DistrictsKarnatakaLatestMain PostShivamogga

ಸಾಕುನಾಯಿಯ ಹುಟ್ಟುಹಬ್ಬಕ್ಕೆ 13 ಸಾವಿರ ರೂ. ಹಾಸಿಗೆ ಗಿಫ್ಟ್ ಕೊಟ್ಟ ಮಾಲೀಕ!

- 150 ಮಂದಿಗೆ ಬಿರಿಯಾನಿ ಊಟ

ಶಿವಮೊಗ್ಗ: ಶ್ವಾನಪ್ರಿಯರೊಬ್ಬರು ತಾವು ಸಾಕಿರುವ ಮುದ್ದಿನ ಶ್ವಾನದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಮನೆಯ ಮುಂದೆ ಪೆಂಡಾಲ್ ಹಾಕಿಸಿ, ಕೇಕ್ ಕಟ್ ಮಾಡಿಸಿ ಶ್ವಾನದ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿದ್ದಾರೆ.

ಹೌದು, ಶಿವಮೊಗ್ಗದ ರಾಗಿಗುಡ್ಡ ನಿವಾಸಿ ಮೊಹಮ್ಮದ್ ಅಯಾಜ್ ಅವರು ಸೈಬೀರಿಯನ್ ಹಸ್ಕಿ ತಳಿಯ ಶ್ವಾನವೊಂದನ್ನು ಸಾಕಿದ್ದಾರೆ. ಅದಕ್ಕೆ ‘ಟೈಸನ್’ ಎಂದು ಹೆಸರಿಟ್ಟಿದ್ದಾರೆ. ಜನವರಿ 13ರಂದು ಟೈಸನ್ ಗೆ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮವಾಗಿತ್ತು. ಟೈಸನ್ ಮೊದಲ ವರ್ಷದ ಹುಟ್ಟುಹಬ್ಬಕ್ಕಾಗಿ ಮೊಹಮ್ಮದ್ ಅಯಾಜ್ ಅವರು ರಾಗಿ ಗುಡ್ಡದ ತಮ್ಮ ಮನೆ ಬಳಿ ಪೆಂಡಾಲ್ ಹಾಕಿಸಿದ್ದರು. ಇದನ್ನೂ ಓದಿ: ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅಮೆರಿಕ ನೆರವಿನಿಂದ ಮಹಿಳಾ-ಮಕ್ಕಳ ಆರೋಗ್ಯ ಕೇಂದ್ರ

ಜನವರಿ 13ರ ಸಂಜೆ ಕೇಕ್ ಕಟ್ ಮಾಡಿ, ತಮ್ಮ ಸ್ನೇಹಿತರಿಗೆಲ್ಲ ಚಿಕನ್ ಬಿರಿಯಾನಿ ಊಟ ಹಾಕಿಸಿದ್ದಾರೆ. ಶ್ವಾನದ ಹುಟ್ಟುಹಬ್ಬಕ್ಕೆ ಸುಮಾರು 150 ಮಂದಿ ಪಾಲ್ಗೊಂಡಿದ್ದರು. ಅಲ್ಲದೇ ತಮ್ಮ ಮೆಚ್ಚಿನ ಶ್ವಾನಕ್ಕೆ 13 ಸಾವಿರ ರೂಪಾಯಿಯ ಮೆತ್ತನೆಯ ಹಾಸಿಗೆಯೊಂದನ್ನು ಖರೀದಿಸಿದ್ದಾರೆ. ಟೈಸನ್ ಆರಾಮಾಗಿ ಕೂರಬೇಕು. ಹಾಗಾಗಿ, ಈ ಹಾಸಿಗೆ ತರಿಸಿ ಗಿಫ್ಟ್ ಮಾಡಿದ್ದೇನೆ ಎನ್ನುತ್ತಾರೆ.

ಮೊಹಮ್ಮದ್ ಅಯಾಜ್ ಚನ್ನಗಿರಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಭಾರೀ ಮಳೆಯಲ್ಲಿ ನೆನೆದು ಬಂದ ನಾಯಿಯೊಂದಕ್ಕೆ ಹೊಟೇಲ್ ಬಳಿ ಆಶ್ರಯ ನೀಡಿದ್ದರಂತೆ. ಅಯಾಜ್ ಗೆ ಪ್ರತಿದಿನ 25 ರೂ. ಕೂಲಿ ಹಣ ಸಿಗುತ್ತಿತ್ತು. ಆ ಹಣವೆಲ್ಲ ನಾಯಿಯ ಹಾಲು, ತಿಂಡಿಗೆ ಖರ್ಚಾಗುತ್ತಿತ್ತು. ಆ ನಾಯಿ ಎರಡು ಮರಿ ಹಾಕಿತ್ತು. ಹೊಟೇಲ್ ಗೆ ಬಂದವರು ಯಾರೋ ನಾಯಿ ಮರಿಗಳನ್ನು ಕೊಂಡೊಯ್ದಿದ್ದರು. ನಾಯಿಗಾಗಿ ಚನ್ನಗಿರಿಯ ಬೀದಿ ಬೀದಿಗಳಲ್ಲಿ ಅಯಾಜ್ ಹುಡುಕಾಟ ನಡೆಸಿದ್ದರು, ಆದರೂ ಮರಿಗಳು ಸಿಗಲಿಲ್ಲ.  ಇದನ್ನೂ ಓದಿ: ‘ಪುಷ್ಪಾ’ ಸಿನಿಮಾಗೆ ಮುದ್ದಾದ ಗೌರವ ಸಲ್ಲಿಸಿದ ಅಮುಲ್

ಪ್ರಸ್ತುತ ಟೈಲ್ಸ್ ಕೆಲಸ ಮೇಸ್ತ್ರಿಯಾಗಿರುವ ಅಯಾಜ್, ಟೈಲ್ಸ್ ಕೆಲಸಕ್ಕೆ ಹೋಗುವಾಗ ಟೈಸನ್ ಅನ್ನು ಬೊಮ್ಮನಕಟ್ಟೆಯಲ್ಲಿರುವ ಕೆನಾಲಲ್ ನಲ್ಲಿ(ಶ್ವಾನಗಳ ಕೇರ್ ಸೆಂಟರ್) ಬಿಟ್ಟು ಹೋಗುತ್ತಾರೆ. ಸಂಜೆ ಬರುವಾಗ ಟೈಸನ್ ಮನೆಗೆ ಕರೆದುಕೊಂಡು ಹೋಗುತ್ತಾರೆ. ಒಟ್ಟಿನಲ್ಲಿ ಅಯಾಜ್ ಅವರ ಶ್ವಾನ ಪ್ರೀತಿಗೆ ನಿಜಕ್ಕೂ ಒಂದು ಸೆಲ್ಯೂಟ್.

Leave a Reply

Your email address will not be published.

Back to top button