ವಿಜಯಪುರ: ಉಡುಪಿಯ ಪೇಜಾವರ ಶ್ರೀಗಳು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿದು ವಿಜಯಪುರ ಜಿಲ್ಲೆಯಲ್ಲಿ ಭಕ್ತರು ಆತಂಕಗೊಂಡಿದ್ದಾರೆ.
ಶ್ರೀಗಳ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಸಿಗದೆ ಭಕ್ತರು ಪರದಾಡುತ್ತಿದ್ದಾರೆ. ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿ ಅಂತ ಭಕ್ತರು ದೇವರ ಮೊರೆ ಹೋಗಿದ್ದಾರೆ. ನಗರದ ನಂಜನಗೂಡು ರಾಯರ ಮಠದಲ್ಲಿ ಹಾಗೂ ಕೃಷ್ಣ ವಾದಿರಾಜ ಮಠದಲ್ಲಿ ನೂರಾರು ಭಕ್ತರು ಭಜನೆ,ಹಾಡುಗಳ ಮೂಲಕ ಪ್ರಾರ್ಥನೆ ಮಾಡುತ್ತಿದ್ದಾರೆ.
Advertisement
Advertisement
ಶ್ರೀಗಳ ಗುಣವಾಗುವಿಕೆಯ ಸುದ್ದಿ ಕೇಳಲು ಭಕ್ತವೃಂದ ಕಾದು ಕುಳಿತಿದೆ. ಪ್ರಾರ್ಥನೆಯಲ್ಲಿ ಪಂಡಿತ್ ಬಿಂದು ಮಧ್ವಾಚಾರ್ಯ, ಗೋಪಾಲ ನಾಯ್ಕ, ಆರ್ ಆರ್ ಕುಲಕರ್ಣಿ, ರವಿ ಆಚಾರ್ಯ ಸೇರಿದಂತೆ ಇತರರು ಸೇರಿದಂತೆ ನೂರಾರು ಮಹಿಳೆಯರು ಹಾಗೂ ಪುರುಷರು ಪ್ರಾರ್ಥನೆ ಪಾಲ್ಗೊಂಡಿದ್ದರು.
Advertisement
ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಶ್ರೀಗಳಿಗೆ ತೀವ್ರ ಉಸಿರಾಟದ ತೊಂದರೆ ಉಂಟಾಗಿದೆ. ಕೂಡಲೇ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ಸದ್ಯ ಶ್ರೀಗಳಿಗೆ ಆಸ್ಪತ್ರೆಯ ಐಸಿಯುನಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ಮಠದ ಮೂಲಗಳು ತಿಳಿಸಿವೆ.