ಕಲಬುರಗಿ: ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ (Stray Dog Attack) ದಾಳಿ ನಡೆಸಿದ ಪರಿಣಾಮ ಚಿಕಿತ್ಸೆ ಫಲಿಸದೇ ಬಾಲಕ (Boy) ಸಾವನಪ್ಪಿರುವ ಘಟನೆ ಕಲಬುರಗಿ (Kalaburagi) ನಗರದ ದರಿಯಾಪುರ ಕೋಟನೂರ್ ಬಡಾವಣೆಯಲ್ಲಿ ನಡೆದಿದೆ.
4 ವರ್ಷದ ಮನೋಜ್ ಪೂಕಾರಿ (4) ಮೃತ ಬಾಲಕ. ಮನೋಜ್ ಕಲಬುರಗಿ ತಾಲೂಕಿನ ಜಂಬಗಾ ಗ್ರಾಮದ ಶರಣಬಸಪ್ಪಾ ಪೂಜಾರಿ ಪುತ್ರ. ವಾಚ್ ಮೆನ್ ಕೆಲಸ ಮಾಡಿಕೊಂಡಿದ ಶರಣಬಸಪ್ಪಾ ಕೆಲಸದ ನಿಮಿತ್ಯ ಕಲಬುರಗಿಯಲ್ಲಿ ವಾಸವಾಗಿದ್ದರು. ಇದನ್ನೂ ಓದಿ: IAF ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್
ಗಾಣದೇವತೆ ದೇವಸ್ಥಾನದ ರಸ್ತೆಯಲ್ಲಿ ಆಟವಾಡುತ್ತಿದ್ದ ಮನೋಜ್ ಮೇಲೆ ಏಕಾಏಕಿ ಬೀದಿ ನಾಯಿ ದಾಳಿ ನಡೆಸಿದೆ. ದಾಳಿಯಿಂದ ಗಂಭಿರ ಗಾಯಗೊಂಡಿದ್ದ ಮನೋಜ್ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಐದೇ ದಿನಗಳಲ್ಲಿ ATM ದರೋಡೆ ಖದೀಮರು ಅರೆಸ್ಟ್ – ಸಿಸಿಟಿವಿ ದೃಶ್ಯಗಳ ಮೂಲಕ ಹೆಡೆಮುರಿ ಕಟ್ಟಿದ ಬೀದರ್ ಪೊಲೀಸರು
