ಧಾರವಾಡ: ಮುಂದಿನ ವರ್ಷ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) 3-4 ಬಾರಿ ಬರಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.
ಧಾರವಾಡ (Dharwad) ಹೊರವಲಯದ ಮುಮ್ಮಿಗಟ್ಟಿ ಗ್ರಾಮದ ಹಿಂದೆ ನಿರ್ಮಾಣವಾಗುತ್ತಿರುವ ಐಐಟಿ ಕ್ಯಾಂಪಸ್‌ಗೆ ಭೇಟಿ ನೀಡಿದ ಜೋಶಿ ಪರಿಶೀಲನೆ ನಡೆಸಿ, ಕಟ್ಟಡ ಕಾಮಗಾರಿ ಮುಕ್ತಾಯದ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆಗೆ ಬರಲಿದ್ದಾರೆ. ಜನವರಿ 1ನೇ ತಾರೀಖಿಗೆ ಉದ್ಘಾಟನೆ ಮಾಡಬೇಕು ಎಂಬ ಯೋಜನೆಯಿದೆ. ಕಟ್ಟಡ ತಯಾರಾದರೆ ಅದೇ ದಿನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ನಾನೂ ಗೂಂಡಾಗಿರಿ ಮಾಡ್ತಿದ್ದೆ, ಜೀನ್ಸ್ ಪ್ಯಾಂಟ್ ಹಾಕ್ಕೊಂಡ್ರೆ ಹುಡ್ಗೀರೆಲ್ಲಾ ನನ್ನೇ ನೋಡ್ತಿದ್ರು: ಶ್ರೀರಾಮುಲು
Advertisement
Advertisement
ಲೋಕೋಪಯೋಗಿ ಹಾಗೂ ಗುತ್ತಿಗೆದಾರರಿಗೆ ಜನವರಿ 1ನೇ ತಾರೀಖಿಗೆ ಕಟ್ಟಡ ಕಾಮಗಾರಿ ಮುಗಿಸಲು ಸೂಚನೆ ನೀಡಲಾಗಿದೆ. ಕೋವಿಡ್ ಹಿನ್ನೆಲೆ ಕಟ್ಟಡ ಕಾಮಗಾರಿ ತಡವಾಗಿದೆ. ಡಿಸೆಂಬರ್‌ನಲ್ಲೇ ಉದ್ಘಾಟನೆ ಮಾಡಬೇಕು ಎಂದು ನಾನು ಪ್ರಧಾನಿ ಜೊತೆ ಮಾತನಾಡಿದ್ದೆ ಎಂದು ಹೇಳಿದರು. ಇದನ್ನೂ ಓದಿ: ಪುಟ್ಟರಾಜು ಎಚ್ಚರಿಕೆಯ ಬೆನ್ನಲ್ಲೇ ಪ್ರತಾಪ್ ಸಿಂಹ ರಸ್ತೆ ವೀಕ್ಷಣೆ
Advertisement
ಜನವರಿ ತಿಂಗಳಿನಲ್ಲಿ ಪ್ರಧಾನಿ ಮೋದಿ 3-4 ಬಾರಿ ರಾಜ್ಯಕ್ಕೆ ಬರಲಿದ್ದಾರೆ. ಅದೇ ವೇಳೆ ಈ ಕಾರ್ಯಕ್ರಮ ಇಡಲಾಗಿದೆ. ಮುಂದಿನ ವಾರ ನಾನು ಮತ್ತೆ ಐಐಟಿಗೆ ಭೇಟಿ ನೀಡಿ ತೀರ್ಮಾನ ಮಾಡುತ್ತೇನೆ ಎಂದರು.