LatestMain PostNational

ಪತ್ನಿಗೆ ‘ಐ ಲೈಕ್ ಯೂ’ ಎಂದು ಕಾಮೆಂಟ್ ಮಾಡಿದವನ ಮೇಲೆ ಪತಿ ಫುಲ್ ಗರಂ – ಯುವಕನಿಗೆ ಬಿತ್ತು ಗೂಸಾ

Advertisements

ಚಂಢೀಗಢ: ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವುದು, ಅದನ್ನು ನೋಡಿ ಜನರು ಕಾಮೆಂಟ್ ಮಾಡುವುದು ಸಾಮಾನ್ಯ. ಆದರೆ ಯುವಕನೊಬ್ಬ ಮಹಿಳೆಯೊಬ್ಬಳಿಗೆ ‘ಐ ಲೈಕ್ ಯೂ’ ಎಂದು ಕಾಮೆಂಟ್ ಮಾಡಿದ್ದಕ್ಕೆ ಪತಿ ಗರಂ ಆಗಿರುವ ಸುದ್ದಿಯೊಂದು ಪಂಜಾಬ್‍ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಮುಂಬೈ, ಪುಣೆ, ಪಂಜಾಬ್ ಮತ್ತು ದೆಹಲಿ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ಹಾಸ್ಯದ ಚಟಾಕಿ ಹಾರಿಸುವುದರಲ್ಲಿ ಹೆಸರುವಾಸಿ. ಈ ಮೂಲಕ ಅವರು ನಾಗರಿಕರನ್ನು ರಕ್ಷಿಸುವ ಮತ್ತು ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದಾರೆ. ಈ ಬಾರಿ, ಟ್ವಿಟ್ಟರ್ ಬಳಕೆದಾರರು ಸಮಸ್ಯೆಯೊಂದರ ಕುರಿತು ಪೊಲೀಸರನ್ನು ಸಂಪರ್ಕಿಸಿದಾಗ ಪಂಜಾಬ್ ಪೊಲೀಸರು ಆ ಪೋಸ್ಟ್ ಅನ್ನು ರೀ-ಟ್ವೀಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಖರೀದಿ ಹೆಸರಿನಲ್ಲಿ ಲಕ್ಷಾಂತರ ರೂ. ಮೌಲ್ಯದ 26 ಸೀರೆ ಕಳ್ಳತನ ಮಾಡಿದ್ದ ಖತರ್ನಾಕ್ ಗ್ಯಾಂಗ್

ಯುವಕ ಸುಶಾಂತ್ ದತ್ ಟ್ವಿಟ್ಟರ್ ಮಾಡಿದ್ದು, ನಾನು ಮಹಿಳೆಯೊಬ್ಬರಿಗೆ ‘ಐ ಲೈಕ್ ಯೂ’ ಎಂದು ಸಂದೇಶವನ್ನು ಕಳುಹಿಸಿದ ನಂತರ ಆಕೆಯ ಪತಿ ನನಗೆ ಥಳಿಸಿದ್ದಾರೆ. ಅವರು ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ ವೇಳೆ ಪ್ರತಿಬಾರಿಯೂ ನಾನು ಅವರ ಬಳಿ ಕ್ಷಮೆ ಕೇಳಿದ್ದೇನೆ. ಆದರೂ ಅವರು ನನ್ನನ್ನು ಬಿಟ್ಟಿಲ್ಲ. ಈಗ ನಾನು ನನ್ನ ಸುರಕ್ಷತೆಯ ಬಗ್ಗೆ ಚಿಂತಿತನಾಗಿದ್ದೇನೆ. ಅದಕ್ಕೆ ನಾನು ಪೊಲೀಸರ ಸಹಾಯವನ್ನು ಕೋರುತ್ತಿದ್ದೇನೆ ಎಂದು ಟ್ವೀಟ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಈ ಪೋಸ್ಟ್ ನೋಡಿದ ಪೊಲೀಸರು ತಮ್ಮ ಟ್ವಿಟ್ಟರ್‌ನಲ್ಲಿ ರೀ-ಟ್ವೀಟ್ ಮಾಡಿಕೊಂಡಿದ್ದಾರೆ. ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಪಂಜಾಬ್ ಪೊಲೀಸರು, ಮಹಿಳೆಗೆ ನೀವು ಕಳುಹಿಸಿರುವ ಅನಗತ್ಯ ಸಂದೇಶದ ಬಗ್ಗೆ ಯಾಕೆ ಯೋಚಿಸುತ್ತಿದ್ದೀರಿ. ಆದರೆ ಅವರು ನಿಮ್ಮನ್ನು ಹೊಡೆಯಬಾರದಿತ್ತು. ಅವರು ನಿಮ್ಮ ಬಗ್ಗೆ ನಮಗೆ ವರದಿ ಮಾಡಿರಬೇಕಿತ್ತು. ಆಗ ನಾವು ಕಾನೂನಿನ ಅಡಿಯಲ್ಲಿ ಸರಿಯಾಗಿ ಕ್ರಮ ತೆಗೆದುಕೊಳ್ಳುತ್ತೀದ್ದೆವು. ಈ ಎರಡೂ ಅಪರಾಧಗಳಿಗೂ ಕಾನೂನಿನ ಪ್ರಕಾರ ಸರಿಯಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬರೆದು ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ಕಲಾಪ ಅಡ್ಡಿಪಡಿಸುವುದು, ನಂತರ ಸುಳ್ಳು ಹೇಳುವುದು, ಇಷ್ಟೇ ಕಾಂಗ್ರೆಸ್ ಅಜೆಂಡಾ: ಜೋಶಿ ಟೀಕೆ 

ಈ ಪೋಸ್ಟ್ ಬಳಿಕ ಮತ್ತೊಂದು ಟ್ವೀಟ್ ಮಾಡಿದ ಪೊಲೀಸರು, ನೀವು ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿ ಎಂದು ಹೇಳಿದ್ದಾರೆ. ಈ ಟ್ವೀಟ್ ನೋಡಿದ ನೆಟ್ಟಿಗರು ಮನರಂಜನೆ ರೀತಿ ಎಂಜಾಯ್ ಮಾಡುತ್ತಿದ್ದಾರೆ.

Live Tv

Leave a Reply

Your email address will not be published.

Back to top button