Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಲಾಥಮ್ – ಯಂಗ್ ಶತಕಗಳ ಅಬ್ಬರಕ್ಕೆ ಪಾಕ್ ಪಂಚರ್; ನ್ಯೂಜಿಲೆಂಡ್‌ಗೆ 60 ರನ್‌ಗಳ ಭರ್ಜರಿ ಜಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಲಾಥಮ್ – ಯಂಗ್ ಶತಕಗಳ ಅಬ್ಬರಕ್ಕೆ ಪಾಕ್ ಪಂಚರ್; ನ್ಯೂಜಿಲೆಂಡ್‌ಗೆ 60 ರನ್‌ಗಳ ಭರ್ಜರಿ ಜಯ

Cricket

ಲಾಥಮ್ – ಯಂಗ್ ಶತಕಗಳ ಅಬ್ಬರಕ್ಕೆ ಪಾಕ್ ಪಂಚರ್; ನ್ಯೂಜಿಲೆಂಡ್‌ಗೆ 60 ರನ್‌ಗಳ ಭರ್ಜರಿ ಜಯ

Public TV
Last updated: February 20, 2025 4:29 pm
Public TV
Share
2 Min Read
Tom Latham and Will Young
SHARE

ಕರಾಚಿ: ವಿಲ್‌ ಯಂಗ್‌, ಟಾಮ್ ಲ್ಯಾಥಮ್ ಅಬ್ಬರದ ದ್ವಿಶತಕದಾಟದ ನೆರವಿನಿಂದ ಚಾಂಪಿಯನ್ಸ್‌ ಟ್ರೋಫಿ ಏಕದಿನ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕ್‌ ವಿರುದ್ಧ ನ್ಯೂಜಿಲೆಂಡ್‌ 60 ರನ್‌ಗಳ ಭರ್ಜರಿ ಜಯಗಳಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಕಿವೀಸ್‌ 50 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 320 ರನ್‌ಗಳಿಸಿದರು. 321 ರನ್‌ ಗುರಿ ಬೆನ್ನತ್ತಿದ ಪಾಕಿಸ್ತಾನ ಬ್ಯಾಟಿಂಗ್‌ ವೈಫಲ್ಯದಿಂದ 260 ರನ್‌ಗಳಿಗೆ ಆಲೌಟ್‌ ಆಗಿ ನ್ಯೂಜಿಲೆಂಡ್‌ಗೆ ಶರಣಾಯಿತು.

Pakistan vs New Zealand

ಬಾಬರ್ ಅಜಮ್ (64), ಖುಷ್ದಿಲ್ ಷಾ (69), ಸಲ್ಮಾನ್ ಆಘಾ (42) ತಂಡಕ್ಕೆ ಆಶಾದಾಯಕ ಆಟವಾಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಉಳಿದ ಬ್ಯಾಟರ್‌ಗಳ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತಂಡದ ಸೋಲಿಗೆ ಕಾರಣವಾಯಿತು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್‌ ಪರ ವಿಲ್ ಯಂಗ್ ಪ್ರಸಕ್ತ ಆವೃತ್ತಿಯ ಪ್ರಥಮ ಶತಕ ಸಿಡಿಸಿ ಮೆರೆದಾಡಿದರು. ಇದರೊಂದಿಗೆ ಲಾಥಮ್ ಅವರ ಅಜೇಯ ಶತಕ, ಗ್ಲೇನ್ ಫಿಲಿಪ್ಸ್ ಅವರ ಸ್ಫೋಟಕ ಅರ್ಧಶತಕ ಸಂಕಷ್ಟದಲ್ಲಿದ್ದ ಕಿವೀಸ್‌ಗೆ ಜೀವ ತುಂಬಿತು.

ನ್ಯೂಜಿಲೆಂಡ್ ತಂಡಕ್ಕೆ ಪಾಕಿಸ್ತಾನದ ವೇಗದ ಬೌಲರ್ ಗಳು ಆರಂಭದಿಂದಲೇ ಕಾಟ ನೀಡಿದರು. ವೇಗಿಗಳಾದ ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ ಕರಾರುವಾಕ್ ಬೌಲಿಂಗ್ ನಲ್ಲಿ ಆರಂಭದಲ್ಲಿ ಕಿವೀಸ್ ಬ್ಯಾಟರ್ ಗಳು ಬಹಳ ತಿಣುಕಾಡಿದರು. ಅಷ್ಟೂ ಸಾಲದೆಂಬಂತೆ ಲೆಗ್ ಸ್ಪಿನ್ನರ್ ಅಬ್ರಾರ್ ಅಹ್ಮದ್ ಸಹ ನ್ಯೂಜಿಲೆಂಡ್ ತಂಡದ ರನ್ ಧಾರಣೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಹೀಗಾಗಿ ನ್ಯೂಜಿಲೆಂಡ್ ತಂಡ 40 ರನ್ ಗಳಿಸುವಷ್ಟರಲ್ಲೇ 2 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 17 ಎಸೆತಗಳನ್ನು ಎದುರಿಸಿ 10 ರನ್ ಗಳಿಸಿದ್ದ ಕಾನ್ವೆ ಅವರ ವಿಕೆಟ್ ಎಗರಿಸುವಲ್ಲಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಯಶಸ್ವಿಯಾದರು. ಬಳಿಕ ಕೇನ್ ವಿಲಿಯಂಸನ್ ಅವರ ವಿಕೆಟ್ ಅನ್ನು ವೇಗಿ ನಸೀಮ್ ಶಾ ಎಗರಿಸಿದರು.

