– ಸೆ. 26, 27 ರಂದು ವಾರಾಂತ್ಯ ರಜೆ; ಸತತ 5 ದಿನ ಶಾಖಾ ಸೇವೆಗೆ ಅಡಚಣೆ ಸಾಧ್ಯತೆ
ನವದೆಹಲಿ: ಸೆಪ್ಟೆಂಬರ್ 28 ರಿಂದ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಸಲಹೆಯೊಂದನ್ನು ನೀಡಿದೆ.
ಮುಷ್ಕರದ ಅವಧಿಯಲ್ಲಿ ಉಂಟಾಗಬಹುದಾದ ಅಡಚಣೆಗಳನ್ನು ತಪ್ಪಿಸಲು, ಶಾಖೆಗೆ ಸಂಬಂಧಿಸಿದ ಪ್ರಮುಖ ಕೆಲಸಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸುವಂತೆ ಬ್ಯಾಂಕ್ ಗ್ರಾಹಕರಿಗೆ ಕೋರಿದೆ. ಇದನ್ನೂ ಓದಿ: TMC ಹೆಸರು, ಚಿಹ್ನೆ ಬಳಕೆಗೆ ತಡೆ – ಮಮತಾ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಅಸ್ತು
ಸೆ. 28, 29, 30 ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ನಡೆಯಲಿದೆ. ಸೆ. 26, 27ರಂದು ವಾರಾಂತ್ಯ ರಜೆ ಇರಲಿದೆ. ಹೀಗಾಗಿ, ಸತತ 5 ದಿನ ಶಾಖಾ ಸೇವೆಗೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ಮುಷ್ಕರಕ್ಕೂ ಮುನ್ನ ಪ್ರಮುಖ ಬ್ಯಾಂಕಿಂಗ್ ಕೆಲಸ ಮುಗಿಸಲು SBI ಸಲಹೆ ನೀಡಿದೆ.
ಚೆಕ್, ದಾಖಲೆ ಸಲ್ಲಿಕೆ ಸೇರಿ ಶಾಖೆ ಆಧಾರಿತ ಸೇವೆಗಳಿಗೆ ವಿಳಂಬವಾಗಬಹುದು. ಆದ್ದರಿಂದ ATM, ADWM, CSP ಸೇವೆ ಬಳಸುವಂತೆ ತಿಳಿಸಿದೆ. YONO, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, UPI ಬಳಕೆಗೆ ಸಲಹೆ ನೀಡಿದೆ. ತುರ್ತು ವಹಿವಾಟುಗಳನ್ನು ಕೊನೆಯ ಕ್ಷಣಕ್ಕೆ ಮುಂದೂಡದಂತೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ
ಐದು ದಿನಗಳ ಅವಧಿಗೆ ಗ್ರಾಹಕರು ಮುಂಚಿತವಾಗಿ ಸಿದ್ಧರಾಗುವಂತೆ ಸೂಚನೆ ನೀಡಿದೆ. ಮುಷ್ಕರಕ್ಕೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ UFBU ಕರೆ ನೀಡಿದೆ.

