ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಒಂದೂವರೆ ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕಿನ ದಾಸನಪುರ (Dasanapura) ನಗರೂರಿನಲ್ಲಿ ನಡೆದಿದೆ.
ಚಾರ್ವಿಕ @ ದಿಯಾ ಮೃತ ಮಗು. ಚಾರ್ವಿಕ ಚಿತ್ರದುರ್ಗದ ಯಳಗೂಡು ನಿವಾಸಿಗಳಾದ ಸುಪ್ರಿತ ಹಾಗೂ ಪ್ರದೀಪ್ ದಂಪತಿಯ ಪುತ್ರಿಯಾಗಿದ್ದು, ಅಜ್ಜಿ ರೇಖಾ ಹಾಗೂ ತಾತ ಗುರು ಅವರ ಮನೆಯಲ್ಲಿ ಸಾಕಿಕೊಂಡಿದ್ದರು. ಮಗುವನ್ನ ಹಾಲು ಬಿಡಿಸುವ ಉದ್ದೇಶದಿಂದ ಅಜ್ಜಿ ತಾತನ ಮನೆಯಲ್ಲಿ ಬಿಡಲಾಗಿತ್ತು. ಮೂರು ದಿನದ ಹಿಂದೆ ಕಫ ಜಾಸ್ತಿಯಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಧಾರ್ಮಿಕ ಆಚರಣೆಗೆ ಜಾತಿ ಬಣ್ಣ – ರಾಹುಲ್ ವಿರುದ್ಧ SC/ST ಕಾಯ್ದೆ ಅಡಿ ಕೇಸ್ ದಾಖಲು
ಐಸಿಯುನಲ್ಲಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮಗು ಮಗು ಮೃತಪಟ್ಟಿದೆ. ಘಟನೆ ಸಂಬಂಧ ನೆಲಮಂಗಲ ಶವಗಾರಕ್ಕೆ ಮಗು ಮೃತದೇಹ ರವಾನಿಸಲಾಗಿದೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಧರ್ಮದ ಬಗ್ಗೆ ಪ್ರೀತಿಯಿದ್ದರೆ ಅದನ್ನ ಮನಸ್ಸಿನಲ್ಲಿಟ್ಟುಕೊಳ್ಳಬೇಕು: ಭೋಜೇಗೌಡ
