ವಿಜಯಪುರ: ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಯುವಕನೊಬ್ಬ ಅರೆಬೆತ್ತಲಾಗಿ ಪ್ರತಿಭಟನೆ (Half Naked Protest) ಮಾಡಿದ್ದಾನೆ. ಆದರೆ ಕುಡಿಯುವ ನೀರು ಕೇಳಿದ್ದಕ್ಕೆ ಗ್ರಾಮ ಪಂಚಾಯತ್ ಪಿಡಿಒ (PDO) ಯುವಕನಿಗೆ ಕಪಾಳಮೋಕ್ಷ ಮಾಡಿರುವ ಘಟನೆ ವಿಜಯಪುರ (Vijaypura) ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ನಡೆದಿದೆ.
ಅರೆಬೆತ್ತಲೆಯಾಗಿ ಗ್ರಾಮ ಪಂಚಾಯಿತಿಗೆ ಆಗಮಿಸಿದ ಯುವಕ ಸಂತೋಷ್ ಮಳೆಯಾಗಿಲ್ಲ, ಕುಡಿಯಲು ನೀರು ಬಿಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾನೆ. ಪಿಡಿಒ ಶೋಭಾ ಹೊರಪೇಟ ಅವರನ್ನು ತಮ್ಮ ಕಚೇರಿಯೊಳಗೆ ಹೋಗಲು ಬಿಡದೇ ತಡೆದು ಪ್ರತಿಭಟಿಸಿದ್ದಕ್ಕೆ ಪಿಡಿಒ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದನ್ನೂ ಓದಿ: ಸಿಪಿ ಯೋಗೇಶ್ವರ್ ಬಾವ ಮಹದೇವಯ್ಯ ಪತ್ತೆಗೆ ನಾಲ್ಕು ತಂಡ ರಚನೆ: ಎಸ್ಪಿ
ನೀರು ಕೊಡದೇ ಹೋಗಿದ್ದಕ್ಕೆ ಪ್ರತಿಭಟಿಸಿ, ನೀರು ಬಿಡುವಂತೆ ಆಗ್ರಹಿಸಿದ್ದಕ್ಕೆ ಯುವಕನಿಗೆ ಕಪಾಳಮೋಕ್ಷ ಮಾಡಿದ ಪಿಡಿಒ ಶೋಭಾ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕರ್ತವ್ಯನಿರತ ಕೆಎಸ್ಆರ್ಟಿಸಿ ಬಸ್ ಚಾಲಕ ಹೃದಯಾಘಾತದಿಂದ ಸಾವು