– ನಿಮ್ಮ ಬಳಿ ಇರಬೇಕು 58 ಸಾವಿರ ರೂ. ಹಣ
ಬ್ಯಾಂಕಾಕ್: ಥಾಯ್ಲೆಂಡ್ ಟೂರ್‌ಗೆ (Thailand Trip) ಹೋಗೋ ಪ್ಲ್ಯಾನ್ ಮಾಡಿದವರು ಗಮನಕೊಡಿ. ಬ್ಯಾಂಕಾಕ್‌ನಲ್ಲಿರುವ ಭಾರತದ ದೂತವಾಸ ಕಚೇರಿ ಪ್ರವಾಸಕ್ಕೆ ಬರುವ ತನ್ನ ಪ್ರಜೆಗಳಿಗೆ ಪರಿಷ್ಕೃತ ಪ್ರಯಾಣ ಮಾರ್ಗಸೂಚಿ ಹೊರಡಿಸಿದೆ.

ಇದರಲ್ಲಿ ಕನಿಷ್ಠ 6 ತಿಂಗಳ ವ್ಯಾಲಿಡ್ ಪಾಸ್‌ಪೋರ್ಟ್, ಡಿಜಿಟಲ್ ಅರೈವಲ್ ಕಾರ್ಡ್, ಖಚಿತಪಡಿಸಿದ ಫ್ಲೈಟ್ ರಿಟರ್ನ್ ಟಿಕೆಟ್, ಹೊಟೇಲ್ ಬುಕ್ಕಿಂಗ್, ಪ್ರಯಾಣದ ವಿವರ, ಮತ್ತು ಪ್ರತಿ ಪ್ರಯಾಣಿಕರಿಗೆ 58 ಸಾವಿರ ಭಾರತೀಯ (Indians) ರೂಪಾಯಿ (20,000 ಥಾಯ್ ಬಾಟ್) ನಗದು ಇಟ್ಟುಕೊಂಡಿರಬೇಕು ಎಂದು ಹೇಳಿದೆ.

ಕುಟುಂಬ ಅಥವಾ ಗುಂಪು ಪ್ರವಾಸದ ವೇಳೆ ಇಮಿಗ್ರೇಷನ್‌ಗೆ ಅನುವಾಗುವಂತೆ ವೈಯಕ್ತಿಕವಾಗಿ ದಾಖಲೆ ಹಿಡಿದುಕೊಂಡಿರಬೇಕು. ಬಿಸಿನೆಸ್‌ಗೆ ಹೋಗುವವರು ಟೂರಿಸ್ಟ್ ಎಂಟ್ರಿ ಬಳಸದೇ, ವ್ಯಾಲಿಡ್ ವರ್ಕ್ ವೀಸಾ ಹೊಂದಿರಬೇಕು ಅಂದಿದೆ. ಪ್ರಯಾಣವು ಸುಗಮವಾಗಿರಲು ಅಗತ್ಯವಿರುವ ನಿರ್ದಿಷ್ಟ ವಲಸೆ ನಿಯಮಗಳನ್ನ ಈ ಪರಿಷ್ಕೃತ ಮಾರ್ಗಸೂಚಿಗಳ ವಿವರಿಸಿವೆ.

