Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದಾಳಿಗೆ ಹೆದರಿ 72 ಟೆರರ್‌ ಲಾಂಚ್‌ಪ್ಯಾಡ್‌ ಸ್ಥಳಾಂತರಿಸಿದ ಪಾಕ್ – ಆಪರೇಷನ್ ಸಿಂಧೂರ್ 2.0ಗೂ ಸಿದ್ಧ ಎಂದ ಬಿಎಸ್‌ಎಫ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ದಾಳಿಗೆ ಹೆದರಿ 72 ಟೆರರ್‌ ಲಾಂಚ್‌ಪ್ಯಾಡ್‌ ಸ್ಥಳಾಂತರಿಸಿದ ಪಾಕ್ – ಆಪರೇಷನ್ ಸಿಂಧೂರ್ 2.0ಗೂ ಸಿದ್ಧ ಎಂದ ಬಿಎಸ್‌ಎಫ್‌

Latest

ದಾಳಿಗೆ ಹೆದರಿ 72 ಟೆರರ್‌ ಲಾಂಚ್‌ಪ್ಯಾಡ್‌ ಸ್ಥಳಾಂತರಿಸಿದ ಪಾಕ್ – ಆಪರೇಷನ್ ಸಿಂಧೂರ್ 2.0ಗೂ ಸಿದ್ಧ ಎಂದ ಬಿಎಸ್‌ಎಫ್‌

Public TV
Last updated: November 30, 2025 10:27 pm
Public TV
Share
2 Min Read
BSF
SHARE

ಶ್ರೀನಗರ: ಆಪರೇಷನ್ ಸಿಂಧೂರ್‌ನಿಂದ (Operation Sindoor) ಕಂಗೆಟ್ಟ ಪಾಕಿಸ್ತಾನ (Pakistan) ಸುಮಾರು 72 ಉಗ್ರರ ಲಾಂಚ್‌ಪ್ಯಾಡ್‌ಗಳನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಿದೆ ಎಂದು ಬಿಎಸ್‌ಎಫ್ (BSF) ಡಿಐಜಿ ವಿಕ್ರಮ್ ಕುನ್ವರ್ ತಿಳಿಸಿದ್ದಾರೆ.

ವಿಕ್ರಮ್ ಕುನ್ವರ್, ಜಮ್ಮು ಗಡಿನಾಡಿನ ಬಿಎಸ್‌ಎಫ್ ಐಜಿ ಶಶಾಂಕ್ ಆನಂದ್ ಮತ್ತು ಡಿಐಜಿ ಕುಲ್ವಂತ್ ರಾಯ್ ಶರ್ಮಾ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ 2025 ರಲ್ಲಿ ಪಡೆಯ ಸಾಧನೆಗಳನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಸರ್ಕಾರ ಗಡಿಯಾಚೆಗಿನ ಕಾರ್ಯಾಚರಣೆಯನ್ನು ಪುನರಾರಂಭಿಸಲು ನಿರ್ಧರಿಸಿದರೆ ಶತ್ರುಗಳ ಹುಟ್ಟಡಗಿಸಲು ಸೇನಾ ಪಡೆಗಳು ಸಿದ್ಧವಾಗಿವೆ. ಅದಕ್ಕಾಗಿ ಆಪರೇಷನ್ ಸಿಂಧೂರ್ 2.0ಗೆ ಸಿದ್ಧವಾಗಿದ್ದೇವೆ. ಆದರೆ ಘರ್ಷಣೆಯ ನಂತರ ಕೈಗೊಳ್ಳಲಾದ ಕದನ ವಿರಾಮವನ್ನು ಭದ್ರತಾ ಪಡೆಗಳು ಗೌರವಿಸುತ್ತವೆ ಎಂದಿದ್ದಾರೆ. ಇದನ್ನೂ ಓದಿ: ಮೊದಲು ನಾವು ದಾಳಿ ಮಾಡಲ್ಲ, ಪ್ರತೀಕಾರ ತೀರಿಸಲು ಹಿಂದೆ ಸರಿಯಲ್ಲ: ಆಪರೇಷನ್ ಸಿಂಧೂರಕ್ಕೆ ದ್ರೌಪದಿ ಮುರ್ಮು ಮೆಚ್ಚುಗೆ

