– ಬೆಂಗಳೂರು ನಗರದ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ
– A-ಖಾತಾ ರಾಜ್ಯಕ್ಕೆ ವಿಸ್ತರಣೆ; ಇಡೀ ರಾಜ್ಯಕ್ಕೆ ಡಿಕೆಶಿ ಭೂ ಗ್ಯಾರಂಟಿ
ಬೆಂಗಳೂರು: ಮುಖ್ಯಮಂತ್ರಿಯಾಗುತ್ತಿದ್ದಂತೆ ಡಿ.ಕೆ ಶಿವಕುಮಾರ್ (DK Shivakumar) ಅವರು ರಾಜ್ಯದ ಜನತೆಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ರಾಜ್ಯಾದ್ಯಂತ 2,500 ಚದರ ಅಡಿವರೆಗೆ ಒಸಿ (Occupancy Certificate) ವಿನಾಯ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಇಂದು ಮೊದಲ ಕ್ಯಾಬಿನೆಟ್ ಸಭೆ (Cabinet Meet) ನಡೆಸಿದರು. ಬಳಿಕ ಮಾತನಾಡಿ, ಇಡೀ ರಾಜ್ಯಕ್ಕೆ ಡಿಕೆಶಿ ಭೂ ಗ್ಯಾರಂಟಿ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ 10,000 ಭಾರತ್ ಜೋಡೋ ಯುವಕರ ಸಂಘ ಸ್ಥಾಪನೆ – ಪ್ರತಿ ಸಂಘಕ್ಕೆ 10 ಲಕ್ಷ ರೂ.: ಸಿಎಂ ಡಿಕೆಶಿ

ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಎಸ್ಕಾಂಗಳು ವಿದ್ಯುತ್ ಸಂಪರ್ಕ ಪಡೆಯಲು ಓಸಿ ಕಡ್ಡಾಯ ಮಾಡಿದ್ದವು. ಸುಪ್ರೀಂ ಕೋರ್ಟ್ ಆದೇಶ ವಿದ್ಯುತ್ ಸಂಪರ್ಕ ಪಡೆಯುವವರಿಗೆ ಸಮಸ್ಯೆ ಆಗುತ್ತಿತ್ತು. ಈ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ನಿರ್ಧಾರ ಮಾಡಿದೆ. OC-CC ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ರಾಜ್ಯಾದ್ಯಂತ 2,500 ಚದರ ಅಡಿವರೆಗೆ ಒಸಿ ವಿನಾಯ್ತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
2,500 ಅಡಿವರೆಗೂ 20% ಆಚೆ-ಈಚೆ ಇದ್ದರೂ ಒನ್ ಟೈಂ ಒಸಿ ವಿನಾಯ್ತಿಗೆ ನಿರ್ಧರಿಸಲಾಗಿದೆ. ಕಳೆದ ತಿಂಗಳು 31 ಒಳಗೆ ಅರ್ಜಿ ಹಾಕಿರೋರಿಗೆ ಅವಕಾಶ ಕೊಡುತ್ತೀವೆ. ಅಲ್ಲದೇ ನಗರ, ಗ್ರಾಮೀಣ ಎಲ್ಲಾ ಭಾಗದ ಜನರಿಗೆ ರಿಲೀಫ್ ಕೊಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪಾಸ್ – ಸಿಎಂ ಆಗಿ ಡಿಕೆಶಿ ಮೊದಲ ಘೋಷಣೆ
ನೂತನ ಸಿಎಂ ಕ್ಯಾಬಿನೆಟ್‌ನ ಪ್ರಮುಖ ನಿರ್ಧಾರಗಳು
> ಪಿಜಿವರೆಗೂ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್.
> 56 ಸಾವಿರ ಉದ್ಯೋಗ ನೇಮಕಾತಿಗೆ ಶೀಘ್ರವೇ ಕ್ಯಾಲೆಂಡರ್ ಬಿಡುಗಡೆ
> ಖಾಸಗಿ ಉದ್ಯೋಗಾಂಕ್ಷಿಗಳ ನೆರವಿಗೆ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ
> ಕನ್ನಡಿಗರಿಗೆ ಮೀಸಲಾತಿ ಶೇಕಡವಾರು ಬಗ್ಗೆ ನಿರ್ಧರಿಸಲಾಗುತ್ತೆ
> ನಿರುದ್ಯೋಗ ಸಮಸ್ಯೆ ನಿವಾರಣೆಗೆ 3 ಜನ ಸಚಿವರ ಸಮಿತಿ
> ಯುವಕರಲ್ಲಿ ಸೌಹಾರ್ದತೆ ಬಲವರ್ಧನೆಗೆ 10 ಸಾವಿರ ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ
> ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಭಾರತ್ ಜೋಡೋ ಯುವ ಕ್ಲಬ್‌ಗೆ 10 ಲಕ್ಷ ರೂ.
> ಸರ್ಕಾರದಿಂದಲೇ ಉದ್ಯೋಗ ಹುಡುಕೋರಿಗಾಗಿ ಪ್ರೈವೇಟ್ ಎಂಪ್ಲಾಯಿಮೆಂಟ್ ಎಕ್ಸ್ ಚೇಂಜ್ ಸ್ಥಾಪನೆ.
> 2500 ಅಡಿವರೆಗೂ ಕಟ್ಟಡಗಳಿಗೆ ವಿದ್ಯುತ್ ಪಡೆಯಲು ಅವಕಾಶ. ಮೇ 31ರ ಒಳಗೆ ಅರ್ಜಿ ಹಾಕಿರೋರಿಗೆ, ಒನ್ ಟೈಂ ಸ್ಕೀಂ.
> ಬಿ ಖಾತಾಯಿಂದ ಎ ಖಾತಾ ರಾಜ್ಯಕ್ಕೆ ವಿಸ್ತರಣೆ
> ಬೆಂಗಳೂರು ನಗರಕ್ಕೆ ಡಾಂಬರೀಕರಣ ಮಾಡಲು 2 ಸಾವಿರ ಕೋಟಿ ಅನುದಾನ