Pakistan vs New Zealand fans

ಯಂಗ್- ಲಾಥಮ್ ಜೊತೆಯಾಟ
4ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಆಗಮಿಸಿದ ಡೆರಿಲ್ ಮಿಚೆಲ್ ಅವರು ಸಹ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನೆಲೆಯೂರಲಿಲ್ಲ. 10 ರನ್ ಗಳಿಸಿದ್ದ ಅವರಿಗೆ ಹ್ಯಾರಿಸ್ ರೌಫ್ ಅವರು ಪೆವಿಲಿಯನ್ ದಾರಿ ತೋರಿದರು. ಆ ಬಳಿಕ ಒಂದಾದ ಆರಂಭಿಕ ವಿಲ್ ಯಂಗ್ ಮತ್ತು 5ನೇ ಕ್ರಮಾಂಕದ ಬ್ಯಾಟರ್ ಟಾಮ್ ಲಾಥಮ್ 4ನೇ ವಿಕೆಟ್ ಗೆ ಮಹತ್ವದ 118 ರನ್ ಗಳ ಜೊತೆಯಾಟವಾಡಿದರು. ಇನ್ನೂ ಶತಕ ಸಿಡಿಸಿ ಯಂಗ್ ಪೆವಿಲಿಯನ್ ಗೆ ಮರಳುತ್ತಿದ್ದಂತೆ ಜೊತೆಗೂಡಿದ ಗ್ಲೇನ್ ಫಿಲಿಪ್ಸ್ ಹಾಗೂ ಲಾಥಮ್ ಜೋಡಿ ಕೇವಲ 74 ಎಸೆತಗಳಲ್ಲಿ 125 ರನ್ ಜೊತೆಯಾಟ ನೀಡಿತು. ಇದರಿಂದ ಕಿವೀಸ್ 300 ರನ್ ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

ಕಿವೀಸ್ ಪರ ಲಾಥಮ್ ಅಜೇಯ 118 ರನ್ ( 104 ಎಸೆತ, 10 ಬೌಂಡರಿ, 3 ಸಿಕ್ಸರ್), ವಿಲ್ ಯಂಗ್ 113 ಎಸೆತಗಳಲ್ಲಿ 107 ರನ್ (113 ಎಸೆತ, 1 ಸಿಕ್ಸರ್, 12 ಬೌಂಡರಿ), ಗ್ಲೇನ್ ಫಿಲಿಪ್ಸ್ 39 ಎಸೆತಗಳಲ್ಲಿ ಸ್ಫೋಟಕ 61 ರನ್ (4 ಸಿಕ್ಸರ್ 3 ಬೌಂಡರಿ), ಡಿವೋನ್ ಕಾನ್ವೆ, ಡೇರಿಲ್ ಮಿಚೆಲ್ ತಲಾ 10 ರನ್ ಗಳಿಸಿದ್ರೆ, ಕೇನ್ ವಿಲಿಯಂಸನ್ 1 ರನ್ ಗಳಿಸಿದ್ರು.

ಪಾಕ್ ಪರ ನಸೀಮ್ ಶಾ, ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಕಿತ್ತರೆ, ಅಬ್ರಾರ್ ಅಹ್ಮದ್ ಒಂದು ವಿಕೆಟ ಪಡೆದರು.

Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Akeal Hosein and Sanju Samson
Cricket

ಸಂಜು ಬೆಂಕಿ ಶತಕ| ಚೆನ್ನೈ ಸೂಪರ್‌ ಆಟಕ್ಕೆ ಮುಂಬೈ ಪಲ್ಟಿ – 5ನೇ ಸ್ಥಾನಕ್ಕೆ ಹೈಜಂಪ್‌

Public TV
By Public TV
6 hours ago
Donald Trump USA India Relationship
Latest

ಭಾರತದ ಬಗ್ಗೆ ಬಾಯಿಗೆ ಬಂದಂತೆ ಟ್ರಂಪ್‌ ಪೋಸ್ಟ್‌ – ಈಗ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಅಮೆರಿಕ

Public TV
By Public TV
7 hours ago
Supreme Court 1
Court

ʻವಾಟ್ಸಾಪ್ ಯುನಿವರ್ಸಿಟಿʼಯಲ್ಲಿ ಬಂದ ಮಾಹಿತಿ ಒಪ್ಪಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌

Public TV
By Public TV
7 hours ago
TAMILUNADU ELECTION
Latest

ತಮಿಳುನಾಡು ಇತಿಹಾಸದಲ್ಲೇ ದಾಖಲೆ ಬರೆದ ಮತದಾರ – 89.69% ರಷ್ಟು ಮತದಾನ

Public TV
By Public TV
8 hours ago
ELEPHANT ATTACK
Chikkamagaluru

ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ – ಗಾರ್ಡ್‌ ಸ್ಥಿತಿ ಗಂಭೀರ

Public TV
By Public TV
8 hours ago
West Bengal voting
Latest

ಬಂಗಾಳದಲ್ಲಿ ದಾಖಲೆ – ಅತಿ ಹೆಚ್ಚು ಮತದಾರರು ಡಿಲೀಟ್ ಆದ ಕ್ಷೇತ್ರದಲ್ಲಿ ಹೆಚ್ಚು ವೋಟಿಂಗ್‌!

Public TV
By Public TV
8 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?