ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಆಸ್ಪತ್ರೆಗೆ ದಾಖಲು

Public TV
2 Min Read
Pawan Kalyan

ತೆಲುಗು ಪವರ್ ಸ್ಟಾರ್, ರಾಜಕಾರಣಿ ಪವನ್ ಕಲ್ಯಾಣ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರು ದಿಢೀರ್ ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆ ಪವನ್ ಕಲ್ಯಾಣ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

PAWAN KALYAN a

ಮೂಲಗಳ ಪ್ರಕಾರ, ಪವನ್ ಕಲ್ಯಾಣ್ ಅವರು ಹೈ ಫೀವರ್‌ನಿಂದ ಬಳಲುತ್ತಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಹಿನ್ನೆಲೆ ಪವನ್ ಕಲ್ಯಾಣ್ ಅವರು ದಿಢೀರ್ ಎಂದು ಅಸ್ವಸ್ಥಗೊಂಡಿದ್ದು, ಆಸ್ಪತ್ರೆ ದಾಖಲಿಸಲಾಗಿದ್ದಾರೆ. ಪವನ್ ಅವರ ಅನಾರೋಗ್ಯ ಕಾರಣದಿಂದ ಜನಸೇನಾ ಪಕ್ಷ ಹಮ್ಮಿಕೊಂಡಿದ್ದ ಜನವಾಣಿ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ನೆಚ್ಚಿನ ನಟ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಈ ಪ್ರಕರಣದಿಂದ ಮುಕ್ತನಾಗಿ ಬರುತ್ತೇನೆ ಎಂದು ಮೊದಲೇ ಗೊತ್ತಿತ್ತು: ಪತ್ನಿ, ಪುತ್ರನಿಗೆ ಸಿಹಿ ತಿನಿಸಿ ಈಶ್ವರಪ್ಪ ಸಂಭ್ರಮಾಚರಣೆ

pawan kalyan

ಪವನ್ ಕಲ್ಯಾಣ್ ಮಾತ್ರವಲ್ಲದೇ ಅವರ ಪಕ್ಷದ ಕೆಲವು ಪ್ರಮುಖ ನಾಯಕರು, ಕಾರ್ಯಕ್ರಮ ಸಮಿತಿ ಸದಸ್ಯರು ಮತ್ತು ಭದ್ರತಾ ಸಿಬ್ಬಂದಿ ಸಹ ಜ್ವರದಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಪವನ್ ಅವರು ಜನವಾಣಿ ಕಾರ್ಯಕ್ರಮದ ಅಂಗವಾಗಿ ಎರಡೂ ಗೋದಾವರಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದರು. ಅದಕ್ಕೆ ಜ್ವರ ಜಾಸ್ತಿ ಆಗಿರಬೇಕು ಎನ್ನಲಾಗಿದೆ. ಆದರೆ ಈ ಬಗ್ಗೆ ಪವನ್ ಕಲ್ಯಾಣ್ ಅಥವಾ ಅವರ ಪಕ್ಷದ ಕಡೆಯಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

pawan kalyan

ಪವನ್ ಕಲ್ಯಾಣ್ ಆಂಧ್ರಪ್ರದೇಶದ ಜನರ ಕಷ್ಟಗಳನ್ನು ಅರಿಯಲು ಪ್ರತಿ ಭಾನುವಾರ ಜನವಾಣಿ-ಜನಸೇನಾ ಭರೋಸಾ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ವಿಜಯವಾಡ ಮತ್ತು ಭೀಮಾವರಂನಲ್ಲಿ ಈಗಾಗಲೇ ಮೂರು ಹಂತದ ಜನವಾಣಿ ಕಾರ್ಯಕ್ರಮಗಳು ಪೂರ್ಣಗೊಂಡಿವೆ. ಪವನ್ ಕಲ್ಯಾಣ್ ರಾಯಲಸೀಮಾ ಮತ್ತು ಉತ್ತರ ಕರಾವಳಿ ಆಂಧ್ರದಲ್ಲಿ ಇನ್ನೂ ಎರಡು ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧರಾಗಿದ್ದಾರೆ. ಆದರೀಗ ಪವನ್ ಕಲ್ಯಾಣ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ಕಾರ್ಯಕ್ರಮವನ್ನು ಸದ್ಯಕ್ಕೆ ಮುಂದೂಡಲಾಯಿತು. ಇದನ್ನೂ ಓದಿ: ಪತ್ನಿಗೆ ‘ಐ ಲೈಕ್ ಯೂ’ ಎಂದು ಕಾಮೆಂಟ್ ಮಾಡಿದವನ ಮೇಲೆ ಪತಿ ಫುಲ್ ಗರಂ – ಯುವಕನಿಗೆ ಬಿತ್ತು ಗೂಸಾ 

Pawan Kalyan

ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ಮನೋಹರ್ ಅವರು, ಜನವಾಣಿ ಕಾರ್ಯಕ್ರಮ ಜುಲೈ 24ರ ಬದಲಿಗೆ ಜುಲೈ 31ರಂದು ನಡೆಸಲಾಗುವುದು ಎಂದು ಪ್ರಕಟನೆ ರಿವೀಲ್ ಮಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *