ರಾಯಚೂರು: ರಾಜ್ಯದೆಲ್ಲೆಡೆ ಚುನಾವಣಾ (Election) ಕಾವು ದಿನೇ ದಿನೇ ಏರುತ್ತಿದೆ. ಆದರೆ ಬಿಸಿಲನಾಡು ರಾಯಚೂರಿನಲ್ಲಿ (Raichur) ಚುನಾವಣೆ ಬಿಸಿಯ ಜೊತೆ ಜೊತೆಗೆ ಬಿಸಿಲಿನ (Sunny) ತಾಪ ಕೂಡ ಏರುತ್ತಿದೆ. ಈ ವರ್ಷ ದಾಖಲೆಯ ತಾಪಮಾನ ದಾಖಲಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಬಿಸಿಲೂರ ಜನರ ದಿನಚರಿಯೇ ಬದಲಾಗುತ್ತಿದೆ.
ರಾಯಚೂರು ಜಿಲ್ಲೆಯನ್ನು ಬಿಸಿಲನಾಡು ಎಂದು ಕರೆಯುವುದೇನೋ ನಿಜ. ಆದರೆ ಬಿಸಿಲಿನ ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲಿದೆ. ಅದರಲ್ಲೂ ಪ್ರಸ್ತುತ ಚುನಾವಣಾ ವರ್ಷದಲ್ಲಿ ರಣಬಿಸಿಲು ಎಲ್ಲರನ್ನೂ ತತ್ತರಿಸುವಂತೆ ಮಾಡುತ್ತಿದೆ. ಸದ್ಯ ಗರಿಷ್ಠ ತಾಪಮಾನ 39.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, 42.5 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಬಿಜೆಪಿಗೆ ನ್ಯಾಯಾಲಯಗಳಲ್ಲಿ ನಂಬಿಕೆ ಇಲ್ಲ, ಇದು ನಕಲಿ ಎನ್ಕೌಂಟರ್ : ಅಖಿಲೇಶ್ ಯಾದವ್
Advertisement
Advertisement
ಈ ಹಿಂದೆ 2016-17ರಲ್ಲಿ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈ ವರ್ಷ ಕೂಡ ದಾಖಲೆ ಮಟ್ಟದ ತಾಪಮಾನ ದಾಖಲಾಗುವ ಮುನ್ಸೂಚನೆಯಿದೆ. ಆಗಾಗ ಎರಡು ಬಾರಿ ಅಕಾಲಿಕ ಮಳೆ (Rain) ಬಂದು ಸ್ವಲ್ಪ ತಂಪೆರೆದಿತ್ತು. ಅದು ಬಿಟ್ಟರೆ ಉಳಿದ ದಿನಗಳಲ್ಲಿ ಬೆಳಗ್ಗೆ 9 ಗಂಟೆಯಾಗುತ್ತಲೇ ಸುಡುಬಿಸಿಲು ಕೇಕೆ ಹಾಕುತ್ತದೆ. ಇದರಿಂದ ಜಿಲ್ಲೆಯ ಜನ ಮನೆಯಿಂದ ಹೊರಬರಲು ಹೆದರುವಂತಾಗಿದೆ. ಮನೆಯಲ್ಲಿದ್ದರಿಗೆ ಬಿಸಿಲಿನ ಝಳ ಸಾಕು ಎನಿಸುತ್ತಿದೆ. ಏಪ್ರಿಲ್ ಅಂತ್ಯ ಹಾಗೂ ಮೇ ತಿಂಗಳಿನಲ್ಲಿ ಬಿಸಿಲು ಇನ್ನೂ ಹೆಚ್ಚಾಗಲಿದೆ ಎಂದು ರಾಯಚೂರು ಕೃಷಿ ವಿಜ್ಞಾನ ವಿವಿಯ ಜಿಕೆಎಂಎಸ್ ವಿಭಾಗದ ತಾಂತ್ರಿಕ ಅಧಿಕಾರಿ ಶಾಂತಪ್ಪ ದುತ್ತರಗಾಂ ತಿಳಿಸಿದ್ದಾರೆ. ಇದನ್ನೂ ಓದಿ: ವೇದಿಕೆಯಲ್ಲಿ ನಂದಿನಿ ವೆನಿಲ್ಲಾ ಫ್ಲೇವರ್ ಹಾಲು ಕುಡಿದ ಸಿದ್ದರಾಮಯ್ಯ
Advertisement
Advertisement
ದಿನೇ ದಿನೇ ತಾಪಮಾನ ಹೆಚ್ಚುತ್ತಿರುವುದರಿಂದ ರಾಯಚೂರಿನಲ್ಲಿ ಮಣ್ಣಿನ ಹಾಗೂ ಪಿಓಪಿ ಬಾಟಲ್, ಮಡಿಕೆಗಳ ವ್ಯಾಪಾರ ಜೋರಾಗಿ ನಡೆದಿದೆ. ಜನ ಹೆಚ್ಚಾಗಿ ಹಣ್ಣು, ತಂಪುಪಾನೀಯ, ಎಳನೀರಿನ ಮೊರೆಹೋಗುತ್ತಿದ್ದಾರೆ. ಆದರೆ ಬಿಸಿಲು ಹೆಚ್ಚಾಗುತ್ತಿದ್ದಂತೆ ಮಕ್ಕಳು, ವಯೊವೃದ್ಧರಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಚರ್ಮ ರೋಗ, ಸನ್ ಸ್ಟ್ರೋಕ್, ಡಿಹೈಡ್ರೇಷನ್, ಗಂಟಲು ಸೋಂಕು, ಟೈಫಾಯಿಡ್, ಅತೀಸಾರದಂತ ಕಾಯಿಲೆಗಳು ಕಾಣಿಸಿಕೊಳ್ಳತೊಡಗಿದೆ. ಹೀಗಾಗಿ ಎಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಎಂ.ಪಿ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡ್ತಾರೆ: ಸಿ.ಟಿ ರವಿ
ಬಿಸಿಲಿನ ಬೇಗೆ ನೀಗಿಸಿಕೊಳ್ಳಲು ಎಲ್ಲೆಂದರಲ್ಲಿ ಐಸ್ಕ್ರೀಮ್, ಜ್ಯೂಸ್, ತಂಪು ಪಾನೀಯ ಕುಡಿಯದಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಬಿಸಿಲನಾಡಿನ ಜನತೆ ಬೇಸಿಗೆ ಯಾವಾಗ ಮುಗಿಯುತ್ತೋ ಎಂದು ಕಾಯುತ್ತಿರುವುದಂತೂ ಸುಳ್ಳಲ್ಲ. ಇದನ್ನೂ ಓದಿ: RSSಗೆ ಯಾವುದೇ ಗ್ರಂಥ, ಗುರು ಇಲ್ಲ: ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಟೀಕೆ