ಗಾಂಧಿನಗರ: ಆಮ್ ಆದ್ಮಿ ಪಕ್ಷದ (AAP) ಪರವಾಗಿ ಇಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಗುಜರಾತಿನ ನವಸಾರಿಗೆ ತಲುಪಿದ ವೇಳೆ ಅಲ್ಲಿನ ಜನ ಮೋದಿ-ಮೋದಿ, ಚೋರ್-ಚೋರ್ ಎಂದು ಘೋಷಣೆ ಕೂಗುತ್ತಾ ಕಪ್ಪು ಬಾವುಟ (Black Flags) ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
#WATCH | People chanted ‘Modi Modi’ and ‘Chor Chor’ slogans and showed black flags to Delhi CM and AAP national convener Arvind Kejriwal as his cavalcade passed by in Gujarat’s Navsari today pic.twitter.com/trNJFdIjRQ
— ANI (@ANI) October 29, 2022
Advertisement
ನವಸಾರಿ ಜಿಲ್ಲೆಯ ಚಿಲ್ಜಿಯಲ್ಲಿ ಚುನಾವಣಾ (Elections) ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಲು ಕೇಜ್ರಿವಾಲ್ ತೆರಳಿದ್ದರು. ಈ ವೇಳೆ ಕೇಜ್ರಿವಾಲ್ ಬೆಂಬಲಿಗರ ವಾಹನಗಳು ಜಿಲ್ಲೆ ಪ್ರವೇಶಿಸುತ್ತಿದ್ದಂತೆ ರಸ್ತೆಯುದ್ದಕ್ಕೂ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಅಲ್ಲದೇ ಮೋದಿ ಪರವಾಗಿ `ಮೋದಿ-ಮೋದಿ’ ಎಂದು ಘೋಷಣೆ ಕೂಗುತ್ತಾ, ಎಎಪಿ ನಾಯಕರನ್ನು `ಚೋರ್-ಚೋರ್’ ಎಂದು ಕರೆಯುವ ಮೂಲಕ ಎಎಪಿಯನ್ನ ಬಹಿಷ್ಕರಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣದಲ್ಲಿ ಆಪರೇಷನ್ ಕಮಲಕ್ಕೆ ಯತ್ನ – ಅಮಿತ್ ಶಾರನ್ನು ಬಂಧಿಸಿ: ಮನೀಶ್ ಸಿಸೋಡಿಯಾ
Advertisement
Advertisement
ಇದನ್ನ ಸಕಾರಾತ್ಮಕವಾಗಿಯೇ ಸ್ವೀಕರಿಸಿದ ಕೇಜ್ರಿವಾಲ್, ಕಪ್ಪು ಬಾವುಟ ತೋರಿಸಿದವರು ಹಾಗೂ ಮೋದಿ ಮೋದಿ ಎಂದು ಕೂಗಿದವರನ್ನು ನನ್ನ ಸಹೋದರರು ಅಂದುಕೊಳ್ಳುತ್ತೇನೆ. ನನಗೆ ಅವರ ಮೇಲೆ ಬೇಸರವಿಲ್ಲ. ಮುಂದೊಂದು ದಿನ ಅವರ ಹೃದಯ ಗೆದ್ದು, ಅವರನ್ನು ಆಪ್ ಪಕ್ಷಕ್ಕೆ ಸೇರಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಸ್ಲಿಮರಿಗೂ ಮೀಸಲಾತಿ ಹೆಚ್ಚಿಸಿ – ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ
Advertisement
ಜನರು ತಮ್ಮ ಆಯ್ಕೆಯ ಪಕ್ಷಕ್ಕೆ ಮತ ಹಾಕಬಹುದು. ಉಚಿತ ಹಾಗೂ ಗುಣಮಟ್ಟದ ಶಿಕ್ಷಣ (Quality Education), ವೈದ್ಯಕೀಯ ಚಿಕಿತ್ಸೆ (Medical TreatMent) ಸಿಗುವುದು ಎಎಪಿ ಪಕ್ಷದಿಂದ ಮಾತ್ರ ಎಂಬುದನ್ನು ಮನಸಿನಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ.
ನಾನು ಯಾರ ವಿರೋಧಿಯೂ ಅಲ್ಲ, ಜನಪ್ರತಿನಿಧಿ ಚುನಾವಣೆಯಲ್ಲಿ ಗೆದ್ದು ಬಂದರೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಕೊಡಿಸುತ್ತೇನೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಮತ ಹಾಕಿದವರನ್ನೂ ಒಳಗೊಂಡಂತೆ ಎಲ್ಲರಿಗೂ ಉತ್ತಮ ಶಾಲೆಗಳನ್ನು ನಿರ್ಮಿಸಿಕೊಡುತ್ತೇನೆ ಎಂದ ಅವರು, ಬಿಜೆಪಿ ಡಬಲ್ ಇಂಜಿನ್ ಸರ್ಕಾರದಲ್ಲಿ ಒಂದು ಇಂಜಿನ್ ಹಾಳಾಗಿದೆ. ಇನ್ನೊಂದು ಇಂಜಿನ್ ಹಳೆಯದ್ದಾಗಿದೆ. ನಮಗೆ ಹೊಸ ಇಂಜಿನ್ ಬೇಕು ಎಂದು ಕುಟುಕಿದ್ದಾರೆ.