Masood Azhar Operation Sindoor Bahawalpur 1

ಆಪರೇಷನ್ ಸಿಂಧೂರ್ ಸಮಯದಲ್ಲಿ ಗಡಿಯುದ್ದಕ್ಕೂ ಅನೇಕ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳನ್ನು‌ ಬಿಎಸ್ಎಫ್ ನಾಶಪಡಿಸಿದೆ. ಇದಾದ ನಂತರ, ಪಾಕಿಸ್ತಾನ ಸರ್ಕಾರ ಅಂತಹ ಎಲ್ಲಾ ಸೌಲಭ್ಯಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. ಸುಮಾರು 12 ಲಾಂಚ್‌ಪ್ಯಾಡ್‌ಗಳು ಸಿಯಾಲ್‌ಕೋಟ್ ಮತ್ತು ಜಫರ್ವಾಲ್‌ನ ಪ್ರದೇಶಗಳಿಂದ ಕಾರ್ಯನಿರ್ವಹಿಸುತ್ತಿವೆ. ಅವು ನಿಖರವಾಗಿ ಗಡಿಯಲ್ಲಿಲ್ಲ. ಅದೇ ರೀತಿ, 60 ಲಾಂಚ್‌ಪ್ಯಾಡ್‌ಗಳು ಗಡಿಯಿಂದ ದೂರದಲ್ಲಿರುವ ಇತರ ಆಳ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಈ ಲಾಂಚ್‌ಪ್ಯಾಡ್‌ಗಳು ಮತ್ತು ಅವುಗಳಲ್ಲಿರುವ ಭಯೋತ್ಪಾದಕರು ಬದಲಾಗುತ್ತಲೇ ಇದ್ದಾರೆ. ಉಗ್ರರು ಅಲ್ಲಿ ಶಾಶ್ವತವಾಗಿ ಕುಳಿತುಕೊಳ್ಳುವುದಿಲ್ಲ. ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸುವಾಗ ಅವು ಸಾಮಾನ್ಯವಾಗಿ ಸಕ್ರಿಯವಾಗಿರುತ್ತವೆ. ಅವರನ್ನು ಎರಡು ಅಥವಾ ಮೂರು ಗುಂಪುಗಳಿಗಿಂತ ಹೆಚ್ಚಾಗಿ ಇರಿಸುವುದಿಲ್ಲ. ಪ್ರಸ್ತುತ ಅಂತರರಾಷ್ಟ್ರೀಯ ಗಡಿಯ ಸಮೀಪವಿರುವ ಪ್ರದೇಶಗಳಲ್ಲಿ ಯಾವುದೇ ತರಬೇತಿ ಶಿಬಿರಗಳಿಲ್ಲ ಎಂದು ತಿಳಿಸಿದರು.

ಹಿಂದೆ ಜೈಶ್-ಎ-ಮೊಹಮ್ಮದ್‌ಗೆ ಸೇರಿದವರು ಕೆಳಭಾಗದ ಪ್ರದೇಶಗಳಲ್ಲಿ ಸಕ್ರಿಯರಾಗಿರುತ್ತಿದ್ದರು. ಲಷ್ಕರ್-ಎ-ತೈಬಾದವರು ಮೇಲ್ಭಾಗದಲ್ಲಿ ಸಕ್ರಿಯರಾಗಿರುತ್ತಿದ್ದರು. ಆಪರೇಷನ್ ಸಿಂಧೂರ್ ನಂತರ, ಅವರು ಮಿಶ್ರ ಗುಂಪನ್ನು ರಚಿಸಿದ್ದಾರೆ. ಆಪರೇಷನ್ ಸಿಂಧೂರ್‌ನ್ನು ಪುನರಾರಂಭಿಸಲು ನಿರ್ಧರಿಸಿದರೆ ಸರ್ಕಾರದ ಆದೇಶಗಳನ್ನು ಪಾಲಿಸಲು ಬಿಎಸ್‌ಎಫ್ ಸಿದ್ಧವಾಗಿದೆ ಎಂದು ಐಜಿ ಆನಂದ್ ಹೇಳಿದರು.

