳನ್ನು ಒಗ್ಗೂಡಿಸಿ ಈಗ ಬೆಂಗಳೂರು ಪೊಲೀಸರು ಈ ಪೋಲಿ ಅಡ್ಡಾದಲ್ಲಿ ಮಿಡ್‍ನೈಟ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ತಾ ಇದ್ದಾರೆ. ಹೆಣ್ಣು ಮಕ್ಕಳು ಸಕತ್ ಡ್ಯಾನ್ಸ್, ಸಂಗೀತದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ತಾ ಇದ್ದಾರೆ. ಈಗ ಈ ಏರಿಯಾದಲ್ಲಿ ರಾತ್ರಿಯಾಗ್ತಿದ್ದಂತೆ ಹಾಡು ಡ್ಯಾನ್ಸ್ ಕುಣಿತ ಶುರುವಾಗುತ್ತೆ. ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ಸ್ನೇಹದ ವಾತಾವರಣ ಜೊತೆಗೆ ಮಹಿಳೆಯರ ಜೊತೆಗೆ ನಾವಿದ್ದೇವೆ ಎನ್ನುವ ಭರವಸೆಯೂ ಕೊಡುತ್ತಿದ್ದಾರೆ.