ನಮಗೆ ಅವಕಾಶ ಸಿಕ್ಕರೆ, ಮೇ ತಿಂಗಳಲ್ಲಿ ಮಾಡಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ನಾವು ಉಂಟುಮಾಡುವ ಸಾಮರ್ಥ್ಯ ಹೊಂದಿದ್ದೇವೆ. ಸರ್ಕಾರ ಯಾವುದೇ ನಿರ್ದಾರ ಕೈಗೊಂಡರೂ ಬಿಎಸ್‌ಎಫ್ ತನ್ನ ಪಾತ್ರವನ್ನು ನಿರ್ವಹಿಸಲಿದೆ ಎಂದಿದ್ದಾರೆ. ಇದನ್ನೂ ಓದಿ: ಆಪರೇಷನ್‌ ಸಿಂಧೂರಕ್ಕೆ ಜೈಶ್‌ ನೆಲೆಗಳು ಉಡೀಸ್‌ – ಪುನರ್‌ ನಿರ್ಮಾಣಕ್ಕೆ ನಿಧಿ ಕೋರಿದ ಉಗ್ರ ಸಂಘಟನೆ

TAGGED:BSFOperation Sindoorpakistan
Share This Article
Facebook Whatsapp Whatsapp Telegram

Cinema news

nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories

You Might Also Like

siddaramaiah dk shivakumar car
Bengaluru City

ಒಂದೇ ಕಾರ್‌ನಲ್ಲಿ ಸಿಎಂ-ಡಿಸಿಎಂ ಪ್ರಯಾಣ; ಇಬ್ಬರು ನಾಯಕರಿಂದ ಅಚ್ಚರಿ ನಡೆ

Public TV
By Public TV
40 seconds ago
SN Narayanaswamy Bangarpet MLA
Bengaluru City

ಮೇ 15ರೊಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ: ಬಂಗಾರಪೇಟೆ ನಾರಾಯಣಸ್ವಾಮಿ

Public TV
By Public TV
19 minutes ago
Madhu Bangarappa 1
Bagalkot

SSLC ಪರೀಕ್ಷೆಯಲ್ಲಿ 45 ಸಾವಿರ ವಿದ್ಯಾರ್ಥಿಗಳು ಫೇಲ್: ಮಧು ಬಂಗಾರಪ್ಪ

Public TV
By Public TV
20 minutes ago
R Ashok 1
Bengaluru City

ಸರ್ಕಾರ ಗುಂಡಿ ಮುಚ್ಚಿದ ಹಣವನ್ನು ಗುಂಡಿಗೆ ಹಾಕಿದೆ – ಅಶೋಕ್‌ ವಾಗ್ದಾಳಿ

Public TV
By Public TV
37 minutes ago
Suhas Sudhakar H.D Kumaraswamy
Chitradurga

ಹೆಚ್‌ಡಿಕೆ ʻಹೆಬ್ಬೆಟ್ಟು’ ಹೇಳಿಕೆಯಿಂದ ನೋವಾಗಿದೆ – ಬೇಸರ ಹೊರಹಾಕಿದ ಡಿ.ಸುಧಾಕರ್ ಪುತ್ರ

Public TV
By Public TV
37 minutes ago
DK Shivakumar Iqbal Hussain
Districts

ಮೇ 15ಕ್ಕೆ ಡಿಕೆಶಿ ಸಿಎಂ ಆಗೋದು ಫಿಕ್ಸ್, ಇದೇ ನನ್ನ ಅಂತಿಮ ದಿನಾಂಕ: ಇಕ್ಬಾಲ್ ಹುಸೇನ್

Public TV
By Public TV
58 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?